ಶೂಟರ್ಗಳಿಗೆ ಹಣ ವರ್ಗಾಯಿಸಿದ ಆರೋಪದಲ್ಲಿ ಬಂಧನ

ಉಡುಪಿ: ಮುದರಂಗಡಿಯಲ್ಲಿ ನಡೆದ ಮಾಜಿ ರೌಡಿ ಶೀಟರ್ ಡೇವಿಡ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶೂಟರ್ಗಳಿಗೆ ವರ್ಗಾವಣೆ ಮಾಡಿದ ಆರೋಪದಲ್ಲಿ ಸ್ಥಳೀಯರಾದ ಚಿರಾಗ್ (23) ಹಾಗು ಇರ್ಷಾದ್ (46) ಅವರನ್ನು ಪೋಲಿಸರು ಬಂಧಿಸಿದ್ದಾರೆ. ಚಿರಾಗ್ ಹಾಗು ಇರ್ಷಾದ್ಗೆ ಇಂಟರ್ನೆಟ್ ಕರೆಗಳ ಮೂಲಕ ಹಣವನ್ನು ಯಾವಾಗ, ಯಾವ ವ್ಯಕ್ತಿಯಿಂದ ಪಡೆಯಬೇಕು ಹಾಗು ಯಾರ ಖಾತೆಗೆ ವರ್ಗಾಯಿಸಬೇಕು ಎಂಬ ಬಗ್ಗೆ ತಿಳಿಸಲಾಗುತ್ತಿತ್ತು. ಅದರಂತೆ ಕರೆಯಲ್ಲಿ ತಿಳಿಸಿದ ಸ್ಥಳಕ್ಕೆ ತೆರಳಿ, ಆರೋಪಿ ರಾಜುವಿಗೆ ಹಣವನ್ನು ವರ್ಗಾಯಿಸುತ್ತಿದ್ದರು ಎಂದು ಮೂಲಗಳು ಮಾಹಿತಿ ನೀಡಿದೆ. ಪ್ರಕರಣ ನೇರವಾಗಿ ಭಾಗಿಯಾದ ಶೂಟರ್ಗಳ ಖಾತೆಯನ್ನು ಪರಿಶೀಲಿಸಿದಾಗ, ಸ್ಥಳೀಯ ಆರೋಪಿಗಳು ಹಣ ವರ್ಗಾಯಿಸಿರುವುದು ಬೆಳಕಿಗೆ ಬಂದಿದೆ. ನಂತರ ಇಬ್ಬರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸತ್ಯ ಸಂಗತಿ ಬಹಿರಂಗಗೊಂಡಿದೆ.
“ಆರೋಪಿಗಳಾದ ಚಿರಾಗ್ ಹಾಗು ಇರ್ಷಾದ್ನನ್ನು ಬುಧವಾರ ಮಧ್ಯಾಹ್ನ ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶ ಹಾಗು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ನ್ಯಾಯಧೀಶ ಎಮ್.ಪುರುಷೋತ್ತಮ್ ಅವರ ಮುಂದೆ ಹಾಜರು ಪಡಿಸಲಾಯಿತು. ”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”