ಡೇವಿಡ್ ಕೊಲೆ ಕೇಸ್ ಎರಡನೇ ಗುಂಡು

ಉಡುಪಿ: ಇನ್ನೇನು ಅಂಡರ್ವಲ್ಡ್ನ ಬದುಕುಳಿದ ಡಾನ್ಗಳು ವಯಸ್ಸಾಗಿ ಅಪರಾಧ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಇರುವ ಕೆಲವೇ ಕೆಲವು "ಭಾಯ್"ಗಳು ಆಗೊಮ್ಮೆ-ಈಗೊಮ್ಮೆ ಉದ್ಯಮಿಗಳಿಗೆ ಕರೆ ಮಾಡಿ ಹಫ್ತಾ ಕೇಳುತ್ತಿರುತ್ತಾರೆ ಎಂದು ಖಾಕಿ ನಂಬಿತ್ತು. ಆದರೆ ಮತ್ತೇ ಅದರಲ್ಲೂ ಸತ್ತಿದ್ದಾನೆ ಎಂದು ಭಾವಿಸಿದ್ದ ಶಾರ್ಪ್ ಶೂಟರ್ ಹಾಗು ಡಾನ್ HP ಯ ಇಶಾರೆಯ ಮೇರೆಗೆ ಶಿರ್ವ ಠಾಣಾ ವ್ಯಾಪ್ತಿಯ ಮುದರಂಗಡಿಯಲ್ಲಿ ಹಾಡಹಗಲೇ ಮಾಜಿ ರೌಡಿಶೀಟರ್ನನ್ನು 9 mm ಪಿಸ್ತೂಲಿನಿಂದ ಹೊಡೆದುರುಳಿಸಿತ್ತಾರೆ ಎಂದು ಊಹಿಸಿರಲಿಲ್ಲ. ಆಗಸ್ಟ್ 7 ರಂದು ಮುದರಂಗಡಿಯಲ್ಲಿ ಹತನಾದ ಡೇವಿಡ್ ಹತ್ಯೆಯ ತನಿಖೆಗೆ ಇಳಿದ ಪೋಲಿಸರಿಗೆ ಶಾಕ್ ಕಾದಿತ್ತು. HP ಯೇ ಈ ಹತ್ಯೆಯನ್ನು ಮಾಡಿಸಿದ್ದಾನೆ ಎಂಬ ಮಾಹಿತಿಯನ್ನು ಅರಸಿಕೊಳ್ಳಲು ಕೆಲವು ದಿನಗಳು ಹಿಡಿದವು. ನಂತರ ನಡೆದದ್ದೆಲ್ಲವೂ ರೋಚಕ. ಮೊದಲ ದಿನವೇ ಕಾಪು ಪಿಎಸ್ಐ ತೇಜಸ್ವಿಯವರ ಬಂದೂಕಿನಿಂದ ಸಿಡಿದ ಗುಂಡು ಶೂಟರ್ ರಾಜುವಿನ ಕಾಲನ್ನು ಸೀಳಿ ಹಾಕಿತ್ತು..! ಅದು ದಶಕಗಳ ನಂತರ ಹೇಮಂತ್ ಪೂಜಾರಿಯ ಶೂಟರ್ಗೆ ಬಿದ್ದ ಮೊದಲ ಗುಂಡು. ಈಗ ಮತ್ತೇ HP ಗ್ಯಾಂಗಿನ ಮತ್ತೊಮ್ಮ ಶೂಟರ್, ನಟೋರಿಯಸ್ ಅನೂಜ್ ಕಾಲಿಗೆ ಗುಂಡು ಹಾರಿದೆ. ಇದು HP ಗೆ ಉಡುಪಿ ಪೋಲಿಸರು, ಬಾಂಬೆಯ ಪೋಲಿಸರಿಗಿಂತ ನಾವೇನು ಕಡಿಮೆ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿದಂತಿದೆ. HP ಗೆ ಮಮಾರ್ಘಾತ ಸೋಮವಾರ ಬೆಳಂಬೆಳಗ್ಗೆ ಆನ್ಲೈನ್ನಲ್ಲಿ ಸುದ್ದಿಯನ್ನು ಓದುವ ಹೇಮಂತ್ ಪೂಜಾರಿಗೆ ಒಂದು ಕ್ಷಣ ಬಾಂಬೆಯ ಆ ದಿನಗಳು ನೆನಪಾಗದೇ ಇರದು. ಪೋಲಿಸ್ ಅಧಿಕಾರಿ "ವಿಜಯ್ ಸಾಲೆಸ್ಕರ್" ಹಾರಿಸಿದ ಗುಂಡಿಗೆ HP ಕಂಪೆನಿಯ ಸಾಲು, ಸಾಲು ಶಾರ್ಪ್ ಶೂಟರ್ಗಳು ಹೆಣವಾಗಿದ್ದರು. ಈಗ ಉಡುಪಿ ಪೋಲಿಸರು ತನ್ನದೇ ಗ್ಯಾಂಗಿನ ಎರಡನೇ ಸದಸ್ಯನಿಗೆ ಗುಂಡು ಹಾರಿಸುವ ಮೂಲಕ ನಡುಕ ಹುಟ್ಟಿಸುತ್ತಿದ್ದಾರೆ ಎಂದು ಭಾವಿಸದೇ ಇರನು. ಶೂಟರ್ಗಳನ್ನು ಕಳುಹಿಸಿದ್ದ ಅನೂಜ್ ಶಿರ್ವ ಠಾಣಾ ವ್ಯಾಪ್ತಿಯ ಮುದರಂಗಡಿಯಲ್ಲಿ ಮಾಜಿ ರೌಡಿಶೀಟರ್ ಡೇವಿಡ್ನನ್ನು ಆಗಸ್ಟ್ 7 ಶೂಟ್ ಮಾಡಿದ್ದ ರಾಜು ಹಾಗು ಆತನ ತಂಡವನ್ನು