ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಕಾರ್ಯಕ್ಕೆ ಮೆಚ್ಚುಗೆ

ಬಾಂಬೆ: ಅಪರಾಧ ಜಗ್ಗತ್ತು ಇದೆಯಲ್ಲ, ಅದು ಯಾವತ್ತಿದ್ದರೂ ಕತ್ತಲೆ. ಅಲ್ಲಿ ಈಗ ಕಂಡದ್ದು, ಮರುಕ್ಷಣಕ್ಕೆ ಮಾಯವಾಗುತ್ತದೆ. ಬೈನೆ ಮರವನ್ನು ಕಡಿದಾಗ, ಅದರ ಬೇರುಗಳು ಮತ್ತೆ ಚಿಗುರುತ್ತದೆ. ಅದೇ ರೀತಿ ಭೂಗತ ಜಗ್ಗತ್ತು. ಅಲ್ಲೊಬ್ಬ Delete ಆದರೆ ಇಲ್ಲೊಬ್ಬ Enter ಆಗುತ್ತಾನೆ. ಆತ ಅದೆಷ್ಟು ದೊಡ್ಡ ಹೆಮ್ಮರವಾಗಿ ಬೆಳೆಯುತ್ತಾನೆ ಎಂದು ಊಹಿಸುವುದು ಬಲು ಕಷ್ಟ. ಈ ಕತ್ತಲ ಜಗತ್ತಿನಲ್ಲಿರುವ ತಿಮಿಂಗಿಲಗಳು ಮಾಡಿದ ಅಪರಾಧಕ್ಕೆ ಗಾಳ ಹಾಕಿ ಹಿಡಿಯುವ ಪೋಲಿಸರ ಕಸುಬಿಗೆ Big salute. ಯಾವ ಅಪರಾಧ ನಡೆದರೂ, ಕೃತ್ಯ ಎಸಗಿದಾತ ಏನಾದರೂ ಒಂದು ಹೆಜ್ಜೆಯನ್ನು ಬಿಟ್ಟು ಹೋಗಿರುತ್ತಾನೆ. ಆ ಹೆಜ್ಜೆಯನ್ನು ರಂಗೋಲಿಯ ಚುಕ್ಕಿಯನ್ನು ಜೋಡಿಸುವಂತೆ ಜೋಡಿಸಿ, ಪೂರ್ಣವಾದ ರಂಗೋಲಿಯನ್ನು ಬರೆಯುವುದು ಮಾತ್ರವಲ್ಲ, ಅದನ್ನು ಅಂದಗಾಣಿಸುವ ಜವಾಬ್ದಾರಿಯೂ ಪೋಲಿಸರದ್ದೇ. ಯಾವ ಚುಕ್ಕಿಯ ನಂತರ ಯಾವ ಚುಕ್ಕಿಗೆ ಗೆರೆಯನ್ನು ಎಳೆಯಬೇಕು ಎಂಬುದೇ ಪೋಲಿಸರ ಟಾಸ್ಕ್. ತಮಗೆ ಸಿಕ್ಕ ಮಾಹಿತಿಯನ್ನು ಕಲೆಹಾಕಿ, ಅದನ್ನು ವಿಂಗಡಿಸಿ ಜೋಡಿಸಲು ತಾಳ್ಮೆ ಅಗತ್ಯ. ಅಂತಹ ತಾಳ್ಮೆಯಿಂದ ಮಾಡಿದ ಕೆಲಸಕ್ಕೆ ಪರಿಪೂರ್ಣ ಫಲ ಸಿಗುತ್ತದೆ ಎಂಬುದಕ್ಕೆ ಬೀದರ್ ಪೋಲಿಸರು ಪತ್ತೆಹಚ್ಚಿದ ಪ್ರಕರಣವೇ ಸಾಕ್ಷಿ. ಅದೇ ರೀತಿಯಲ್ಲಿ ಉಡುಪಿ ಪೋಲಿಸರು ಡೇವಿಡ್ ಹತ್ಯೆ ಕೇಸಿನಲ್ಲಿ ಮಗ್ನರಾಗಿದ್ದಾರೆ. ದಿನದಿಂದ ದಿನಕ್ಕೆ ಆಗುಂಬೆಯ ಘಾಟಿಯ ತಿರುವಿನಂತೆ ಪ್ರಕರಣ ತಿರುವುಗಳನ್ನು ಪಡೆಯುತ್ತಿದ್ದರೂ, ಪೋಲಿಸರು ಸಮತೋಲನವನ್ನು ಕಾಯ್ದುಕೊಂಡು