ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದಾರೆ.

ಉಡುಪಿ: ನಗರದ ಡಿ-ಮಾರ್ಟ್ ಮಳಿಗೆಯಲ್ಲಿ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯನ್ನು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗು ಪೋಕ್ಸೊ ನ್ಯಾಯಾಲಯವು ದೋಷಿ ಎಂದು ಆದೇಶಿಸಿದೆ. ಆರೋಪಿಯನ್ನು ಲೂಯಿಸ್ ರಂಜಲ್ (71) ಎಂದು ಗುರುತಿಸಲಾಗಿದೆ.
2025 ರ ಜು.12 ರಂದು ಸಂತ್ರಸ್ತ ಬಾಲಕಿ ತಾಯಿಯೊಂದಿಗೆ ನಗರದ ಡಿ-ಮಾರ್ಟ್ಗೆ ತೆರಳಿದ್ದಾಗ ಆರೋಪಿಯೂ ಬಾಲಕಿಗೆ ಹಿಂದಿನಿಂದ ಬಂದು ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಗಾಬರಿಗೊಂಡ ಬಾಲಕಿ ಹಿಂತಿರುಗಿದಾಗ ಕ್ಷಮೆ ಕೇಳಿದ್ದಾನೆ. ನಂತರ ಪುನಃ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ್ ಸುವರ್ಣ, ಪೋಕ್ಸೊ ಕಾಯ್ದೆಯ ಸೆಕ್ಷನ್ 8 ಹಾಗು ಸೆಕ್ಷನ್ 12 ರ ಅಡಿಯಲ್ಲಿ ಆರೋಪಿಗೆ 3 ವರ್ಷ ಸಾಧಾರಣ ಜೈಲು ಶಿಕ್ಷೆ ಹಾಗು ₹ 3 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡದ ಮೊತ್ತದಲ್ಲಿ ₹ 1 ಸಾವಿರ ಸರಕಾರಕ್ಕೆ ಹಾಗು ₹ 2 ಸಾವಿರ ಸಂತ್ರಸ್ತೆಗೆ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದಾರೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”