ಜಿಲ್ಲಾ ಹರಿರಾಂ ಶಂಕರ್ ಅವರ ನೇತೃತ್ವದ ಯಶಸ್ವಿ ತಂಡ

ಬಾಂಬೆ: ಕ್ರಿಕೆಟ್. ಇದು ಜಗತ್ತಿನಲ್ಲಿ ಹೆಚ್ಚು ಪ್ರಸಿದ್ದಿ ಹಾಗು ಅಭಿಮಾನಿಗಳನ್ನು ಹೊಂದಿರುವ ಕ್ರೀಡೆ. ಇದನ್ನು ಕ್ರೀಡೆಯಾಗಿ ನೋಡದೇ, ಜೀವನದಲ್ಲಿ ಆಳವಡಿಸಿಕೊಂಡಾಗ ಏನಾಗುತ್ತದೆ..? ಈ ಪ್ರಶ್ನೆಗೆ ಉತ್ತರ ಅನೇಕ. ಕ್ರಿಕೆಟ್ನ ಇಂಗ್ಸ್ವಿಂಗ್, ಯಾರ್ಕರ್, ಫುಲ್ಟಾಸ್, ಸಿಕ್ಸರ್, ಬೌಂಡರಿ, ನೋ-ಬಾಲ್ಗಳಂತೆ ಜೀವನದ ಏಳುಬೀಳುಗಳನ್ನು ಎದುರಿಸುತ್ತಾ, ತಂಡವನ್ನು ಮುನ್ನಡೆಸುವ ನಾಯಕನ ಪಾತ್ರ ಎಷ್ಟು ಮಹತ್ವದ್ದೋ ಅದನ್ನು ಸೌರವ್ ಗಂಗೂಲಿ ಹಾಗೂ ಎಂ.ಎಸ್. ಧೋನಿ ತಮ್ಮ ನಾಯಕತ್ವದ ಮೂಲಕ ಸಾಬೀತುಪಡಿಸಿದರು. ಅಂತೆಯೇ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಅವರ ಸಮರ್ಥ ನಾಯಕತ್ವದ ಬಗ್ಗೆ ಓದುಗರಿಗೆ ಬಿಚ್ಚಿಡುತ್ತಿದ್ದೇವೆ. ಓದಿ... ಈಗ ಅಸಲಿ ವಿಚಾರಕ್ಕೆ ಬರೋಣ. ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಎರಡು ಗುಂಡಿನ ದಾಳಿಯ ಪ್ರಕರಣಗಳಲ್ಲಿ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಲಾಗಿದೆ. ಇಲ್ಲಿ ಜಿಲ್ಲಾ ಪೋಲಿಸ್ ತಂಡದ ಶ್ರಮವನ್ನು ಮೆಚ್ಚಲೇಬೇಕು. ಪ್ರತಿಯೊಬ್ಬರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಆದರೆ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಅವರ ನಾಯಕತ್ವ ಬಹಳ ಮಹತ್ವಪೂರ್ಣವಾದದ್ದು.