ಕಳುಹಿಸಿದ್ದು ಇದೇ ಅನೂಜ್. ಈತನನ್ನು ಆರೋಪಿ ಅನೂಜ್ಗೆ ಸೋಮವಾರ, ಹೆಬ್ರಿಯ ಬಳಿ ಮೂತ್ರಕ್ಕೆಂದು ಕೆಳಗಿಸಿದಾಗ ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಕೊಲ್ಲೂರು ಠಾಣೆಯ ಪಿಎಸ್ಐ ವಿನಯ್ ಕೊರ್ಲಹಳ್ಳಿ ಹಾಗು ನಂಜಾ ನಾಯ್ಕ್ ಸರ್ವೀಸ್ ಪಿಸ್ತೂಲಿನಿಂದ ಗುಂಡು ಹಾರಿಸಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕು ರಾಜ್ಯಕ್ಕೆ ಬೇಕಿದ್ದ ನಟೋರಿಯಸ್ ಆರೋಪಿ ಅನೂಜ್ ಗುಜರಾತ್, ಮಹಾರಾಷ್ಟ್ರ, ಗೋವಾ ಹಾಗು ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಕ್ಕೆ ಬೇಕಿದ್ದ "ಮೋಸ್ಟ್ ವಾಂಟೆಡ್". ಕೊಲೆ ಮಾಡಲು ಸುಪಾರಿ ಪಡೆಯುವುದು, ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಈತನು ಖಾಕಿಯ ನಿದ್ದೆಗೆಡಿಸಿದ್ದನು. ಇವನನ್ನು ಜಿಲ್ಲಾ ಪೋಲಿಸರ ತಂಡ 2,471 ಕಿಮೀ ಹೆಚ್ಚು ಪ್ರಯಾಣ ಬೆಳೆಸಿ ಬಂಧಿಸಿದ್ದಾರೆ. MCOCA ಆರೋಪಿ ಬಾಂಬೆ ಪೋಲಿಸರು ಆರೋಪಿ ಅನೂಜ್ನನ್ನು MCOCA ಕಾಯ್ದೆ ಅಡಿಯಲ್ಲಿ ಬಂಧಿಸಿದ್ದು, ಆತನು ಥಾಣೆ ಜೈಲಿನಲ್ಲಿದ್ದನು. 2017 ರಲ್ಲಿ ಬಿಡುಗಡೆಗೊಂಡ ಬಳಿಕ ಮತ್ತೇ ಪೋಲಿಸರಿಗೆ ಸಿಕ್ಕಿಲ್ಲ. ಆದರೆ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದನು ಎನ್ನಲಾಗಿದೆ. ಥಾಣೆ ಜೈಲಿನಲ್ಲಿ ಪರಿಚಯ..? ಆ.7 ರಂದು ಸಂಜೆ ಮುದರಂಗಡಿಯಲ್ಲಿ ತನ್ನದೇ ಥಾರ್ ಕಾರನ್ನು ಹತ್ತುತ್ತಿದ್ದಾಗ, ಶೂಟರ್ ರಾಜು ಹಾರಿಸಿದ ಗುಂಡಿಗೆ ಮಾಜಿ ರೌಡಿಶೀಟರ್ ಡೇವಿಡ್ ಹತನಾಗಿದ್ದ. ನಂತರದ ತನಿಖೆಯಲ್ಲಿ ಬಂಧಿತರಾದ ಮೂವರು ಆರೋಪಿಗಳಾದ ರಾಜು, ಅನ್ಮೋಲ್ ಹಾಗು ಜಿಯಾವುಲ್ಲನನ್ನು ಅನೂಜ್ ಈ ಹಿಂದೆ ಥಾಣೆ ಜೈಲಿನಲ್ಲಿ ಪರಿಚಯಿಸಿಕೊಂಡಿದ್ದ. ಆತನೇ ಡೇವಿಡ್ನನ್ನು ಕೊಲ್ಲಲು ಮೂವರನ್ನು ಕಳುಹಿಸಿದ್ದ ಎನ್ನಲಾಗಿದೆ. ಸೂಪಾರಿ ಪಡೆದದ್ದು ಅನೂಜ್..? ಮಾಜಿ ರೌಡಿಶೀಟರ್ ಡೇವಿಡ್ನನ್ನು ಕೊಲ್ಲಲು ಭೂಗತ ಪಾತಕಿ HP ಅನೂಜ್ಗೆ ಸೂಪಾರಿ ಕೊಟ್ಟಿದ್ದನೇ..? HP ಗೂ ಅನೂಜ್ಗೂ ಹೇಗೆ ಪರಿಚಯ..? ಈ ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಲು ಖಾಕಿ ತಂಡ ಸಿದ್ದತೆಯನ್ನು ನಡೆಸುತ್ತಿದೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”