ಆರೋಪಿ ಕೆಪಿ ನ್ಯಾಯಾಲಯದ ಹೇಳಿಕೆಯಿಂದ ಚರ್ಚೆ ಆರಂಭ

ಉಡುಪಿ: ಇಲ್ಲಿ ಪ್ರತಿನಿತ್ಯ ಹೊಸ ಕೇಸುಗಳು. ಹೊಸ ಆರೋಪಿಗಳು. ಒಂದೆಡೆ ಮೇಲಾಧಿಕಾರಿಯವರ ಆದೇಶ, ರಾಜಕಾರಣಿಗಳ ಒತ್ತಡ, ಪ್ರಜಾಪ್ರಭುತ್ವದ ಶಾಂತಿಯನ್ನು ಕಾಪಾಡುವ ಹೊಣೆ. ಎಡವಿದರೇ ಕಾನೂನಿನ ಕುಣಿಕೆ ಸುತ್ತಿಕೊಳ್ಳುವ ಭೀತಿ. ಇದು ಪೋಲಿಸ್ ವ್ಯವಸ್ಥೆ..! ಕೊಲೆ, ದರೋಡೆ, ಸುಲಿಗೆ ಪ್ರಕರಣಗಳಲ್ಲಿ ಆರೋಪಿಗಳನ್ನು ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸುವುದು ತನಿಖೆಯ ಸಹಜ ಭಾಗ. ಆದರೆ ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಪ್ರಕ್ರಿಯೆಯಲ್ಲಿ ವಿಳಂಬದ ಆರೋಪಗಳು ಕೇಳಿಬಂದಾಗ, ಅದರ ಕಾನೂನುಬದ್ಧತೆಯ ಪ್ರಶ್ನೆಯೂ ಸಹಜವಾಗಿಯೇ ಉದ್ಭವಿಸುತ್ತದೆ. ಖಾಕಿಯ ಅತಿಥಿಯಾಗುವ ಎಲ್ಲರೂ ಅಮಾಯಕರೇನಲ್ಲ; ಹಾಗೆಯೇ ಪೊಲೀಸರ ಪ್ರತಿಯೊಂದು ಕ್ರಮವೂ ಸರಿ ಎಂಬ ವಾದವೂ ಸಮರ್ಥನೀಯ ಅಲ್ಲ. ಎಲ್ಲಾ ಅಧಿಕಾರಿಗಳು ದೇವರು ಎಂಬ ವಾದವನ್ನೂ ಒಪ್ಪಲು ಸಾಧ್ಯವಿಲ್ಲ. ಖಾಕಿಗೆ ಕಪ್ಪು ಚುಕ್ಕೆಯಂತಹ ಅನೇಕ ಅಧಿಕಾರಿಗಳು ನಮ್ಮ ನಡುವೆ ಇದ್ದಾರೆ. ಆದರೆ ಸರಕಾರಿ ಕೆಲಸ ದೇವರ ಕೆಲಸವೆಂದೂ ನಿಷ್ಠೆಯಿಂದ ತನ್ನ ಕರ್ತವ್ಯವನ್ನು ನಿಭಾಯಿಸುತ್ತಿರುವ ಅಧಿಕಾರಿಗಳು ಇದ್ದಾರೆ.
