ಸೂಕ್ತ ಭದ್ರತೆ ಒದಗಿಸುವಂತೆ ಮನವಿ

ಉಡುಪಿ: ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ 3 ಬಾರಿ ಹುಸಿ ಬಾಂಬ್ ಬೆದರಿಕೆಯ ಬಂದಿರುವ ಹಿನ್ನಲೆಯಲ್ಲಿ ಸೋಮವಾರ, ಉಡುಪಿ ವಕೀಲರ ಸಂಘದ ಪ್ರತಿನಿಧಿಗಳು ನ್ಯಾಯಾಧೀಶರ, ವಕೀಲರ, ನ್ಯಾಯಾಲಯ ಸಿಬ್ಬಂದಿ ಮತ್ತು ಕಕ್ಷಿಗಾರರುಗಳ ಹಿತದೃಷ್ಟಿಯಿಂದ ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ್ ಅವರನ್ನು ಭೇಟಿಯಾಗಿ, ತನಿಖೆ ನಡೆಸಿ ನ್ಯಾಯಾಲಯಗಳಿಗೆ ಬಂದೋಬಸ್ತ್ ಒದಗಿಸುವಂತೆ ಮನವಿ ನೀಡಿದ್ದಾರೆ. ಬೇಡಿಕೆಗೆ ಸಕಾರತ್ಮಕವಾಗಿ ಸ್ಪಂದಿಸಿ ಶೀಘ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ವಕೀಲರ ಸಂಘದ ಪ್ರಧಾನ ಚಂದ್ರಶೇಖರ್ ಶೆಟ್ಟಿ, ವಕೀಲರುಗಳಾದ ವೈ.ಟಿ ರಾಘವೇಂದ್ರ, ಅಖಿಲ.ಬಿ.ಹೆಗ್ಡೆ, ಗುರುರಾಜ್ ಜಿ.ಎಸ್., ಅನಿಲ್ ಪೂಜಾರಿ, ಕವಿತಾ, ನಾಗರಾಜ್ ಕೆ, ಬಾನುಮತಿ ನಾಯರಿ, ಅಜಿತ್ ಜೋಗಿ ಮತ್ತಿತರರು ಉಪಸ್ಥಿತರಿದ್ದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”