ಹುಸಿಯಾದ "ಆಪರೇಶನ್ ಮಂಡೇ"

ಉಡುಪಿ: "‘ರಾತ್ ಭರ್ ಕಾ ಹೈ ಮೆಹಮಾನ್ ಅಂಧೇರಾ, ಕಿಸ್ ಕೆ ರೋಕೆ ರುಕಾ ಹೈ ಸವೇರಾ…’ ಭಯ ಮತ್ತು ಆತಂಕ ಎಷ್ಟೇ ಆವರಿಸಿದರೂ, ಸತ್ಯ ಮತ್ತು ನೆಮ್ಮದಿ ಅಂತಿಮವಾಗಿ ಗೆಲ್ಲುತ್ತವೆ ಎಂಬುದನ್ನು ನೆನಪಿಸುವಂತೆಯೇ, ದುಷ್ಕರ್ಮಿಗಳು ಹೂಡಿದ್ದ "ಆಪರೇಶನ್ ಮಂಡೇ" ಸಂಚು ವಿಫಲವಾಗಿದೆ. ಹೌದು, ಉಡುಪಿಯ ಜಿಲ್ಲಾ ನ್ಯಾಯಾಲಯ ಹಾಗು ಬೆಂಗಳೂರಿನ ಇಸ್ರೇಲ್ ಕಾನ್ಸುಲೇಟ್ನಲ್ಲಿ 6 ರಾಸಾಯನಿಕ ಬಾಂಬ್ಗಳು (ಐಸೋಪ್ರೊಪನಾಲ್) ಸ್ಫೋಟಗೊಳ್ಳಲಿವೆ. "ಆಪರೇಷನ್ ಮಂಡೇ" ಹೆಸರಲ್ಲಿ ಸೋಮವಾರ ಮಧ್ಯಾಹ್ನ 1 ಗಂಟೆಗೆ ಸ್ಪೋಟಗೊಳ್ಳಲಿದೆ ಎಂದು ಇಮೇಲ್ನಲ್ಲಿ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ಆದರೆ ಇದು ಹುಸಿ ಸಂದೇಶ ಎಂಬುದು ಪರಿಶೀಲನೆಯ ನಂತರ ದೃಢಪಟ್ಟಿದೆ.
ನ್ಯಾಯಾಧೀಶರನ್ನು ಮೂಗು ಮತ್ತು ಬಾಯಿ ಮುಚ್ಚಿಸಿ ತಕ್ಷಣ ಸ್ಥಳಾಂತರಿಸಿ, ಸೋಮವಾರವೇ ನಿಜವಾದ ಸ್ಫೋಟ ನಡೆಯಲಿದೆ. ಇದುವರೆಗೆ ನಡೆದ ಎಲ್ಲವೂ ಬಾಂಬ್ ನಿಷ್ಕ್ರಿಯ ದಳ (ಬಿಡಿಡಿಎಸ್) ಹಾಗೂ (ಎಟಿಎಸ್) ಅನ್ನು ಗೊಂದಲಕ್ಕೀಡು ಮಾಡಿ, ದಿಕ್ಕು ತಪ್ಪಿಸುವ ಕ್ರಮಗಳಾಗಿದ್ದವು. ನಾನು ಅನ್ಬಾನಂತನ್ ಅರಿಯಪ್ಪನ್, ಜೆನ್ಜಿ ಡಿಎಮ್ಕೆ ಸಂಘಟನೆಯ ನಾಯಕ. ಇತ್ತೀಚೆಗೆ ಡಿಎಮ್ಕೆ ಪಕ್ಷದ ಮೇಲಿನ ನನ್ನ ನಿಷ್ಠೆ ಹಾಗೂ ಆಡಳಿತ ಪಕ್ಷದ ವಿರುದ್ಧ ಮಾಡಿದ್ದ ವಿಡಿಯೋಗಳ ಕಾರಣದಿಂದ ತಮಿಳುನಾಡು ಪೊಲೀಸರು ಮಧ್ಯರಾತ್ರಿ ನನ್ನನ್ನು ಬಂಧಿಸಲು ಯತ್ನಿಸಿದರು. ಡಿಎಮ್ಕೆ ನಾಯಕರು ಮತ್ತು ತಮಿಳುನಾಡಿನ ವಿರೋಧ ಪಕ್ಷದ ನಾಯಕರು, ನಾನು, ಸಿ. ಜೋಸೆಫ್ ವಿಜಯ್ ಹಾಗೂ ಅವರ ಧರ್ಮ ಮತ್ತು ಕುಟುಂಬದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದರೆ, ಸಂಸದ ಎನ್.