ಮುನ್ನುಗುತ್ತಿದ್ದಾರೆ. Just read it..! ಬೀದರ್ ನಗರದಲ್ಲಿ 2025ರ ಜನವರಿ 16 ರಂದು ಎಟಿಎಂ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿ ಸುಮಾರು ₹ 83 ಲಕ್ಷ ರೂ. ದರೋಡೆ ಮಾಡಲಾಗಿತ್ತು. ಘಟನೆಯಲ್ಲಿ ಒಬ್ಬ ಎಟಿಎಂ ಸಿಬ್ಬಂದಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಖುದ್ದು ಜಿಲ್ಲಾ ಎಸ್ಪಿ ಪ್ರದೀಪ್ ಗುಂಟಿಯವರೇ ತಮ್ಮ ತಂಡದೊಂದಿಗೆ ಬಿಹಾರದ ವೈಶಾಲಿ ಜಿಲ್ಲೆಯ ದಾಮೋದರಪುರದಲ್ಲಿ ಕಾರ್ಯಾಚರಣೆ ನಡೆಸಿ ಅಲೋಕ್ ಕುಮಾರ್ (32) ಹಾಗೂ ಅಮನ್ ಕುಮಾರ್ (28) ಅವರನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ 74,251 ಸಿಡಿಆರ್ ಹಾಗು ಐಪಿಡಿಆರ್ ದಾಖಲೆಯನ್ನು ಪರಿಶೀಲನೆ ನಡೆಸಿ, ಬಿಹಾರ, ಜಾರ್ಖಾಂಡ, ಪಶ್ಚಿಮ ಬಂಗಾಲ, ಹೈದರಾಬಾದ್, ಬೀದರ್ ಸೇರಿದಂತೆ ಒಟ್ಟು 365 ಸಿಸಿಟಿವಿಯನ್ನು ದೃಶ್ಯಾವಳಿಗಳನ್ನು ಅಧ್ಯಯನ ನಡೆಸಿದ್ದಾರೆ. 108 ಜನರನ್ನು ವಿಚಾರಣೆ ನಡೆಸಿದ್ದು, 6 ಜೈಲುಗಳಲ್ಲಿ ತನಿಖೆ ನಡೆಸಿದ್ದಾರೆ. ಅಲ್ಲದೇ ಆರೋಪಿಗಳು ದೆಹಲಿ, ಪಾಟ್ನಾ, ಪಂಜಾಬ್ ಹೈಕೋರ್ಟ್ನಲ್ಲಿ ಹಾಕಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ಯಶಸ್ವಿಯಾಗಿದ್ದಾರೆ ಎದುರಿಸಿದ್ದಾರೆ.
76 ಬಾರಿ ಪಾಟ್ನಾ, ಜೈಪುರ, ಮುಂಬೈ, ಪುಣೆ, ರಾಂಚಿ, ಜಲಂಧರ್, ಕೋಲ್ಕತ್ತಾ ಸೇರಿದಂತೆ ವಿವಿಧ ರಾಜ್ಯಗಳಿಗೆ ಪ್ರಯಾಣಿಸಿ ಒಟ್ಟು 2,64,140 ಕಿಮೀ ಪ್ರಯಾಣಿಸಿ 11 ತಿಂಗಳ ಸತತ ಪ್ರಯತ್ನದ ಬಳಿಕ ಯಾವ ರಾಜ್ಯದ ಪೋಲಿಸರಿಗೆ ಸಿಗದೇ ಇದ್ದ, ಬಿಹಾರ Top 10 most wanted ಆರೋಪಿಗಳ ಪಟ್ಟಿಯಲ್ಲಿದ್ದ ಇಬ್ಬರನ್ನು ಬಂಧಿಸಿದ್ದಾರೆ.