ಅಳಿಯುವುದು ಕಾಯ, ಉಳಿಯುವುದು ಕೀರ್ತಿ ಎಂಬಂತೆ ಸರಳ ಹಾಗು ನಿಷ್ಠಾವಂತ ಪೋಲಿಸ್ ಅಧಿಕಾರಿ ಮಧುಕರ್ ಶೆಟ್ಟರು ನೆನಪು ಅಮರ. ಇಂದು ನಮ್ಮೊಂದಿಗೆ ಇಲ್ಲಾ, ಆದರೆ ಅವರು ತರಬೇತಿ ನೀಡಿದ ಶಿಷ್ಯಂದಿರು ನಮ್ಮ ನಡುವೆ ಇದ್ದಾರೆ. ಅವರಲ್ಲಿ ಹರಿರಾಂ ಶಂಕರ್ ಒಬ್ಬರು. ಗುರುಗಳು ಹೇಳಿದಂತೆ ನಿಷ್ಠಾವಂತ ಅಧಿಕಾರಿಯಾಗಿ, ಕಾನೂನಿನಲ್ಲಿ ರಾಜಿ ಮಾಡಿಕೊಳ್ಳದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಯಾವುದೇ ತಂಡವು ಗೆಲ್ಲಬೇಕಿದ್ದರೇ ನಾಯಕತ್ವ ಬಹಳ ಮುಖ್ಯವಾಗುತ್ತದೆ. ಕಾಲಕ್ಕೆ ತಕ್ಕಂತೆ ತಂತ್ರ, ಯಾರಿಂದ, ಯಾವ ಕೆಲಸ ಮಾಡಿಸಬೇಕು. ಯಾರು ಯಾವುದರಲ್ಲಿ ಪರಿಣಿತರು, ಯಾರನ್ನು ಯಾವಾಗ ಅಖಾಡಕ್ಕೆ ಇಳಿಸಬೇಕು ಇವೆಲ್ಲಾ ಲೆಕ್ಕಾಚಾರವನ್ನು ಸ್ಪಷ್ಟವಾಗಿ ಹಾಕಿ, ಆಟಗಾರರನ್ನು ಮೈದಾನಕ್ಕೆ ಇಳಿಸಬೇಕು ಇದೆಲ್ಲವೂ ಒಬ್ಬ ಸಮರ್ಥ ನಾಯಕನಿಗೆ ಇರಬೇಕಾದ ಅಗತ್ಯ ಗುಣಗಳು. ಪೋಲಿಸ್ ಕಾರ್ಯಚರಣೆಯಲ್ಲೂ ಇದೇ ಸೂತ್ರ ಅನ್ವಯವಾಗುತ್ತದೆ. ಕ್ಲಿಷ್ಟಕರ ಸನ್ನಿವೇಶದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳದೇ, ಪರಿಸ್ಥಿತಿಗೆ ತಕ್ಕಂತೆ ತಂತ್ರ ಬದಲಿಸುತ್ತಾ ತನ್ನ ಅಧೀನ ಅಧಿಕಾರಿಗಳಿಗೆ ಬಾಸ್ ಆಗಿ ಆದೇಶ ನೀಡದೇ, ತಾನೇ ಮೈದಾನಕ್ಕೆ ಇಳಿದು ಲೀಡರ್ ಆಗಿ ತಂಡವನ್ನು ಮುನ್ನಡೆಸುವ ಶೈಲಿ ಹರಿರಾಂ ಶಂಕರ್ ಅವರದ್ದು. ಸೌರವ್ ಗಂಗೂಲಿ, ಎಮ್.ಎಸ್ ಧೋನಿ ಹೊಸ ಹುಡುಗರನ್ನು ನಂಬಿ ತಂಡವನ್ನು ಕಟ್ಟಿದಂತೆ, ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಕೂಡ ಯುವ ಪೋಲಿಸ್ ಅಧಿಕಾರಿಗಳ ಸಾಮ್ಯರ್ಥದ ಮೇಲೆ ನಂಬಿಕೆ ಇಟ್ಟು ಅವರಿಗೆ ಜವಾಬ್ದಾರಿಯನ್ನು ನೀಡುತ್ತಿದ್ದಾರೆ.
ಕುಂದಾಪುರದಲ್ಲಿ ಕೊಲೆಯಾದ ಐವನ್ ಪ್ರಕರಣದ ಆರೋಪಿಯಾದ ಡೆರಿಕ್ನನ್ನು 24 ಗಂಟೆಯೊಳಗೆ ಬಂಧಿಸಿ, ತನ್ನ ತಂಡದ ಸಾಮರ್ಥ್ಯವನ್ನು ಜನತೆಗೆ ತೋರಿಸಿದ್ದರು.
