ಬಂಧನ ಕುರಿತು ನ್ಯಾಯಾಲಯಕ್ಕೆ ಆರೋಪಿಸಿದ ಕೆಪಿ
ಉಡುಪಿ: ಮಾಜಿ ರೌಡಿಶೀಟರ್ ಡೇವಿಡ್ ಡಿಸೋಜಾನನ್ನು ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಭೂಗತ ಪಾತಕಿ ಹೇಮಂತ್ ಪೂಜಾರಿ ಸಹೋದರ ಕಿಶೋರ್ ಪೂಜಾರಿ (ಕೆಪಿ) ಹಾಗು ಸದಾನಂದ ಕುತ್ಯಾರ್ನನ್ನು ಬಂಧಿಸಿ ಶುಕ್ರವಾರ ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶ ಹಾಗು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ನ್ಯಾಯಧೀಶ ಎಮ್.ಪುರುಷೋತ್ತಮ್ ಅವರ ಮುಂದೆ ಹಾಜರುಪಡಿಸಲಾಯಿತು. ಶಿರ್ವ ಠಾಣೆಯ ಅಧಿಕಾರಿಗಳು ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತು.
ಆಗಸ್ಟ್ 10 ರಂದು ಬಂಧಿಸಲಾಗಿದೆ ಎಂದು ಆರೋಪಿಗಳು ನ್ಯಾಯಾಲಯಕ್ಕೆ ತಿಳಿಸಿದರು. ಆರೋಪಿ ಕಿಶೋರ್ ಪೂಜಾರಿ ಪರ ವಕೀಲರು, ಕಿಶೋರ್ ಪೂಜಾರಿ ಅವರಿಗೆ ಗಂಭೀರವಾದ ಅನಾರೋಗ್ಯವಿದೆ. ಹಾಗು ಮನೆಯ ಸಿಸಿಟಿವಿಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಮಾಹಿತಿ ನೀಡಿದರು.
ಈ ವೇಳೆ ನ್ಯಾಯಾಧೀಶರು ಪೋಲಿಸರಿಗೆ, ತನಿಖೆಗೆ ಬೇಕಿದ್ದಲ್ಲಿ ಪೋಲಿಸ್ ಕಸ್ಟಡಿಗೆ ಕೇಳಬಹುದಿತ್ತು. ಯಾಕೇ ಹೀಗಾಯಿತು..? ಎಂದು ಪ್ರಶ್ನಿಸಿದರು. ತನಿಖಾಧಿಕಾರಿಯವರಿಗೆ ವಿವರಣೆ ನೀಡಲು ಮೌಖಿಕವಾಗಿ ಸೂಚಿಸಿದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”