ಆರ್. ಎಲಂಗೋ ಅವರ ಮೂಲಕ ನನಗೆ ಕಾನೂನು ಸಹಾಯ ಒದಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಡಿಎಮ್ಕೆ ಪಕ್ಷದ ಕಾನೂನು ತಜ್ಞ ಹಾಗೂ ಸಂಸದ ಎನ್.ಆರ್. ಎಲಂಗೋ ಅವರು ನನ್ನ ಮತ್ತು ಪತ್ನಿ ಪ್ರಿಯಾ ಹಾಗೂ ನನ್ನ ತಂದೆ ಅರಿಯಪ್ಪನ್ (ಡಿಎಮ್ಕೆ ಕೃಷಿ ಘಟಕದ ಕಾರ್ಯದರ್ಶಿ) ಅವರ ಅನೇಕ ಪ್ರಯತ್ನಗಳಿದ್ದರೂ ಯಾವುದೇ ಸಹಾಯ ಮಾಡಲಿಲ್ಲ. ಅಲ್ಲದೆ ನನ್ನ ಪತ್ನಿಯಿಂದ ಲೈಂಗಿಕ ಅನುಕೂಲಗಳನ್ನು ಕೇಳಿದರು ಎಂದು ನಾನು ಆರೋಪಿಸುತ್ತೇನೆ. ಇದರಿಂದ ಬೇಸತ್ತ ನಾವು ಮೂರಸೋಲಿ ಟ್ರಸ್ಟ್ನ ಅಕ್ರಮಗಳು ಹಾಗೂ ಜಾಫರ್ ಸಾಧಿಕ್ ಎಂಬವರು ಮೆಥ್ ಮಾದಕ ವಸ್ತುಗಳನ್ನು ಅಪ್ರಾಪ್ತ ಬಾಲಕಿಯರಿಗೆ ನೀಡಿ ಅವರನ್ನು ದುರುಪಯೋಗಪಡಿಸಿಕೊಂಡು ಪತ್ರಕರ್ತರ ಬಳಿಗೆ ಕಳುಹಿಸುತ್ತಿದ್ದರು ಎಂದು ಬಹಿರಂಗಪಡಿಸುವುದಾಗಿ ತಿಳಿಸಿದೆವು. ಈ ವಿಷಯದ ನಂತರ ಉದಯನಿಧಿ ಕಳುಹಿಸಿದವರಿಂದ ನಮ್ಮ ಎರಡು ವರ್ಷದ ಮಗ ಮಲರವನ್ನ್ನು ಕೊಲ್ಲುವುದಾಗಿ ಬೆದರಿಕೆ ಬಂದಿತೆಂದು ಆರೋಪಿಸುತ್ತೇವೆ. ನಾವು ಸುಮಾರು ಹತ್ತು ವರ್ಷಗಳ ಕಾಲ ಬೆಂಬಲಿಸಿದ್ದ ಪಕ್ಷದಿಂದಲೇ ಈ ರೀತಿಯ ವರ್ತನೆ ಎದುರಾದ ಕಾರಣ ಜೀವನದ ಅತ್ಯಂತ ಕೆಳಮಟ್ಟಕ್ಕೆ ತಲುಪಿದ್ದೇವೆ. ನಮ್ಮ ಮಗನ ಸುರಕ್ಷತೆಯ ಬಗ್ಗೆ ಆತಂಕದಲ್ಲಿದ್ದೇವೆ. ಈ ಸಂದರ್ಭದಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಯ ಸದಸ್ಯರು ನಮ್ಮನ್ನು ಸಂಪರ್ಕಿಸಿ ನಮ್ಮ ಅಹವಾಲುಗಳನ್ನು ