ಕಟಪಾಡಿ ಎಸ್ವಿಎಸ್ ಕಾಲೇಜಿನಲ್ಲಿ ಪೋಕ್ಸೊ ಕಾಯ್ದೆಯ ಬಗ್ಗೆ ಅರಿವು ಕಾರ್ಯಕ್ರಮ

ಪೋಕ್ಸೊ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ, ಅಪರಾಧಿಗಳಿಗೆ ಕಠಿಣ ಶಿಕ್ಷೆ: ನ್ಯಾ| ಎಂ. ಪುರುಷೋತ್ತಮ್ ಕಟಪಾಡಿ: ಪೋಕ್ಸೋ ಪ್ರಕರಣದ ಸಂತ್ರಸ್ತೆಯರಿಗೆ ನ್ಯಾಯಾಲಯವು ಪ್ರಕರಣದ ತೀರ್ಪಿನಲ್ಲಿ ಪರಿಹಾರವನ್ನು ಆದೇಶಿಸುತ್ತದೆ. ಆಕೆಯ ಮುಂದಿನ ಜೀವನಕ್ಕೆ ಸಹಕಾರಿಯಾಗುವಂತೆ, ಸಮಾಜದಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳಲು ಪ್ರಕರಣದ ಗಂಭೀರತೆಯ ಆಧಾರದಲ್ಲಿ ಪರಿಹಾರವನ್ನು ನಿರ್ಧಾರಿಸಲಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಮ್.ಪುರುಷೋತ್ತಮ್ ಸಲಹೆ ನೀಡಿದರು. ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಯಂತೆ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಕಾಲೇಜುಗಳಲ್ಲಿ ಪೋಕ್ಸೊ ಕಾಯ್ದೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮದ ಅಂಗವಾಗಿ, ಗುರುವಾರ ಕಟಪಾಡಿಯ ಎಸ್ವಿಎಸ್ ಪಿಯು ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ನೀಡಿದರು. ಸಾಕ್ಷಿಗಳು ನ್ಯಾಯಾಲಯದಲ್ಲಿ ಸರಿಯಾದ ಹೇಳಿಕೆ ನೀಡದೇ ಇದ್ದರೂ, ವೈದ್ಯಕೀಯ ಪರೀಕ್ಷೆಯ ಆಧಾರದಲ್ಲಿ ಆರೋಪವನ್ನು ಸಾಭೀತು ಪಡಿಸಲು ಸಾಧ್ಯವಿದೆ. ಆರೋಪ ಸಾಭೀತಾದಲ್ಲಿ ಕನಿಷ್ಠ 10 ವರ್ಷದಿಂದ ಜೀವಾವಧಿ ಶಿಕ್ಷೆ ನೀಡುವ ಅವಕಾಶ ಈ ಕಾಯ್ದೆಯಲ್ಲಿದೆ. ಕೊಲೆ ಅಥವಾ ಇತರ ಪ್ರಕರಣಗಳಲ್ಲಿ ಜೀವಾವಧಿ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಗೆ ಒಳಗಾದವರಿಗೆ ಜೈಲಿನಲ್ಲಿ ಸನ್ನಢತೆಯ ಆಧಾರದಲ್ಲಿ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಲು ವಿನಂತಿಸುವ ಅವಕಾಶ ಇದೆ. ಆದರೆ ಪೋಕ್ಸೊ ಕಾಯ್ದೆಯಲ್ಲಿ ಶಿಕ್ಷೆಗೆ ಒಳಗಾದರೇ ಆರೋಪಿ ಈ ಅವಕಾಶದಿಂದ ವಂಚಿತರಾಗುತ್ತದೆ. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ನಿತ್ಯಾನಂದ ಶೆಣೈ, ವೆಂಕರಮಣ ಭಟ್, ಪ್ರಾಂಶುಪಾಲ ಡಾ.ದಯಾನಂದ್ ಪೈ ಉಪಸ್ಥಿತರಿದ್ದರು.
“ಅನೇಕರಲ್ಲಿ ಪೋಲಿಸ್ ಠಾಣೆಗೆ ನೀಡುವುದೇ ದೂರು ಎಂಬ ತಪ್ಪು ಕಲ್ಪನೆ ಇದೆ. ಬಿಎನ್ಎಸ್ಎಸ್ ಸೆಕ್ಷನ್ 2 (1)(h) ನಲ್ಲಿ ದೂರು ಎಂದರೇ ಏನು..? ಎಂದು ವಿವರಿಸಲಾಗಿದೆ. ಅದರಂತೆ ಪೋಲಿಸ್ ಠಾಣೆಗೆ ನೀಡುವುದು ಪ್ರಥಮ ಮಾಹಿತಿ ಮಾತ್ರ. ಅದರ ಆಧಾರದಲ್ಲಿ ಅವರು ಎಫ್ಐಆರ್ ( ಪ್ರಥಮ ವರ್ತಮಾನ ವರದಿ) ಯನ್ನು ದಾಖಲಿಸುತ್ತಾರೆ. ನಂತರ ನ್ಯಾಯಾಲಯದಲ್ಲಿ ದೂರು ದಾಖಲಾಗುತ್ತದೆ. ನ್ಯಾಯಾಲಯದಲ್ಲಿ ಮಾತ್ರ ದೂರು ದಾಖಲಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”