ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಕ್ರೃಷ್ಣ ಹೆಬ್ಬಾರ್ ನೇತೃತ್ವದಲ್ಲಿ ಸನ್ಮಾನ

ಉಡುಪಿ: ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಗೀತಾ ದಿನೇಶ್ ಪುತ್ರನ್ ಅವರನ್ನು ಗೌರವಿಸಲಾಯಿತು. ಸ್ತ್ರೀ ರೋಗ ತಜ್ಞರಾಗಿ, ಅನೇಕ ಬಡವರಿಗೆ ಧರ್ಮಾರ್ಥ ಹೆರಿಗೆ ಮಾಡಿಸಿ ಬಡ ಮಹಿಳೆಯರಿಗೆ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಉಚಿತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ನೀಡುತ್ತಿರುವ ಡಾ.ಗೀತಾ ದಿನೇಶ್ ಪುತ್ರನ್ ಅವರನ್ನು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಅವರ ಸ್ವಗ್ರೃಹದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಕ್ರೃಷ್ಣ ಹೆಬ್ಬಾರ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಗೀತಾ ವಾಗ್ಲೆ, ಹಿರಿಯ ನಾಯಕರಾದ ದಿನೇಶ್ ಪುತ್ರನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಮೀನಾಕ್ಷಿ ಮಾಧವ ಬನ್ನಂಜೆ, ರಮಾದೇವಿ,ಪುಷ್ಪ ಅಂಚನ್, ಸಂಧ್ಯಾ ತಿಲಕ್ ರಾಜ್, ಶಾಂತಾ ರೈ, ರೋಶನಿ ಶೆಟ್ಟಿ, ಜಯಶ್ರೀ ಶೇಟ್, ಶೋಭಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”