ಕಾಪುವಿನ ಮುದರಂಗಡಿಯಲ್ಲಿ ಹತ್ಯೆಯಾದ ಮಾಜಿ ರೌಡಿಶೀಟರ್ ಡೇವಿಡ್ ಡಿಸೋಜಾ ಪ್ರಕರಣದಲ್ಲಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಅವರು ಮೊದಲಿಗೆ ಯುವ ಪಿಎಸ್ಐ ಬೈಂದೂರು ಠಾಣೆಯ ಮಹೇಶ್ ಅವರನ್ನು ಮೈದಾನಕ್ಕೆ ಇಳಿಸಿದರು. ಮಹೇಶ್ ಅವರು ಕಪ್ತಾನನ ನಂಬಿಕೆಯನ್ನು ಹುಸಿ ಮಾಡಲಿಲ್ಲ. ಮೊದಲ ಓವರ್ನಲ್ಲೇ ಶಾರ್ಪ್ ಶೂಟರ್ "ರಾಜು"ವಿನ ವಿಕೆಟ್ ಪಡೆದರು. ಅದುವೇ ಪ್ರಕರಣದ ಗೆಲುವಿನ ಮೊದಲ ಮುದ್ರೆಯನ್ನು ಒತ್ತಿತ್ತು. ಎರಡನೇ ಓವರ್ನಲ್ಲಿ ತನ್ನ ತಂಡದ ಅತ್ಯಂತ ಬಲಶಾಲಿ ಹಾಗು ಅಜಾನುಬಾಹುವಾದ ಕಾರ್ಕಳ ಗ್ರಾಮಾಂತರ ಪಿಎಸ್ಐ ಪ್ರಸನ್ನ, ಕಾಪು ಪಿಎಸ್ಐ ತೇಜಸ್ವಿ, ಸಣಕಲು ದೇಹದ ಅದ್ಬುತ ಓಟಗಾರ ಶಿರ್ವ ಪಿಎಸ್ಐ ಮಂಜುನಾಥ್ ಮರಬದ ಅವರನ್ನು ಕಣಕ್ಕಿಳಿಸುತ್ತಾರೆ. ಕಾರ್ಯಾಚರಣೆಯಲ್ಲಿ ಕ್ಷಣಾರ್ಧದಲ್ಲಿ ಪರಿಸ್ಥಿತಿ ಬದಲಾಯಿತು. ಕಾಪು ಪಿಎಸ್ಐ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ರಾಜುವಿನ ಕಾಲನ್ನು ಸೀಳಿ ಒಳಹೊಕ್ಕುತ್ತದೆ. ಗಾಯಗೊಂಡ ಆರೋಪಿ ಹಾಗು ಪೋಲಿಸರು ಆಸ್ಪತ್ರೆ ದಾಖಲಾಗುತ್ತಾರೆ. ಮೂರನೇ ಓವರ್ನಲ್ಲಿ ಭಟ್ಕಳ ಹಾಗು ಕುಮುಟಾದಲ್ಲಿ ಆರೋಪಿಗಳು ಬಂಧಿಸ್ಪಟ್ಟುತ್ತಾರೆ. ನಾಲ್ಕನೇ ಓವರ್ಗೆ ಕಪ್ತಾನ ತಂತ್ರವನ್ನು ಬದಲಿಸಿ, ಹಿರಿಯ ಆಟಗಾರ ಮಹಿಳಾ ಠಾಣಾ ಪಿಐ ರಾಘವೇಂದ್ರ ಅವರನ್ನು ಹೊರರಾಜ್ಯಕ್ಕೆ ಕಳುಹಿಸಿದ್ದಾರೆ. ಎದುರಾಳಿ ತಂಡದ ಪ್ರಮುಖ ವಿಕೆಟ್ ಪತನವಾಗುತ್ತದೆ. ನಾಲ್ಕನೇ ಓವರ್ನಲ್ಲಿ ಮತ್ತೊಂದಷ್ಟು ತರುಣ ಪಿಎಸ್ಐಗಳನ್ನು ಕಣಕ್ಕೆ ಇಳಿಸಿದ್ದು, ವಿಕೆಟ್ ಪತನದ ನಿರೀಕ್ಷೆಯಲ್ಲಿ ಜಿಲ್ಲಾ ಎಸ್ಪಿಯವರು ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ತಂಡದ ಮ್ಯಾನೇಜರ್ ಹಾಗು ತನಿಖಾಧಿಕಾರಿ ನ್ಯಾಯಾಲಯ, ಆರೋಪಿಗಳ ವಿಚಾರಣೆಯಲ್ಲಿ ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ತಂಡದ ಹಿರಿಯ ಆಟಗಾರರಾದ ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ್, ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಕಾಲಕ್ಕೆ ತಕ್ಕಂತೆ ಕಪ್ತಾನರ ತಂತ್ರವನ್ನು ಯುವ ಪಡೆಯೊಂದಿಗೆ ಜಾರಿಗೊಳಿಸುತ್ತಾ, ಎದುರಾಳಿ ತಂಡವನ್ನು ಮಣಿಸಲು ಹಪ ಹಪಿಸುತ್ತಿದ್ದಾರೆ.
“ಈ ಪಂದ್ಯಾಟದಲ್ಲಿ ಎದುರಾಳಿ ತಂಡದವರಿಗೆ ಪೋಲಿಸ್ ತಂಡದ ಸಾಮರ್ಥ್ಯದ ಅರಿವಿದೆ. ಆದರೆ ಎದುರಾಳಿ ತಂಡದಲ್ಲಿ ಎಷ್ಟು ಬ್ಯಾಟರ್ಗಳಿದ್ದಾರೆ, ಎಷ್ಟು ಆಲ್ರೌಂಡರ್ಗಳಿದ್ದಾರೆ ಎಂಬುದು ಪೊಲೀಸರಿಗೆ ಇನ್ನೂ ಸಂಪೂರ್ಣವಾಗಿ ಗೊತ್ತಿಲ್ಲ. ಆದರೆ ಒಂದು ಸಂಗತಿ ಮಾತ್ರ ಸ್ಪಷ್ಟ—ಮೈದಾನಕ್ಕೆ ಇಳಿದ ಪ್ರತಿಯೊಬ್ಬ ಆಟಗಾರನ ಆಟವನ್ನು ಓದಿ, ಅದಕ್ಕೆ ತಕ್ಕ ಬೌಲಿಂಗ್ ಬದಲಿಸುವ ಕಪ್ತಾನನ ಕೈಯಲ್ಲಿ ಚೆಂಡಿದೆ. ಪಂದ್ಯ ಇನ್ನೂ ಮುಗಿದಿಲ್ಲ. ಆದರೆ ಮೊದಲ ನಾಲ್ಕು ಓವರ್ಗಳಲ್ಲೇ ಪೊಲೀಸ್ ತಂಡ ತನ್ನ ಗೆಲುವಿನ ದಿಕ್ಕನ್ನು ಸ್ಪಷಪಡಿಸಿದೆ. ಇನ್ನಷ್ಟು ಓವರ್ಗಳಿಗೆ ಪಂದ್ಯ ಮುಂದುವರಿಯಲಿದೆ ಎಂಬುದು ಕೂತುಹಲವಾಗಿದೆ. ಇದಕ್ಕೆ ಉತ್ತರವನ್ನು ಕಪ್ತಾನ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಅವರೊಬ್ಬರೇ ಕೊಡಲು ಸಾಧ್ಯ. ಪಂದ್ಯಾಟ ಎಷ್ಟನೇ ಓವರ್ನಲ್ಲಿ ಮುಕ್ತಾಯಗೊಳ್ಳಬೇಕು ಎಂದು ನಿರ್ಧರಿಸುವ ತಾಕತ್ತು ಅವರಿಗಿದೆ. ”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”