ಮುದರಂಗಡಿಯಲ್ಲಿ ಆ.7 ರಂದು ಶೂಟರ್ಗಳ ಗುಂಡಿಗೆ ಬಲಿಯಾಗಿದ್ದ ಡೇವಿಡ್ ಹತ್ಯೆ ಪ್ರಕರಣದಲ್ಲಿ 7 ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ನೇತೃತ್ವದ ತಂಡ ಯಶಸ್ವಿಯಾಗಿದೆ. ಆದರೆ ಪ್ರಕರಣದ ಪ್ರಮುಖ ಸೂತ್ರಧಾರ ಎಂದು ಹೇಳಲಾದ ಆರೋಪಿ ಕಿಶೋರ್ ಪೂಜಾರಿ ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆ, ಚರ್ಚೆಗೆ ಗ್ರಾಸವಾಗಿದೆ. ತನ್ನನ್ನು ಆ.10 ರಂದೇ ಪೋಲಿಸರು ಬಂಧಿಸಿದ್ದರು ಎಂದು ಆ.14 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗ, ಆರೋಪಿ ಕಿಶೋರ್ ಪೂಜಾರಿ ನ್ಯಾಯಾಧೀಶ ಮುಂದೆ ತಿಳಿಸಿದ್ದಾನೆ. ಆರೋಪಿಯ ಈ ಹೇಳಿಕೆಯ ಹಿನ್ನೆಲೆಯಲ್ಲಿ ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶ ಹಾಗು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ (ಸಿಜೆಎಮ್) ನ್ಯಾಯಾಧೀಶ ಎಮ್.ಪುರುಷೋತ್ತಮ್ ಅವರು ಆ.20 ರ ಒಳಗಾಗಿ ವಿವರಣೆ ಸಲ್ಲಿಸುವಂತೆ ತನಿಖಾಧಿಕಾರಿಯವರಿಗೆ ಆದೇಶಿಸಿದ್ದಾರೆ. ಹೀಗಾಗಿ ಪ್ರಶ್ನೆ ಸರಳವಾಗಿದೆ. ಆಗಸ್ಟ್ 10 ರಂದು ನಿಜವಾಗಿಯೂ ಬಂಧನವಾಗಿತ್ತೇ..? ಅಥವಾ ಆಗಸ್ಟ್ 14 ರಂದು ಮಾತ್ರ ಕಾನೂನುಬದ್ಧವಾಗಿ ಬಂಧನ ದಾಖಲಿಸಲಾಯಿತೇ..?
ಭಾರತದ ಸಂವಿಧಾನ ಆರೋಪಿಗಳಿಗೆ ಕೆಲವು ರಕ್ಷಣೆಗಳನ್ನು ಒದಗಿಸಿದೆ. ಸಂವಿಧಾನ ವಿಧಿ 22(2) ರಲ್ಲಿ ಆರೋಪಿಯನ್ನು ಬಂಧಿಸಿದ 24 ಗಂಟೆಯೊಳಗೆ, ( ಓಡಾಟದ ಸಮಯವನ್ನು ಹೊರತುಪಡಿಸಿ) ಮ್ಯಾಜಿಸ್ಟ್ರೇಟ್ ಅವರ ಮುಂದೆ ಹಾಜರುಪಡಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಈ ಅವಧಿಯನ್ನು ಮೀರಿಸಿ ಬಂಧನದಲ್ಲಿಡಲು ಕಾನೂನುಬದ್ಧ ನ್ಯಾಯಾಂಗ ಅಧಿಕಾರ ಅಗತ್ಯ. ಈ ನಿಯಮವನ್ನು ಮೀರಿದರೇ ಇದು ಆರೋಪಿಗೆ ಸಂವಿಧಾನ ನೀಡಿದ ಮೂಲಭೂತ ಹಕ್ಕಿನ ಉಲ್ಲಂಘನೆಯಾದಂತೆ.
