ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಂಚಾರಿ ಪೀಠ ಕಾರ್ಕಳ ನ್ಯಾಯಾಲಯದ ನ್ಯಾಯಾಧೀಶ ಸಮೀವುಲ್ಲಾ ಅವರಿದ್ದ ಪೀಠದ ಆದೇಶ

ಉಡುಪಿ: ಹೆಬ್ರಿ ಠಾಣಾ ವ್ಯಾಪ್ತಿಯ ಚಾರಾ ಗ್ರಾಮದ ಮಂಡಾಡಿಜೆಡ್ಡುವಿನ ಕಾರಾಡಿ ಎಂಬಲ್ಲಿ ಆ್ಯಸಿಡ್ ಎರಚಿ ಕೊಲೆ ಮಾಡಲು ಯತ್ನಿಸಿದ ಪ್ರಕರಣದ ಆರೋಪಿಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಂಚಾರಿ ಪೀಠ ಕಾರ್ಕಳ ನ್ಯಾಯಾಲಯದ ನ್ಯಾಯಾಧೀಶ ಸಮೀವುಲ್ಲಾ ಅವರು ದೋಷಿ ಎಂದು ಆದೇಶಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಎ.21 ರಂದು ಪ್ರಕಟಿಸುವುದಾಗಿ ಕಾಯ್ದಿರಿಸಿದ್ದಾರೆ. ರತೀಶ್ ಕೆಟಿ, ಶಿಕ್ಷೆಗೆ ಗುರಿಯಾದ ಆರೋಪಿ. ಪ್ರಕರಣದ ಹಿನ್ನಲೆ ಆರೋಪಿ ರತೀಶ್ ಕೆ.ಟಿ ಮತ್ತು ಸುಧೀರ್ ಪಿಎ ಸ್ನೇಹಿತರಾಗಿದ್ದು ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದರು. 2022 ರ ಫೆ. 28 ರಂದು ಚಾರಾ ಗ್ರಾಮದ ಮಂಡಾಡಿಜೆಡುವಿನ ಕಾರಾಡಿಗೆ ಬಂದಿದ್ದು ಆ ಸಮಯದಲ್ಲಿ ಅವರಿಬ್ಬರು ಮದ್ಯಪಾನ ಮಾಡಿದ್ದರು. ಆಗ ಸುಧೀರ್, ಆರೋಪಿ ರತೀಶ್ನು ಅಜಿತ್ ಅಗಸ್ಟಿನ್ ಒಳ್ಳೆಯ ರೀತಿಯಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಾರೆ. ನೀನು ಮುಂದಕ್ಕೆ ಸರಿಯಾಗಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುವಂತೆ ತಿಳಿಸಿದಾಗ, ನಶೆಯಲಿದ್ದ ಆರೋಪಿ, ಹಲ್ಲೆ ನಡೆಸಿದ್ದನು. ಆಗ ಸ್ನೇಹಿತರು ಜಗಳವನ್ನು ಬಿಡಿಸಿದ್ದರು. ನಂತರ 2022 ರ ಮಾ.1 ರಂದು ಸಂಜೆ ಸ್ನೇಹಿತರ ಹುಟ್ಟುಹಬ್ಬವನ್ನು ಆಚರಿಸಿ, ರೂಮಿನ ಹೊರಗಡೆ ಮೆಟ್ಟಲಿನ ಬದಿಯಲ್ಲಿ, ಮಲಗಿದ್ದ ಸುಧೀರ್ ಅವರ ಮೇಲೆ ಆರೋಪಿ ರತೀಶ್, ಕೊಲುವ ಉದ್ದೇಶದಿಂದ ರಬ್ಬರ್ ಟ್ಯಾಪಿಂಗ್ ಗೆ ಬಳಸುವ ಪೊರ್ ಮಿಕ್ ಆಸೀಡ್ ನ್ನು ಮಗ್ ನಲ್ಲಿ ಹಾಕಿಕೊಂಡು ಮುಖಕ್ಕೆ ಹಾಗೂ ಮೈ ಮೇಲೆ ಎಸೆದು ಕೊಲೆ ಮಾಡಲು ಪ್ರಯತ್ನಿಸಿದ್ದರು. ಈ ಬಗ್ಗೆ ಹೆಬ್ರಿ ಠಾಣಾಧಿಕಾರಿ ನ್ಯಾಯಾಲಯ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”