ನಕ್ಸಲೈಟ್ ಸಂಘಟನೆಯ ದಕ್ಷಿಣ ಕೋಶದ ಎಸ್.ಮಾರನ್ನಿಂದ ಇಮೇಲ್ ಬೆದರಿಕೆ

ಉಡುಪಿ: ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಹುಸಿ ಬಾಂಬ್ ಬೆದರಿಕೆ ಬಂದಿದ್ದು, ಜಿಲ್ಲಾ ಪೋಲಿಸ್ ಇಲಾಖೆ, ಶ್ವಾನದಳ ಕಾರ್ಯಾಚರಣೆ ನಡೆಸಿತು. ಉಡುಪಿ ಜಿಲ್ಲಾ ನ್ಯಾಯಾಲಯದ ಇಮೇಲ್ ಐಡಿಗೆ ಜೂ.21 ( ಭಾನುವಾರ) ಸಂಜೆ 6.33 ರ ಆರ್ಡಿಎಕ್ಸ್ ಬಾಂಬ್ ಬೆದರಿಕೆ ಬಂದಿದ್ದು, ಸೋಮವಾರ (ಜೂ.22) ರ ಬೆಳಗ್ಗೆ 10.30 ಕ್ಕೆ ಇಮೇಲ್ ಗಮನಿಸಿದ್ದು, ತಕ್ಷಣ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿ, ತಪಾಸಣೆ ನಡೆಸಲಾಗಿದೆ.
ಆರ್ಡಿಎಕ್ಸ್ 2 + 2 ಬಾಂಬ್ ಉಡುಪಿ ಹಾಗು ತಂಜಾವೂರು ನ್ಯಾಯಾಲಯದ ನ್ಯಾಯಾಧೀಶರ ಚೇಂಬರ್ ಹಾಗು ಶೌಚಾಲಯಗಳಲ್ಲಿ ಇಡಲಾಗಿದೆ. ಮಧ್ಯಾಹ್ನ 2 ಗಂಟೆಯ ಏಕಕಾಲದಲ್ಲಿ ಬ್ಲಾಸ್ಟ್ ಆಗಲಿದೆ ಎಂದು ಇಮೇಲ್ನಲ್ಲಿ ಬೆದರಿಕೆ ಬಂದಿದೆ. ಉದಯನಿಧಿ ಸ್ಟಾಲಿನ್ (49) 2023 ರಲ್ಲಿ ನಿರ್ಭಯ ಎಂಬಾಕೆಯನ್ನು ಅತ್ಯಾಚಾರ ಮಾಡಿ, ಕಿರುಕುಳ ನೀಡಿದ್ದಾರೆ. ಎಲ್ಲಾ ಸಾಕ್ಷಿಗಳು ಎಡ್ಲ್ಯೂಪಿಎಸ್ (AWPS) ಮತ್ತು ಕೇರಳ ಪೊಲೀಸರ ಬಳಿ ಇವೆ. ಚೆನ್ನೈನ ಸವೇರಾ ಹೋಟೆಲ್ನಲ್ಲಿ ನಡೆದ ಘಟನೆಗಳು, AWPS ವಿವಿಧ ಮಹಿಳಾ ಹಕ್ಕುಗಳ ಗುಂಪುಗಳಿಗೆ ಕಳುಹಿಸಲಾದ ದೂರುಗಳ ವಿವರಗಳನ್ನು ಸಂಗ್ರಹಿಸಲು ಕೇರಳ ಪೊಲೀಸರೊಂದಿಗೆ ಪ್ರತಿಕ್ರಿಯಿಸಿದೆ. ಪ್ರಬಲ ಅತ್ಯಾಚಾರಿಗಳ ವಿರುದ್ಧ ಮಹಿಳೆಯರಿಗೆ ನ್ಯಾಯ ಸಿಗದ ಕಾರಣ, ಉದಯನಿಧಿ ವಿರುದ್ದ ನಾವು ದಕ್ಷಿಣದ ನಕ್ಸಲೈಟ್ ಕೋಶಗಳು, ವ್ಯವಸ್ಥೆಯ ವಿರುದ್ಧದ ಧಿಕ್ಕಾರದ ಸಂಕೇತವಾಗಿ ನ್ಯಾಯಾಲಯಗಳು/ನ್ಯಾಯಾಧೀಶರನ್ನು ಅಮಾನತ್ತುಗೊಳಿಸಲು ನಿರ್ಧರಿಸಿದ್ದೇವೆ. ಇಂಕಿಲಾಬ್ ಜಿಂದಾಬಾದ್ ಟಿಎನ್ಎಲ್ಎ ಎಸ್. ಮಾರನ್ ಎಂಬ ಹೆಸರಿನಿಂದ ಇಮೇಲ್ ಬಂದಿದೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”