Enforcement Directorate (ED) v. subhash sharma 2025 INSC 141, Criminal Appeal No. 310 of 2025, decided on 21 January 2025. ಈ ಪ್ರಕರಣದಲ್ಲಿ ಸುಭಾಶ್ ಶರ್ಮ ಅವರನ್ನು ಇಡಿ ಹೊರಡಿಸಿದ್ದ "ಲುಕ್ ಔಟ್ ಸರ್ಕ್ಯುಲರ್" (LOC) ಆಧಾರದಲ್ಲಿ 4 ಮಾರ್ಚ್ 2022 ರಂದು ಸಂಜೆ 6 ಗಂಟೆಗೆ ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್ ಅಧಿಕಾರಿಗಳು ವಶಕ್ಕೆ ಪಡೆದರು. ಇಡಿ ಅವರನ್ನು 5 ಮಾರ್ಚ್ ಬೆಳಗ್ಗೆ 11 ಗಂಟೆಗೆ "ಫಿಸಿಕಲ್ ಕಸ್ಟಡಿಗೆ" ತೆಗೆದುಕೊಂಡಿತು. ಆದರೆ "ಇಡಿಯ ಫಾರ್ಮಲ್ ಅರೆಸ್ಟ್ ಮೆಮೊ" 6 ಮಾರ್ಚ್ ಬೆಳಗ್ಗೆ 1:15ಕ್ಕೆ ಸಿದ್ಧಪಡಿಸಿತು. ನಂತರ ಅದೇ ದಿನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಇಡಿಯು ಫಾರ್ಮಲ್ ಅರೆಸ್ಟ್ 6 ಮಾರ್ಚ್ 1:15 AM ಕ್ಕೆ ಆಗಿರುವುದರಿಂದ, 24 ಗಂಟೆಯೊಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ ಎಂದು ವಾದಿಸಿತು. ಸುಪ್ರೀಂಕೋರ್ಟ್ ಈ ವಾದವನ್ನು ಒಪ್ಪಲಿಲ್ಲ. ಈ ತೀರ್ಪಿನ ತತ್ವದ ಪ್ರಕಾರ, ಆರೋಪಿಯನ್ನು ವಾಸ್ತವಿಕವಾಗಿ ಅಥವಾ ದೈಹಿಕವಾಗಿ (actual/physical custody) ಯಾವಾಗಿನಿಂದ ವಶಕ್ಕೆ ಪಡೆಯಲಾಯಿತು ಎಂಬುದು Article 22(2)ರ 24 ಗಂಟೆಗಳ ಲೆಕ್ಕಾಚಾರದಲ್ಲಿ ಅತ್ಯಂತ ಮಹತ್ವದ್ದಾಗಿದೆ. Article 22(2)ರ ಉಲ್ಲಂಘನೆಯು Article 21ರಲ್ಲಿ ಖಾತರಿಪಡಿಸಿರುವ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯಕ್ಕೂ (personal liberty) ಧಕ್ಕೆ ಉಂಟುಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ. ಬಂಧನವೇ ಕಾನೂನುಬಾಹಿರ (illegal) ಅಥವಾ ದೋಷಪೂರಿತ (vitiated) ಎಂದು ಕಂಡುಬಂದರೆ, ಅಂತಹ ಬಂಧನದ ಆಧಾರದ ಮೇಲೆ ಆರೋಪಿಯನ್ನು ಮುಂದುವರಿಸಿ ವಶದಲ್ಲಿಡುವ (custody) ವಿಚಾರದಲ್ಲಿ ಗಂಭೀರ ಕಾನೂನು ಪರಿಣಾಮಗಳು ಉಂಟಾಗಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ತೀರ್ಪಿನಲ್ಲಿ ಸುಪ್ರೀಂಕೋರ್ಟ್, ಬಂಧಿತ ವ್ಯಕ್ತಿಯನ್ನು 24 ಗಂಟೆಗಳೊಳಗೆ ಸಮೀಪದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವುದು ಕೇವಲ ಪ್ರಕ್ರಿಯಾತ್ಮಕ (procedural) ಅವಶ್ಯಕತೆಯಲ್ಲ; ಅದು ಸಂವಿಧಾನಾತ್ಮಕ ಹಾಗೂ ಕಾನೂನುಬದ್ಧ ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಿದೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಾಲಯ ಒತ್ತಿಹೇಳಿದೆ.
