50 ಕ್ಕೂ ಹೆಚ್ಚು ಶಿಷ್ಯರನ್ನು ಹೊಂದಿರುವ ಉಡುಪಿಯ ಏಕೈಕ ವಕೀಲ

ಉಡುಪಿ: ಅಧಿವ್ಯಕ್ತ ಪರಿಷತ್ ಉಡುಪಿ ಜಿಲ್ಲೆ ವತಿಯಿಂದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಹಾಗು ಉಡುಪಿ ಜಿಲ್ಲಾ ಉಸ್ತುವಾರಿ ಶ್ವೇತಾ ಜೈನ್ ಅವರು ಗುರುವಾರ ಉಡುಪಿ ಪ್ರವಾಸ ಕೈಗೊಂಡು, ಹಿರಿಯ ವಕೀಲ ಮಟ್ಟಾರ್ ರತ್ನಾಕರ್ ಹೆಗ್ಡೆಯವರಿಗೆ ಗುರುವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಧಿವ್ಯಕ್ತ ಪರಿಷತ್ ಉಡುಪಿ ಜಿಲ್ಲೆ ಅಧ್ಯಕ್ಷ ಸಂತೋಷ್ ಹೆಬ್ಬಾರ್, ಕಾರ್ಯದರ್ಶಿ ಆರೂರು ಸುಕೇಶ್ ಶೆಟ್ಟಿ, ಸದಸ್ಯರಾದ ಶಶಿರಾಜ್ ಪೈಯಾರ್, ರಾಜೇಶ್ ಎಆರ್, ಗಿರೀಶ್ ಎಸ್ಪಿ, ನಿತೇಶ್ ಶೆಟ್ಟಿ ಮಟ್ಟಾರ್, ಜಯಂತ್ ರಾವ್, ಸುಜಿತಾ ಅರುಣ್ ಶೆಟ್ಟಿ, ರವೀಂದ್ರ ಬೈಲೂರು, ನಿತೀಶ್ ಶೆಟ್ಟಿ ಮಟ್ಟಾರ್, ಯತಿರಾಜ್, ಬಿಜೆಪಿ ಓಬಿಸಿ ಮೋರ್ಚಾ ಕಾಪು ಮಂಡಲ ಅಧ್ಯಕ್ಷ ಸಂತೋಷ್ ಮೂಡುಬೆಳ್ಳೆ ಉಪಸ್ಥಿತರಿದ್ದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”