10 ದಿನದ ಅಂತರದಲ್ಲಿ ಎರಡನೇ ಬಾರಿಗೆ ಬೆದರಿಕೆ ಇಮೇಲ್

ಉಡುಪಿ: ನಗರದ ಹೃದಯಭಾಗದಲ್ಲಿರುವ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಶುಕ್ರವಾರ ಮತ್ತೇ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಉಡುಪಿ ಜಿಲ್ಲಾ ನ್ಯಾಯಾಲಯದ ಇಮೇಲ್ ಐಡಿಗೆ ಜೂ.26 ( ಗುರುವಾರ) ರಾತ್ರಿ 8.53 ರ ವೇಳೆಗೆ ಬಾಂಬ್ ಬೆದರಿಕೆ ಬಂದಿದ್ದು, ಶುಕ್ರವಾರ (ಜೂ.26) ರ ಮಧ್ಯಾಹ್ನ 12 ಗಂಟೆಗೆ ಕ್ಕೆ ಇಮೇಲ್ ಗಮನಿಸಿದ್ದು, ತಕ್ಷಣ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದ್ದು, ಶ್ವಾನದಳ ಹಾಗು ಬಾಂಬ್ ತಪಾಸಣಾ ದಳ ಆಗಮಿಸಿ ತಪಾಸಣೆ ನಡೆಸಿದೆ. ಸ್ಥಳಕ್ಕೆ ಉಡುಪಿ ನಗರಠಾಣಾ ನಿರೀಕ್ಷಕ ಪಿಎಸ್ಐಗಳಾದ ಭರತೇಶ್, ಈರಣ್ಣ, ಸಿಬ್ಬಂದಿ ಬಶೀರ್ ಸೇರಿದಂತೆ ಸಿಬ್ಬಂದಿಗಳು ಬಂದೋಬಸ್ತ್ ಕಾರ್ಯದಲ್ಲಿ ತೊಡಗಿದ್ದರು. ಇಮೇಲ್ನಲ್ಲಿ ಏನಿದೆ...? ದುರ್ಗಾ ಸ್ಟಾಲಿನ್ ಅವರು ಪ್ರೋಪೆಟ್ ಮಹಮ್ಮದ್ ಅವರನ್ನು ನಿಂದಿಸಿದ್ದಾರೆ. ಹೀಗಾಗಿ 5 ಸಿಲಿಕಾನ್ ಡೈನಮೇಟ್ ಬಾಂಬ್ಗಳನ್ನು ಜಿಲ್ಲಾ ನ್ಯಾಯಾಲಯ ರೆಕಾರ್ಡ್ ರೂಮ್ ಹಾಗು ಮೊದಲ ಮಹಡಿಯಲ್ಲಿರುವ ಇ - ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಬರೆಯಲಾಗಿದೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”