ಇದು ಬೀದರ್ ಪೋಲಿಸರ ಧೈರ್ಯ, ತಾಳ್ಮೆ ಮತ್ತು ಸಾಹಸವಾದರೇ, ಉಡುಪಿ ಜಿಲ್ಲೆಯ ಪೋಲಿಸರು ಇದರಿಂದ ಹೊರತಾಗಿಲ್ಲ. 2026 ರ ಆಗಸ್ಟ್ 7 ರಂದು ಶಿರ್ವ ಠಾಣಾ ವ್ಯಾಪ್ತಿಯಲ್ಲಿ ಮಾಜಿ ರೌಡಿಶೀಟರ್ ಡೇವಿಡ್ನನ್ನು ಗುಂಡಿಕ್ಕಿ ಕೊಂಡ ಶೂಟರ್ಗಳನ್ನು ಘಟನೆ ನಡೆದ 6 ಗಂಟೆಯೊಳಗೆ ಬಂಧಿಸಿದ್ದಾರೆ. ನಂತರ ನಡೆದ ಕಾರ್ಯಾಚರಣೆ ರೋಚಕ. ಈ ಕಾರ್ಯಾಚರಣೆಯಲ್ಲಿ ಹರಿಯಾಣ, ಬಾಂಬೆ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಿಗೆ ಪೋಲಿಸರನ್ನು ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಅವರು ಕಳುಹಿಸಿದ್ದು, ತಾವೇ ಪ್ರಕರಣವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ್, ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ. ಇಬ್ಬರು ಮಾತು ಕಡಿಮೆ. ನಾಯಕ ನೀಡಿದ ಗುರಿಯನ್ನು ನಿರ್ದಿಷ್ಟ ಸಮಯದೊಳಗೆ ಮಾಡಿ ಮುಗಿಸುವವರು. ಅನುಭವಿಗಳಾಗಿರುವ ಇಬ್ಬರು ಅಧಿಕಾರಿಗಳು ತರುಣ ಪಿಎಸ್ಐಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ, ಪ್ರಕರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
“ಜಿಲ್ಲಾ ಎಸ್ಪಿಯವರ ಹೆಸರಿನಲ್ಲಿ ಹರಿ, ರಾಮ, ಶಂಕರ ಇದ್ದಾರೆ. ಹರಿ ಅಂದರೆ ರಕ್ಷಕ, ರಾಮ ಎಂದರೆ ಧರ್ಮವನ್ನು ಕಾಪಾಡುವವನು. ಶಂಕರ ಅಂದರೆ ಶಿವ. ಭೋಲೆನಾಥ ಎಷ್ಟು ಬೇಗ ಒಲಿಯುತ್ತಾನೋ, ಅಷ್ಟೇ ಕೋಪಿಷ್ಠ. ಅನಾಚಾರ, ಅಶಾಂತಿಯನ್ನು ಹೋಗಲಾಡಿಸಲು ತನ್ನ ಮೂರನೇ ಕಣ್ಣನ್ನು ತೆರೆಯುತ್ತಾನೆ. ಹೀಗೆ 3 ವ್ಯಕ್ತಿತ್ವಗಳ ಹೆಸರನ್ನು ಹೊಂದಿರುವ ಗುಳಿಗೆನ್ನೆಯ ಹುಡುಗ ತನ್ನ ತಂಡವನ್ನು ಸಮರ್ಥವಾಗಿ ಕಟ್ಟಿ, ಡೇವಿಡ್ ಪ್ರಕರಣವನ್ನು ಭೇದಿಸಿದ್ದಾರೆ. ಈ ತಂಡದಲ್ಲಿ ಶ್ರಮಿಸಿದ ಪೋಲಿಸ್ ನಿರೀಕ್ಷಕರು, ಸಬ್ ಇನ್ಸ್ಪೆಕ್ಟರ್, ಕ್ರೈಮ್ ಸಿಬ್ಬಂದಿ, ತಾಂತ್ರಿಕ ವರ್ಗದ ಬಗ್ಗೆ ಬರೆಯಲೇಬೇಕು. ಡೆತ್ ಓವರ್ನಲ್ಲಿ ಹಾಕಿದ ಗೂಗ್ಲಿಗೆ ಎಷ್ಟು ವಿಕೆಟ್ ಉರುಳಿತು..? ಡೆತ್ಓವರ್ ಹಾಕಿದವರು ಯಾರು..? ಎಂಬ ಕೂತುಹಲವನ್ನು ಉಳಿಸಿಕೊಳ್ಳಿ. ಮುಂದಿನ ಸಂಚಿಕೆಯಲ್ಲಿ ಸಿಗೋಣ. ”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”