ಉಡುಪಿ ನಗರದಲ್ಲಿ ಫ್ಲ್ಯಾಟ್ ಮಾರಾಟದಲ್ಲಿ ವಂಚಿಸಿದ್ದ ಆರೋಪಿ

ಉಡುಪಿ: ನಗರದಲ್ಲಿ ಫ್ಲ್ಯಾಟ್ಗಳನ್ನು ಅನೇಕರಿಗೆ ಮಾರಾಟ ಮಾಡಿ ವಂಚಿಸಿದ್ದ ಬಹುಕೋಟಿ ವಂಚಕ, ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ ವಂಚನೆ ಪ್ರಕರಣದಲ್ಲಿ ಗ್ರಾಹಕ ನ್ಯಾಯಾಲಯವು 3 ವರ್ಷ ಕಾರಾಗೃಹ ಶಿಕ್ಷೆ ಹಾಗು ₹ 1 ಲಕ್ಷ ದಂಡ ವಿಧಿಸಿದೆ. ಉಡುಪಿ ನಗರದ ಹೃದಯಭಾಗದಲ್ಲಿ ಫ್ಲ್ಯಾಟ್ ಕಟ್ಟಿದ್ದು, ನಂತರ ಅದರ ಮಾಲೀಕತ್ವಕ್ಕೆ ವಾರೀಸುದಾರರಿಗೆ ನೀಡುವಲ್ಲಿ ಅವರು ವಿಫಲರಾಗಿದ್ದರು. ನಮಗೆ ವಂಚಿಸಿದ್ದಾರೆ ಎಂದು ಫ್ಲ್ಯಾಟ್ಗೆ ಹೂಡಿಕೆ ಮಾಡಿದ್ದ ಗ್ರಾಹಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದಾದ ಬಳಿಕವು ಸಾಮಾಜಿಕ ಜಾಲತಾಣ ಹಾಗು ಕೇಂದ್ರದ ಬಿಜೆಪಿ ಸರಕಾರದ ವಿರುದ್ದ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಇದೀಗ ನ್ಯಾಯಾಲಯ ಆದೇಶದ ಮೇರೆಗೆ ಮಹಿಳಾ ಠಾಣಾ ಪೋಲಿಸರು ಅವರನ್ನು ವಶಕ್ಕೆ ಪಡೆದು, ಹಾಜರು ಪಡಿಸಿದ್ದಾರೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”