ಕೊಲೆ ಮಾಡಿ 112ಕ್ಕೆ ಕರೆ ಮಾಡಿದ ಶಾಹಿದ್

ಬ್ರಹ್ಮಾವರ: ಹಲೋ, ಪೋಲಿಸ್ ಸ್ಟೇಷನ್..? ಗಾಂಧಿನಗರದ ನಮ್ಮ ಮನೆಯಲ್ಲಿ ಕೊಲೆ ಮಾಡಿದ್ದೇನೆ. ಬನ್ನಿ ಎಂದವನ ಧ್ವನಿಯಲ್ಲಿ ಯಾವುದೇ ದುಃಖ, ದುಮ್ಮಾನ ಇರಲಿಲ್ಲ. ಸ್ಥಳಕ್ಕೆ ಬಂದ ಪೋಲಿಸರ ಹೃದಯ ಮಾತ್ರ ಒಡೆದು ಚುರಾಗಿತ್ತು...! ಅದೆಂಥಾ ಘೋರ ಕೃತ್ಯವೆಂದರೇ ಕುಂಬಳ ಕಾಯಿಯನ್ನು ರಸ್ತೆಗೆ ಒಡೆದರೇ ಛಿದ್ರ ಛಿದ್ರವಾಗುವಂತೆ ಅಪ್ಪ, ಅಪ್ಪನ ದೇಹವನ್ನು ಪುಡಿ ಮಾಡಿದ್ದ ಪಾಪಿ ಮಗ..! ಹೌದು, ಸೋಮವಾರ ಬೆಳಗ್ಗೆ ಗಾಂಧಿನಗರದ ಹಂಚಿನ ಮನೆಯ ಒಳಗೆ ಪ್ರವೇಶಿಸಿದ್ದ 112 ಸಿಬ್ಬಂದಿಗಳಿಗೆ ಎದುರಾದ್ದದ್ದು ತಂದೆ ಹಾಗು ತಾಯಿಯ 2 ಮೃತದೇಹಗಳು. ಕೊಂದವನು ಮಗ. ಕಣ್ಣಮುಂದೆಯೇ ಇದ್ದ. ಮೃತರನ್ನು ತಂದೆ ಮೆಹಬೂಬ್ ಅಲಿ (55) ಹಾಗೂ ತಾಯಿ ಸಂಶದ್ ಬೇಗಂ (50) ಎಂದು ಗುರುತಿಸಲಾಗಿದೆ. ಆರೋಪಿ ಮಗನಾದ ಶಾಹಿದ್ ಅಲಿ (31)ಯನ್ನು ಬ್ರಹ್ಮಾವರ ಪೋಲಿಸರು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದಾಗ, ಆತನು ಹೇಳಿದಿಷ್ಟು.. ಭಾನುವಾರ ಸಂಜೆ 7 ಗಂಟೆಗೆ ಕೊಲೆ ನನ್ನ ತಂದೆ ತಾಯಿಯವರು ಪ್ರತಿನಿತ್ಯ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದರು. ಹೀಗಾಗಿ ಸಂಜೆ 7 ಗಂಟೆಗೆ ಅವರನ್ನು ಕೊಲೆ ಮಾಡಿದ್ದೇನೆ ಎಂದು ತಿಳಿಸಿದ್ದಾನೆ. ಸುತ್ತಿಗೆಯಿಂದ ತಂದೆ ಹಾಗು ತಾಯಿಯ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಸ್ವಿಗ್ಗಿ ಡೆಲಿವರಿ ಬಾಯ್ ಆರೋಪಿ ಶಾಹಿದ್ ಅಲಿ ಸ್ವಿಗ್ಗಿ, ಝೊಮೆಟೋದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದನು. ಸ್ಥಳೀಯರು ಆತನ ಬಗ್ಗೆ ಉತ್ತಮ ಅಭಿಪ್ರಾಯವನ್ನು ಹೊಂದಿದ್ದಾರೆ. ಕುಟುಂಬಿಕರೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇರುವ ಬಗ್ಗೆ ಮಾಹಿತಿಯಿಲ್ಲ. ಆದರೆ ಮಗನು ಸ್ವಲ್ಪ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಬಗ್ಗೆ ಕೇಳಿದ್ದೇವೆ ಎಂದಿದ್ದಾರೆ. ಕೋಟ್ - 1 ಆರೋಪಿಯೇ 112 ಗೆ ಕರೆ ಮಾಡಿ ಕೊಲೆ ಮಾಡಿರುವ ವಿಚಾರವನ್ನು ತಿಳಿಸಿದ್ದಾನೆ. ಆತನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯೂ ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ವೈದ್ಯಕೀಯ ಪರೀಕ್ಷೆಯ ನಂತರ ಈ ಬಗ್ಗೆ ಖಚಿತ ಮಾಹಿತಿ ಸಿಗಲಿದೆ. ಘಟನಾ ಸ್ಥಳದಲ್ಲಿ ಸೋಕೋ ತಂಡ ಸಾಕ್ಷಿಗಳನ್ನು ಸಂಗ್ರಹಿಸುತ್ತಿದೆ. ಹರಿರಾಂ ಶಂಕರ್, ಜಿಲ್ಲಾ ಎಸ್ಪಿ, ಉಡುಪಿ. ಕೋಟ್ - 2 ಮೃತರು ಕುಟುಂಬ ಅನ್ಯೋನ್ಯವಾಗಿತ್ತು. ಯಾರೊಂದಿಗೂ ಭಿನ್ನಾಭಿಪ್ರಾಯ ಇರಲಿಲ್ಲ. ತಂದೆ, ತಾಯಿ, ಮಗ ಉತ್ತಮ ಬಾಂಧವ್ಯ ಹೊಂದಿದ್ದರು. ಆತನು ಹಿರಿಯರಿಗೆ ಗೌರವದಿಂದಲೇ ಮಾತನಾಡಿಸುತ್ತಿದ್ದನು. ಏಕೆ ಹೀಗಾಯಿತು ಗೊತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಮಗ ಸ್ವಲ್ಪ ಮೌನವಾಗಿ ಇರುತ್ತಿದ್ದನು. ಆತನಿಗೆ ಯಾವುದೇ ದುರಾಭ್ಯಾಸ ಇರಲಿಲ್ಲ. ಅಬ್ದುಲ್ ಸತ್ತಾರ್, ಮೃತರ ಸಂಬಂಧಿಕ. ಬಾಕ್ಸ್ ಸ್ಥಳಕ್ಕೆ ಜಿಲ್ಲಾ ಎಸ್ಪಿ ಹರಿರಾಂ ಶಂಕರ್, ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ, ಬ್ರಹ್ಮಾವರ ಸಿಪಿಐ ಗೋಪಿಕೃಷ್ಣ, ಪಿಎಸ್ಐ ಮುಕ್ತಾಬಾಯಿ, ಕೋಟ ಪಿಎಸ್ಐ ಪ್ರವೀಣ್ ಹಾಜರಿದ್ದರು. ಸ್ಥಳೀಯರು ಭಾರೀ ಸಂಖ್ಯೆಯಲ್ಲಿ ತನಿಖಾ ಪ್ರಕ್ರಿಯೆಗಳನ್ನು ವೀಕ್ಷಿಸುತ್ತಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಡೆಯಿತು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”