ವಕೀಲರ ಸೇವೆಗೆ ಶಾಲಾ ಮಕ್ಕಳು ಖುಷ್

ಉಡುಪಿ: ಬ್ರಹ್ಮಾವರದ ಚೇರ್ಕಾಡಿ ದುರ್ಗಾಪರಮೇಶ್ವರಿ ಅನುದಾನಿತ ಶಾಲೆಯ ಸುಮಾರು ಎಪ್ಪತ್ತು ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಕೊಡೆಯನ್ನು ವಕೀಲರಾದ ಚೇರ್ಕಾಡಿ ಅಖಿಲ್.ಬಿ.ಹೆಗ್ಡೆ, ವೈ.ಟಿ ರಾಘವೇಂದ್ರ, ಹಮಜಾತ್ ಹೆಜಮಾಡಿ, ಅಕ್ಷಯ್ ಕುಮಾರ್ ಜೈನ್ ಸಹಕಾರದಲ್ಲಿ ವಿತರಿಸಲಾಯಿತು. ನಂತರ ಮಾತನಾಡಿದ ಅತಿಥಿಗಳು, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯ. ಆದಾಯದ ಒಟ್ಟು ಮೊತ್ತದಲ್ಲಿ ಇಂತಹ ಸಮಾಜ ಸೇವೆಗಳನ್ನು ಮಾಡುವುದು ಸಾಮಾಜಿಕ ಜವಾಬ್ದಾರಿ. ವಿದ್ಯಾರ್ಥಿಗಳು ಮುಂದೊದು ದಿನ ಈ ರೀತಿಯ ಸಹಕಾರವನ್ನು ಸಮಾಜಕ್ಕೆ ನೀಡುವಂತಾಗಲಿ ಎಂದು ಹಾರೈಸಿದರು. ಶಾಲಾ ನಿವೃತ್ತ ಶಿಕ್ಷಕಿ ಸುಮತಿ ಕೆ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಆಶಾಲತಾ ಶೆಟ್ಟಿ ಉಪಸ್ಥಿತರಿದ್ದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”