BNSS Section 57 – Person arrested to be taken before Magistrate or officer in charge of police station ಬಂಧಿತ ವ್ಯಕ್ತಿಯನ್ನು ಅನಗತ್ಯ ವಿಳಂಬವಿಲ್ಲದೆ ಮ್ಯಾಜಿಸ್ಟ್ರೇಟ್ ಅಥವಾ ಸಂಬಂಧಿತ ಪೊಲೀಸ್ ಅಧಿಕಾರಿಯ ಮುಂದೆ ಕರೆದೊಯ್ಯಬೇಕು. BNSS Section 58 – Person arrested not to be detained more than twenty-four hours ಬಂಧಿತ ವ್ಯಕ್ತಿಯನ್ನು 24 ಗಂಟೆಗಿಂತ ಹೆಚ್ಚು ಕಾಲ ಮ್ಯಾಜಿಸ್ಟ್ರೇಟ್ನ ವಿಶೇಷ ಆದೇಶವಿಲ್ಲದೆ ಕಸ್ಟಡಿಯಲ್ಲಿ ಇರಿಸಲಾಗುವುದಿಲ್ಲ; ಪ್ರಯಾಣದ ಸಮಯವನ್ನು ಹೊರತುಪಡಿಸಲಾಗುತ್ತದೆ. BNSS Section 187 – governs the rules for police detention, custody, and judicial remand when a investigation cannot be completed within 24 hours. 24 ಗಂಟೆಯೊಳಗೆ ತನಿಖೆ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ remand/ಕಸ್ಟಡಿ ಆದೇಶ ಪಡೆಯುವ ಪ್ರಕ್ರಿಯೆ ಇದರಲ್ಲಿ ಇದೆ.
ಒಂದು ರಾಜ್ಯ/ಜಿಲ್ಲೆಯಲ್ಲಿ ಬಂಧಿಸಲಾದ ಆರೋಪಿಯನ್ನು ಮತ್ತೊಂದು ರಾಜ್ಯ/ಜಿಲ್ಲೆಯ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಬಂಧನವಾದ ರಾಜ್ಯದ ಸ್ಥಳದಲ್ಲಿನ ಸ್ಥಳೀಯ ನ್ಯಾಯಾಲಯದಿಂದ ಪಡೆಯುವ ಆದೇಶ. ಉದಾಹರಣೆಗೆ ಉಡುಪಿ ಪೊಲೀಸರು ಮಹಾರಾಷ್ಟ್ರದಲ್ಲಿ ಆರೋಪಿಯನ್ನು ಬಂಧಿಸಿದರೆ, 24 ಗಂಟೆಯೊಳಗೆ ಆತನನ್ನು ಉಡುಪಿ ನ್ಯಾಯಾಲಯಕ್ಕೆ ನೇರವಾಗಿ ಕರೆತರಲು ವಿಮಾನದ ಮೂಲಕ ಮಾತ್ರ ಸಾಧ್ಯವಾಗುತ್ತದೆ. ರಸ್ತೆ ಅಥವಾ ರೈಲು ಮಾರ್ಗದಲ್ಲಿ ಕೆಲವೊಮ್ಮೆ ನಿಗದಿತ ಸಮಯದಲ್ಲಿ ತಲುಪಲು ಸಾಧ್ಯವಾಗದೇ ಇರಬಹುದು. 24 ಗಂಟೆಯೊಳಗೆ ಉಡುಪಿ ತಲುಪುವುದು ಸಾಧ್ಯವಾಗದಿದ್ದರೆ ಬಂಧನ ನಡೆದ ಸ್ಥಳದ ಸಮೀಪದ ಮ್ಯಾಜಿಸ್ಟ್ರೇಟ್ ಮುಂದೆ ಆರೋಪಿಯನ್ನು ಹಾಜರುಪಡಿಸಿ, ಟ್ರಾನ್ಸಿಟ್ ರಿಮಾಂಡ್ ಪಡೆದು ನಂತರ ಉಡುಪಿ ನ್ಯಾಯಾಲಯಕ್ಕೆ ಕರೆತರುವುದು ಸಾಮಾನ್ಯ ಕ್ರಮ.
