ಹಿಂದಿ ಭಾಷೆಯನ್ನು ಮಾತನಾಡುತ್ತಿದ್ದ ಆರೋಪಿ

ಉಡುಪಿ: ಹಿರಿಯಡ್ಕ ಸಮೀಪದ ಪಾಡಿಗಾರದಲ್ಲಿ ಬಳಿಯ ನಿರ್ಜನ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯನ್ನು ಆರೋಪಿಯೋರ್ವ ಅತ್ಯಾಚಾರ ಎಸಗಲು ಪ್ರಯತ್ನಿಸಿದ ಘಟನೆ ಶನಿವಾರ ಸಂಜೆ ನಡೆದಿದೆ. ಮನೆಯಲ್ಲಿದ್ದ ಬಾಲಕಿಯೂ, ಸಮೀಪದ ಅಂಗಡಿಗೆ ಬೊಂಡ ತರಲು ತೆರಳಿದ್ದು, ವಾಪಾಸು ಮನೆಗೆ ಒಳದಾರಿಯಲ್ಲಿ ಬರುವಾಗ, ಆರೋಪಿಯೂ ಬಾಲಕಿಯ ಕೆನ್ನೆಗೆ ಹೊಡೆದು ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.
“ಆಕೆಗೆ ಅತ್ಯಾಚಾರ ಆಗಿದೆಯೇ..? ಇಲ್ಲವೇ..? ಎಂಬುದರ ಬಗ್ಗೆ ವೈದ್ಯಕೀಯ ಪರೀಕ್ಷೆಯ ವರದಿ ನಂತರ ಪ್ರಕರಣ ದೃಢಪಡಲಿದೆ. ಆರೋಪಿಯೂ ಹಿಂದಿ ಭಾಷೆಯನ್ನು ಮಾತನಾಡುತ್ತಿದ್ದನು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿದೆ. ಆತನ ಬಂಧನಕ್ಕಾಗಿ ಪೋಲಿಸರು ಬಲೆಯನ್ನು ಬೀಸಿದ್ದಾರೆ.”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”