ನಗರಠಾಣಾ ಪೋಲಿಸರ ಕ್ಷಿಪ್ರ ಕಾರ್ಯಾಚರಣೆ

ಉಡುಪಿ: ನಗರದಲ್ಲಿ ಗಣ್ಯ ವ್ಯಕ್ತಿಗಳಿಗೆ ಹನಿಟ್ರಾಫ್ ಮಾಡಿ ಹಣವನ್ನು ಲಪಟಾಯಿಸುತ್ತಿದ್ದ ಖತರ್ನಾಕ್ ವಂಚಕಿ, ಪಡುಬಿದ್ರೆಯ ನಿವಾಸಿ ಜೀನತ್ಳನ್ನು ಉಡುಪಿ ನಗರ ಠಾಣಾ ಪೋಲಿಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 5 ದಿನ ಪೋಲಿಸ್ ಕಸ್ಟಡಿಗೆ ಪಡೆಯಲಾಗಿದೆ. ಪ್ರಕರಣದ ಹಿನ್ನಲೆ ವ್ಯಕ್ತಿಯೋರ್ವರು ನೀಡಿದ ದೂರಿನಂತೆ ಜೀನತ್ ಎಂಬಾಕೆಯೊಂದಿಗೆ ಜೊತೆಯಾಗಿ ರಿಯಲ್ ಎಸ್ಟೇಟ್ ಉದ್ಯಮವನ್ನು ಆರಂಭಿಸಿದ್ದರು. ಆಕೆಯನ್ನು ನಂಬಿ ಹೂಡಿಕೆ ಮಾಡುವ ಉದ್ದೇಶದಿಂದ ₹ 70 ಲಕ್ಷವನ್ನು ಆಕೆಗೆ ನೀಡಿದ್ದಾರೆ. ಆ ಹಣವನ್ನು ಆಕೆಯೂ ಜಮೀನು ಖರೀದಿಗೆ ಬಳಸದೇ ತನ್ನ ಸ್ವಂತ ಉದ್ದೇಶಗಳಿಗಾಗಿ ಬಳಿಸಿಕೊಂಡು ಮೋಸ ಮಾಡಿದ್ದಾಳೆ. ಪಾಲುದಾರರು ತನ್ನ ಕಛೇರಿಯನ್ನು ಸ್ಥಗಿತಗೊಳಿಸುವಾಗ ಕೆಲವು ರಹಸ್ಯ ಕಡತಗಳು ಮತ್ತು ಪೆನ್ಡ್ರೈವ್ ಸಿಕ್ಕಿದ್ದು, ಅದರಲ್ಲಿ ಹಲವಾರು ಪ್ರಭಾವಿ ಗಣ್ಯ ವ್ಯಕ್ತಿಗಳ ಖಾಸಗಿ ಮತ್ತು ಅಶ್ಲೀಲ ಛಾಯಾಚಿತ್ರಗಳು ಹಾಗೂ ವಿಡಿಯೋಗಳು ಇರುವುದು ಪತ್ತೆಯಾಗಿದೆ. ಜೀನತ್ಳ ಬಳಿ ₹ 70 ಲಕ್ಷ ಹಣವನ್ನು ವಾಪಾಸು ನೀಡುವಂತೆ ಕೇಳಿದಾಗ, ಆಕೆಯೂ ದೂರುದಾರರ ಹೊಸ ಕಛೇರಿಗೆ ಬಂದು ಮತ್ತಷ್ಟು ಹಣಕ್ಕೆ ಬೇಡಿಕೆ ಇಡಲು ಪ್ರಾರಂಭಿಸಿದ್ದು, ಹಣ ನೀಡದಿದ್ದರೆ ದೂರುದಾರರ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಅಲ್ಲದೆ ದೂರುದಾರರ ಅಶ್ಲೀಲ ವಿಡಿಯೋಗಳಿವೆ ಎಂದು ಹೇಳಿ ನಿರಂತರವಾಗಿ ಬ್ಯಾಕ್ಮೇಲ್ ಮಾಡತೊಡಗಿದ್ದಲ್ಲದೆ, ದೂರುದಾರರ ಹೆಂಡತಿ ಮಕ್ಕಳನ್ನು ಕಿಡ್ನಾಪ್ ಮಾಡಿ, ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಸಬೀನಾ ಇಲಿಯಾಸ್ ಹಾಗೂ ಇತರರು ಆರೋಪಿತೆಯೊಂದಿಗೆ ಸೇರಿ ಬಾಕ್ಮೇಲ್ ಮಾಡಿ ಆಕ್ರಮವಾಗಿ ಹಣ ವಸೂಲಿ ಮಾಡಿ ವಂಚನೆಯ ಜಾಲವನ್ನು ನಡೆಸುತ್ತಿರುವುದಾಗಿದೆ ಎಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರ ಠಾಣಾ ಪಿಎಸ್ಐ ಭರತೇಶ್ ಕಂಕಣವಾಡಿ ತಂಡವು ಈಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತೆಯಿಂದ ಯಾರಿಗಾದರೂ ಮೋಸ ಮತ್ತು ವಂಚನೆ ಆಗಿದ್ದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”