ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ವಿದ್ಯಾರ್ಥಿಗಳು ಕೂಡ ಇದರ ಅನುಭವವನ್ನು ಪಡೆದುಕೊಳ್ಳಿ

ಕಾಪು: ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಪಿಎಲ್ ಧರ್ಮ ಅವರು, ಪತ್ನಿ, ಪುತ್ರಿ ಮತ್ತು ಅಳಿಯನೊಂದಿಗೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಮಾರಿಯಮ್ಮ ದೇವಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಹಾಗೂ ಮಾತೃ ವೈಭವ ಸೇವಾ ಸಮಿತಿಯಿಂದ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾವು ಬರೆದ ಪುಸ್ತಕಕ್ಕೆ ಪ್ರತೀ ನವರಾತ್ರಿ ಸಂದರ್ಭ ವಿಶೇಷ ಪೂಜೆ ಸಲ್ಲುತ್ತದೆ. ನನಗಿದನ್ನ ಕೇಳಿದಾಗ ಬಹಳ ಸಂತೋಷವಾಯಿತು, ಈ ರೀತಿಯಾಗಿ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡರೆ ಬಹಳ ಒಳ್ಳೆಯದು, ಇದನ್ನು ಬರೆದವರಿಗೆ, ಬರೆಯುತ್ತಾ ಇರುವವರಿಗೆ ಮತ್ತು ಇನ್ನು ಬರೆಯುವವರಿಗೆ ಎಲ್ಲರಿಗೂ ಅಮ್ಮ ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು. ನನಗಾಗಿರುವ ಅನುಭವ ಎಲ್ಲರಿಗೂ ಆಗಬೇಕು, ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ವಿದ್ಯಾರ್ಥಿಗಳು ಕೂಡ ಇದರ ಅನುಭವವನ್ನು ಪಡೆದುಕೊಳ್ಳಿ, ನಾನು ಮತ್ತು ಮನೆಯವರು ನವದುರ್ಗಾ ಲೇಖನ ಪುಸ್ತಕವನ್ನು ಬರೆದು ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿಕೊಂಡಿದ್ದೇವೆ, ಮತ್ತು ಇಬ್ಬರು ಕೂಡಾ ಲೇಖನದ ಶಾಶ್ವತ ಸೇವೆಯನ್ನು ನೀಡಿದ್ದೇವೆ, ಎಲ್ಲರೂ ಒಮ್ಮೆ ಕ್ಷೇತ್ರಕ್ಕೆ ಬಂದು ತಾಯಿಯ ಮಹಿಮೆಯನ್ನು ಕಣ್ತುಂಬಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಅಭಿವೃದ್ಧಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಹಾಗೂ ಮಾತೃ ವೈಭವ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ ಬಾಲಾಜಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”