2025 ನೇ ಸಾಲಿನ ಅಧ್ಯಕ್ಷರಾದ ಜೇಸಿ. ರಿತೇಶ್ ಸುವರ್ಣ ನೂತನ ಅಧ್ಯಕ್ಷರಾದ ಜೇಸಿ ವಿಪುಲ್ ಅವರಿಗೆ ಅಧಿಕಾರ ಹಸ್ತಾಂತರ

ಉಡುಪಿ: ಜೆಸಿಐ ಉಡುಪಿ ಇಂದ್ರಾಳಿ ಘಟಕದ 2026 ನೇ ಸಾಲಿನ ಪದಪ್ರದಾನ ಸಮಾರಂಭವು ಹೋಟೆಲ್ ಶಾರದಾ ಇಂಟರ್ನ್ಯಾಷನಲ್ನಲ್ಲಿ ಇತ್ತೀಚೆಗೆ ನಡೆಯಿತು. 2025 ನೇ ಸಾಲಿನ ಅಧ್ಯಕ್ಷರಾದ ಜೇಸಿ. ರಿತೇಶ್ ಸುವರ್ಣ ನೂತನ ಅಧ್ಯಕ್ಷರಾದ ಜೇಸಿ ವಿಪುಲ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಅಂತರಾಷ್ಟ್ರೀಯ ಮಹಿಳಾ ಕ್ರೀಡಾಪಟು ಅರುಣಕಲಾ ರಾವ್ ಹಾಗು ವಲಯ ಅಧ್ಯಕ್ಷ ಜೆಎಫ್ಎಫ್ ಸಂತೋಷ್ ಶೆಟ್ಟಿ ಭಾಗವಹಿಸಿದರು. ಇನ್ಸ್ಟಾಲೇಷನ್ ಆಫೀಸರ್ ಆಗಿ ವಲಯ 15ರ ಉಪಾಧ್ಯಕ್ಷ ಜೆಎಫ್ಎಂ ಪ್ರದೀಪ್ ಶೆಟ್ಟಿ, ಹಿರಿಯ ಸದಸ್ಯರಾದ ಜೇಸಿ.ರಾಧಾಕೃಷ್ಣ, ಘಟಕದ ಪೂರ್ವ ಅಧ್ಯಕ್ಷರುಗಳಾದ ಜೇಸಿ.ಅಶೋಕ್ ಪೂಜಾರಿ, ಜೇಸಿ ಎಂ.ಏನ್ ನಾಯಕ್, ಜೇಸಿ.ಜ್ಯೋತಿ ಪ್ರಶಾಂತ್, ಜೇಸಿ.ಕೀರ್ತೆಶ್, ಜೇಸಿ.ಡಾ.ಚಿತ್ರ ನೆಗಳೂರ್, ರಾಷ್ಟ್ರೀಯ ತರಬೇತುದಾರರಾದ ಜೇಸಿ ಡಾ.ವಿಜಯ್ ನೆಗಳೂರ್ ಹಾಗೂ ಸದಸ್ಯರು ಭಾಗವಹಿಸಿದ್ದರು. ನೂತನ ಕಾರ್ಯದರ್ಶಿ ಜೇಸಿ.ಹರಿಪ್ರಸಾದ್ ವಂದನಾರ್ಪಣೆ ಗೈದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”