ಬಂಧಿಸಿದ ರಾಜ್ಯದಲ್ಲಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ನ್ಯಾಯಾಧೀಶರು ನಿಗದಿತ ಸಮಯದೊಳಗೆ ಉಡುಪಿ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸುವಂತೆ ಆದೇಶಿಸುತ್ತಾರೆ. ಹೀಗೆ ಆದೇಶ ಪಡೆದು ಬರುತ್ತಿರುವಾಗ ದಾರಿಯಲ್ಲಿ ವಾಹನ ಹಾಳಾಗಿ ನ್ಯಾಯಾಲಯ ನೀಡಿದ ಅವಧಿಯಲ್ಲಿ ಹಾಜರುಪಡಿಸಲು ಸಾಧ್ಯವಾಗದೇ ಇದ್ದಾಗ, ಅಲ್ಲಿನ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿ, ಸಮಸ್ಯೆಯನ್ನು ವಿವರಿಸಿ, ಮತ್ತೊಮ್ಮೆ ಅನುಮತಿಯನ್ನು ಪಡೆಯಬೇಕು.
“ನ್ಯಾಯಾಧೀಶರು, ತನಿಖಾಧಿಕಾರಿಯವರಿಂದಲೇ ವಿವರಣೆ ಕೇಳಿದ್ದಾರೆ. “ಆಗಸ್ಟ್ 10ರಂದು ಬಂಧನವಾಗಿತ್ತೆಂಬ ಪ್ರಶ್ನೆಗೆ ಉತ್ತರಿಸುವಾಗ BNSS Section 43ರಲ್ಲಿ ನಿರ್ದಿಷ್ಟಪಡಿಸಿರುವ ಅರೆಸ್ಟ್ ವಿಧಾನ ಹಾಗೂ Section 36ರ ಅರೆಸ್ಟ್ ಮೆಮೊ ಸೇರಿದಂತೆ ಸಂಬಂಧಿತ ದಾಖಲೆಗಳೂ ಪರಿಶೀಲನೆಗೆ ಬರುತ್ತವೆ.” ಅವರು BNSS Section 43 - Arrest how made Section 46 — No unnecessary restraint Section 47 — Person arrested to be informed of grounds of arrest and right to bail Section 48 — Arrest ದ ಬಗ್ಗೆ relative/friendಗೆ ಮಾಹಿತಿ ನೀಡುವ ಕರ್ತವ್ಯ Section 53 — Examination of arrested person by medical officer “ಈ ದಾಖಲೆಗಳ ಮೂಲಕ ಬಂಧನದ ದಿನಾಂಕ ಮತ್ತು ಸಮಯವನ್ನು ಸಮರ್ಥಿಸುವ ಸಾಧ್ಯತೆ ಇದೆ.”ಅದರ ಜೊತೆಗೆ ಅರೆಸ್ಟ್ ಮೆಮೊ, ಸ್ಟೇಷನ್/ಜಿಡಿ ಡೈರಿ, ಕೇಸ್ ಡೈರಿ, ಸಿಸಿಟಿವಿ ದೃಶ್ಯಗಳು, ಆರೋಪಿಯ ವೈದ್ಯಕೀಯ ಪರೀಕ್ಷೆಯ ದಾಖಲೆ, ಪೊಲೀಸ್ ಠಾಣೆಗೆ ಕರೆತಂದ ಸಮಯ, ವಾಹನ ಜಿಪಿಎಸ್/ಚಲನವಲನ ದಾಖಲೆ, ಬಂಧನದ ಬಗ್ಗೆ ಕುಟುಂಬಕ್ಕೆ ನೀಡಿದ ಮಾಹಿತಿ, ರಿಮಾಂಡ್ ಅರ್ಜಿ ಈ ಎಲ್ಲಾ ದಾಖಲೆಗಳನ್ನು ಒದಗಿಸುವ ಸಾಧ್ಯತೆ ಇದೆ. “ಹೀಗಾಗಿ ಈಗ ಕುತೂಹಲ, ಆರೋಪಿ ಕಿಶೋರ್ ಪೂಜಾರಿಯ ಹೇಳಿಕೆಯ ಮೇಲಷ್ಟೇ ಅಲ್ಲ; ಆ.10 ರಿಂದ ಆ.14ರವರೆಗಿನ ಬಂಧನದ chronologyಗೆ ತನಿಖಾಧಿಕಾರಿ ನೀಡಲಿರುವ ವಿವರಣೆಯ ಮೇಲೂ ನೆಟ್ಟಿದೆ.” ”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”