“ ಎ ಕ್ರಿಟಿಕಲ್ ಸ್ಟಡಿ ಆಫ್ ದಿ ಎನ್ಪೋರ್ಸ್ಮೆಂಟ್ ಆಫ್ ದಿ ಡಿಸಿಶನ್ ಆಫ್ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್" ಎಂಬ ಮಹಾಪ್ರಬಂಧಕ್ಕೆ ಪಿಎಚ್ಡಿ

ಉಡುಪಿ: ವೈಕುಂಠ ಬಾಳಿಗ ಕಾನೂನು ಕಾಲೇಜಿನ ಪ್ರಾಚಾರ್ಯೆ ಸುರೇಖಾ ಕೆ. ಅವರಿಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು “ ಎ ಕ್ರಿಟಿಕಲ್ ಸ್ಟಡಿ ಆಫ್ ದಿ ಎನ್ಪೋರ್ಸ್ಮೆಂಟ್ ಆಫ್ ದಿ ಡಿಸಿಶನ್ ಆಫ್ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್" ಎಂಬ ಮಹಾಪ್ರಬಂಧಕ್ಕೆ ಪಿಎಚ್ಡಿ ಪದವಿಯನ್ನು ನೀಡಿದೆ. ಇವರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಅನು ಪ್ರಸನ್ನನ್ ಅವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧವನ್ನು ಪೂರ್ಣಗೊಳಿಸಿದ್ದಾರೆ. ಸುರೇಖಾ ಕೆ. ಅವರು ಮಲ್ಪೆಯ ಕೃಷ್ಣ ಮತ್ತು ಗಿರಿಜಾ ಮಬಿಯಾನ್ ದಂಪತಿಯ ಪುತ್ರಿಯಾಗಿದ್ದು, ಸದಾಶಿವ ಆದಿಉಡುಪಿ ಅವರ ಪತ್ನಿ ಹಾಗೂ ಸೂರಜ್ ಪೂಜಾರಿ ಮಲ್ಪೆ ಅವರ ಸಹೋದರಿಯಾಗಿದ್ದಾರೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”