ದುಬಾರಾ ಕರ್ತೆ ಪೋನ್ ಉಟಾ

ಬಾಂಬೆ: ಸೇಠ್ ಕೋ ಬೋಲ್ HP ಕಾ ಫೋನ್ ಹೇ..! H for Hemanth, P for Poojary ಎಂದು ಪರಿಚಯಿಸಿಕೊಂಡವನು ದಶಕಗಳ ಕಾಲ ಬಾಂಬೆ ಅಂಡರ್ವಲ್ಡ್ ಆಳಿದವನು. ಬಾಂಬೆಯ ಪೋಲಿಸ್ ಅಧಿಕಾರಿ ವಿಜಯ್ ಸಾಲ್ಕೆಸರ್ ನಿದ್ರೆ ಕೆಡೆಸಿದವನೆಂದೂ, ಸಂಬಳಕ್ಕೆ ದುಡಿಯುತ್ತಿದ್ದ ಬಡಪಾಯಿಗೇ ಗೊತ್ತಿರಲಿಕ್ಕಿಲ್ಲ..! ದಶಕಗಳಿಂದ ಸತ್ತಿದ್ದಾನೆ ಎಂದು ನಂಬಲಾಗಿದ್ದ ಹೇಮಂತ್ ಪೂಜಾರಿ ಹೆಸರು ಆಗಸ್ಟ್ 7 ರಂದು ಮುದರಂಗಡಿಯಲ್ಲಿ ಮಾಜಿ ರೌಡಿಶೀಟರ್ ಡೇವಿಡ್ನನ್ನು ಗುಂಡಿಕ್ಕಿ ಹತ್ಯೆಗೈದ ಬಳಿಕ ಮುನ್ನಲೆಗೆ ಬಂದಿತ್ತು.
ಇದೀಗ ದುಬೈ, ಬಾಂಬೆ ಹಾಗು ಎರ್ಮಾಳಿನಲ್ಲಿರುವ ಐಷರಾಮಿ ಹೋಟೆಲ್ ಮಾಲೀಕರೊಂದಿಗೆ ಮಾತನಾಡಲು, ಅವರ ಆಪ್ತ ಸಹಾಯಕರಿಗೆ ಕರೆ ಮಾಡಿರುವುದು ಆತನು ಬದುಕಿದ್ದಾನೆ ಎಂಬ ಅನುಮಾನಕ್ಕೆ ಮತ್ತಷ್ಟು ಬಲ ತುಂಬಿದೆ. ಎಂದಿನಂತೆ ಯಾರೋ, ಮಾಲೀಕರನ್ನು ಮಾತನಾಡಿಸಲು ಕರೆ ಮಾಡಿದ್ದಾರೆ ಎಂಬಂತೆಯೇ ಭೂಗತಲೋಕದ ಪಾತಕಿಯ ಜೊತೆಗೆ ಅವರು ಮಾತನಾಡಿದ್ದರು. ತನ್ನ ಹೆಸರನ್ನು ತಪ್ಪಾಗಿ ಉಚ್ಚರಿಸಿದಾಗ, HP ಗೆ ತನ್ನ ಹೆಸರನ್ನು ಸ್ಪಷ್ಟವಾಗಿ ತಿಳಿಸಿದ್ದರು. ನಂತರ HP ಎಂದರೇ ಏನು ಎಂಬ ಪ್ರಶ್ನೆಗೆ H for Hemanth, P for Poojary ಎಂದು ತಿಳಿಸಿದ ಪಾತಕಿಯೂ ನಿನ್ನ ಸೇಠ್ಗೆ ಮಾತನಾಡಿಸು ಎಂದು ಆದೇಶಿಸಿದ್ದಾನೆ.
ಅವರು ಮೇಲಿನ ಮಹಡಿಯಲ್ಲಿದ್ದು, ನಿಮಗೆ ವಾಪಾಸು ಕರೆ ಮಾಡಿಸುವುದಾಗಿ ವ್ಯಕ್ತಿಯೂ ತಿಳಿಸಿದಾಗ, HP ಹೇಳುತ್ತಾನೆ, "ಥೂ ಏಕ್ ಕಾಮ್ ಕರ್. ಸೇಠ್ ಕೋ ಬೋಲ್ HP ಕಾ ಫೋನ್ ಆಯಾ ಥಾ. ಅಗರ್ ಉಸ್ಕೋ ಸಮಜ್ಮೇ ನಹೀ ಆಯಾ HP ಕೌನ್..? ಬಹುತ್ ಸಾಲ್ ಬಾದ್ ಬಾತ್ ಕರ್ಲೆ ಅಲೆವೋ, ಬೋಲ್ ನಾ ಉಸ್ಕೋ "ಹೇಮಂತ್ ಪೂಜಾರಿ" ಕಾ ಕಾಲ್ ಆಯಾ ಥಾ. ಸೇಠ್ ಕೋ ಬೋಲ್ ಯಾದ್ ಕೀಯಾ ಕರ್ಕೇ ಸಮಜಾ..?
10 ಮಿನಿಟ್ ದುಬಾರಾ ಕರ್ತೆ ಪೋನ್ ಉಟಾ, ಪೋನ್ ನಹಿ ಉಟಾಯಾ..? ತುಮ್ ಲೋಗೊ ನೇ ಸೇ ಕಿಸಿಕೋ ಉಟಾ ದಾಲೇಗಾ ಫಿರ್. ಸಮಜಾ..? ಎಂದು ಖಡಕ್ ಎಚ್ಚರಿಕೆ ನೀಡಿ ಪೋನ್ ಕಟ್ ಮಾಡುತ್ತಾನೆ.
“ಆಡಿಯೋದಲ್ಲಿ ಹೇಮಂತ್ ಪೂಜಾರಿ ಎಂದು ಮಾತನಾಡುತ್ತಿರುವ ವ್ಯಕ್ತಿಯೇ ನಿಜವಾದ ಹೇಮಂತ್ ಪೂಜಾರಿಯ ಎಂದು ಹೇಳಲು ಸಾಧ್ಯವಿಲ್ಲ. ಆತನ ಹೆಸರನ್ನು ಬಳಸಿ ಮೂರನೇ ವ್ಯಕ್ತಿ ಕರೆ ಮಾಡಿದ್ದಾರೆಯೇ...? HP ನಿಜವಾಗಿಯೂ ಬದುಕಿದ್ದಾನೆಯೇ..? ಬದುಕಿದ್ದಾರೆ ಒಂದು ದಶಕಗಳ ಕಾಲ ಎಲ್ಲಿದ್ದ..? ಹೇಗಿದ್ದ..? ಎಂಬ ಬಗ್ಗೆಯೂ ದಾಖಲೆಗಳು ಇಲ್ಲಾ. ಈ ಎಲ್ಲಾ ಅಂಶಗಳು ಪೋಲಿಸ್ ತನಿಖೆಯಿಂದಷ್ಟೇ ಹೊರಬೀಳಲು ಸಾಧ್ಯ. ”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”