AI Impact Summit 2026: ಅಂಬಾನಿ ಅವರ ಪ್ರಕಾರ, ಈ ಎಐ ಅನ್ನೋದು ಬರೀ ಇನ್ನೊಂದು ಹೊಸ ಟೆಕ್ನಾಲಜಿ ಅಲ್ಲ! ಮನುಷ್ಯರ ತರಾನೇ ಯೋಚನೆ ಮಾಡೋ, ಅರ್ಥ ಮಾಡಿಕೊಳ್ಳೋ ಶಕ್ತಿ ಇರೋ ಒಂದು ಮ್ಯಾಜಿಕ್ ಸಿಸ್ಟಮ್ ಇದು.
ದೆಹಲಿಯ ಭರತ್ ಮಂಟಪದಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ 2026’ (India AI Impact Summit 2026) ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣ ಮಾಡಿದ್ದಾರೆ. ಅದನ್ನು ಕನ್ನಡಕ್ಕೆ ಎಐ ಮೂಲಕ ಅನುವಾದ ಮಾಡಲಾಗಿದೆ. ಇಂದಿನ ಈ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್’ ಕೇವಲ ತಂತ್ರಜ್ಞಾನದ ಸಮಾವೇಶವಲ್ಲ, ಇದು ನವ ಭಾರತದ ಸಂಕಲ್ಪದ ಪ್ರತೀಕವಾಗಿದೆ ಎಂದು ಮೋದಿ ಇದರಲ್ಲಿ ಹೇಳಿದ್ದಾರೆ ಈ ಬಗ್ಗೆ ಲೈವ್ ವಿಡಿಯೋ ಇಲ್ಲಿದೆ ನೋಡಿ.
ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಇತ್ತೀಚೆಗೆ ನಡೆದ ಇಂಡಿಯಾ ಎಐ ಶೃಂಗಸಭೆಯಲ್ಲಿ (India AI Summit) ಭಾಷಣ ಮಾಡಿದ್ದಾರೆ. ಜಾಗತಿಕ ಎಐ ಇಂಪ್ಯಾಕ್ಟ್ ಶೃಂಗಸಭೆಯು (Global AI Impact Summit) ಭಾರತದ ಕೃತಕ ಬುದ್ಧಿಮತ್ತೆ (Artificial Intelligence) ಇತಿಹಾಸದಲ್ಲೇ ಒಂದು ಗೇಮ್ ಚೇಂಜರ್ ಅಂತ ಅವರು ಹೇಳಿದ್ದಾರೆ. ಪ್ರಧಾನಿ ಮೋದಿಯವರ ಎಐ-ಚಾಲಿತ ಭಾರತ (AI-Driven India) ಕನಸು ಬರೀ ನಮಗೆ ಮಾತ್ರವಲ್ಲ, ಇಡೀ ಜಾಗತಿಕ ದಕ್ಷಿಣದ (Global South) ದೇಶಗಳಿಗೂ ದೊಡ್ಡ ಮಾದರಿಯಾಗಲಿದೆ ಅಂತ ಅವರು ಭವಿಷ್ಯ ನುಡಿದಿದ್ದಾರೆ.
ಅಂಬಾನಿ ಅವರ ಪ್ರಕಾರ, ಈ ಎಐ ಅನ್ನೋದು ಬರೀ ಇನ್ನೊಂದು ಹೊಸ ಟೆಕ್ನಾಲಜಿ ಅಲ್ಲ! ಮನುಷ್ಯರ ತರಾನೇ ಯೋಚನೆ ಮಾಡೋ, ಅರ್ಥ ಮಾಡಿಕೊಳ್ಳೋ ಶಕ್ತಿ ಇರೋ ಒಂದು ಮ್ಯಾಜಿಕ್ ಸಿಸ್ಟಮ್ ಇದು. ಇದನ್ನ ಅವರು ನಮ್ ಪುರಾಣಗಳಲ್ಲಿ ಬರೋ 'ಅಕ್ಷಯಪಾತ್ರೆ'ಗೆ ಹೋಲಿಸಿದ್ದಾರೆ. ಅಂದ್ರೆ, ಇದು ನಮ್ಮ ಕೆಲಸದ ಸ್ಪೀಡ್ ಮತ್ತು ಕೆಪಾಸಿಟಿನ ಸಿಕ್ಕಾಪಟ್ಟೆ ಜಾಸ್ತಿ ಮಾಡೋ, ಎಷ್ಟೇ ಬಳಸಿದ್ರೂ ಮುಗಿಯದ ಅಕ್ಷಯಪಾತ್ರೆಯಂತೆ!
"ನಾವೆಲ್ಲಾ ಒಡೆದ ಮನೆ ತರ ಇರ್ಬೇಕಾ ಅಥವಾ ಒಂದೇ ಗ್ಲೋಬಲ್ ಫ್ಯಾಮಿಲಿ ತರ ಇರ್ಬೇಕಾ?" ಅಂತ ಅಂಬಾನಿ ಅವರು ನೇರ ಪ್ರಶ್ನೆ ಹಾಕಿದ್ದಾರೆ. ಎಐ ಬರೀ ಶ್ರೀಮಂತ ದೇಶಗಳ ಕೈಲಿದ್ರೆ ಬಡವರು ಇನ್ನಷ್ಟು ಬಡವರಾಗ್ತಾರೆ. ಆದ್ರೆ 21ನೇ ಶತಮಾನದಲ್ಲಿ ಭಾರತ ಎಐ ಪವರ್ ಹೌಸ್ ಆಗಿ ಬೆಳೆಯಲಿದೆ. ಪ್ರಜಾಪ್ರಭುತ್ವ, ಯುವ ಜನಸಂಖ್ಯೆ ಮತ್ತೆ ಡಿಜಿಟಲ್ ಪವರ್ ವಿಷಯದಲ್ಲಿ ನಮ್ಮ ದೇಶಕ್ಕೆ ಟಕ್ಕರ್ ಕೊಡೋಕೆ ಪ್ರಪಂಚದಲ್ಲಿ ಯಾರಿಂದಲೂ ಸಾಧ್ಯವಿಲ್ಲ ಅಂತ ಅವರು ಎದೆಯುಬ್ಬಿಸಿ ಹೇಳಿದ್ದಾರೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”