ವೃದ್ಧಾಪ್ಯದ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಯ ಪರಿಹಾರದಲ್ಲಿ ಯೋಗದ ಪಾತ್ರದ ಕುರಿತು ಉಪನ್ಯಾಸ

ಸಿದ್ದಾಪುರ: ಸಿದ್ದಾಪುರ ಹಿರಿಯ ನಾಗರಿಕ ವೇದಿಕೆಯ ಆಶ್ರಯದಲ್ಲಿ ವೃದ್ಧಾಪ್ಯದ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಯ ಪರಿಹಾರದಲ್ಲಿ ಯೋಗದ ಪಾತ್ರದ ಕುರಿತು ಉಪನ್ಯಾಸ ಮತ್ತು ಪ್ರಾತ್ಯಕ್ಷತೆಯು ಅನುಭವ ಮಂಟಪದಲ್ಲಿ ನಡೆಯಿತು. ಯೋಗಗುರು ಟಿ. ಜಿ. ಪಾಂಡುರಂಗ ಪೈ ಯವರು ವೃದ್ಧಾಪ್ಯದಲ್ಲಿ ಅನೇಕರನ್ನು ಕಾಡುವ ಮಧುಮೇಹ, ಗಂಟು ನೋವು ಮೊದಲಾದ ಸಮಸ್ಯೆಗಳ ಕುರಿತು ಮಾತನಾಡಿ ಸರಳ ಆಸನಗಳನ್ನು ಮಾಡಿಸಿದರು. ಈ ಸಂದರ್ಭದಲ್ಲಿ ಹಿರಿಯ ನಾಗರಿಕರು ಕೇಳಿದ ಪ್ರಶ್ನೆಗಳಿಗೂ ಉತ್ತರಿಸಿದರು. ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಹೆಚ್. ಭೋಜ ಶೆಟ್ಟಿ ಮಾತನಾಡಿ, ಮುಂದಿನ ದಿನಗಳಲ್ಲಿ ಸರಳ ಆಸನಗಳನ್ನು ಮಾಡುವುದರ ಮೂಲಕ ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು. ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀಕಾಂತ್ ರಾವ್ ಸಿದ್ದಾಪುರ ಸ್ವಾಗತಿಸಿ, ರಾಜೀವ ಶೆಟ್ಟಿ ವರದಿ ಮಂಡಿಸಿದರು. ತೇಜಪ್ಪ ಶೆಟ್ಟಿ ವಂದಿಸಿದರು. ರವೀಂದ್ರ ಶೆಟ್ಟಿ ನಿರೂಪಿಸಿದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”