ಹೆಬ್ರಿ ಬಿಜೆಪಿ ವತಿಯಿಂದ ಸನ್ಮಾನ

ಹೆಬ್ರಿ: ಇಲ್ಲಿನ ಮುದ್ರಾಡಿ ಗ್ರಾಮದಲ್ಲಿ ಹುಟ್ಟಿ ಬೆಳೆದು, ಕನ್ನಡ ಮಧ್ಯಮ ಶಾಲೆಗಳಲ್ಲಿ ಕಲಿತು, ಉನ್ನತ ವ್ಯಾಸಂಗ ಮಾಡಿ, ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ,ಇದೀಗ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವು ಹೆಬ್ರಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಮುದ್ರಾಡಿ ಸಮುದಾಯ ಭವನದಲ್ಲಿ ಮಾ.15 ರಂದು ಜರಗಿತು. ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂಎ. ಬಿ.ಎಡ್ ಪದವಿ ಪಡೆದು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಮುದ್ರಾಡಿಯ ಕೃಷ್ಣ ಶೆಟ್ಟಿಗಾರ್, ಪೂರ್ಣಿಮ ದಂಪತಿಯ ಪ್ರಥಮ ಪುತ್ರಿ ಶಿವಾನಿ ಹಾಗು ಉಪ್ಪಳ ಮಲ್ಲಿಕಾರ್ಜುನ, ಗುಲಾಬಿ ದಂಪತಿಗಳ ಮಗಳಾದ ರಮ್ಯರವರು ಎಂಎ. ಬಿಎಡ್ನಲ್ಲಿ ಪ್ರಥಮ ಶ್ರೇಣಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದು ಸಾಧನೆ ಮಾಡಿದ ಇಬ್ಬರನ್ನು ಸನ್ಮಾನಿಸಲಾಯಿತು. ಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯಕ್ ಮಾತನಾಡಿ, ಕನ್ನಡ ಶಾಲೆಯಲ್ಲಿ ಕಲಿತು ಕಷ್ಟದಲ್ಲೂ ಉನ್ನತ ವ್ಯಾಸಂಗ ಮಾಡಿ, ಛಲ ಒಂದಿದ್ದರೆ ಯಾವುದೇ ಶಿಕ್ಷಣಕ್ಕೆ ಅಡ್ಡಿಯಾಗುವುದ್ದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಇಲ್ಲಿಯ ತಂಡ ಒಳ್ಳೆಯ ಕೆಲಸ ಮಾಡಿ ಶಿಕ್ಷಣದಲ್ಲಿ ಸಾಧನೆ ಮಾಡಿದ ಇಬ್ಬರನ್ನು ಅಭಿನಂದಿಸುವ ಕಾರ್ಯ ಮಾಡಿದೆ ಎಂದರು. ಬಿ ಜೆ ಪಿ ಮಂಡಲ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ, ಮುದ್ರಾಡಿ ಗ್ರಾ.ಪಂ ನಿಕಟಪೂರ್ವ ಉಪಾಧ್ಯಕ್ಷೆ ರಮ್ಯಕಾಂತಿ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ ಮುದ್ರಾಡಿ ಖ್ಯಾತ ವೈದ್ಯ ಎಂ.ಎಸ್. ರಾವ್ ಇಬ್ಬರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ರಮೇಶ್ ಕುಮಾರ್ ಶಿವಪುರ, ಮುದ್ರಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ವಸಂತಿ ಪೂಜಾರಿ, ನಿಕಟಪೂರ್ವ ಸದಸ್ಯರಾದ ಜಗದೀಶ ಪೂಜಾರಿ, ಮುದ್ರಾಡಿ ಗ್ರಾ.ಪಂ ನಿಕಟಪೂರ್ವ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ಶೆಟ್ಟಿ, ಸನತ್ ಕುಮಾರ್ ಉಪಸ್ಥಿತರಿದ್ದರು. ಗಣಪತಿ ಎಂ. ಸ್ವಾಗತಿಸಿ, ವಂದಿಸಿದರು. ಮುದ್ರಾಡಿ ಗ್ರಾ.ಪಂ ನಿಕಟಪೂರ್ವ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ಶೆಟ್ಟಿ, ಸನತ್ ಕುಮಾರ್ ಉಪಸ್ಥಿತರಿದ್ದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”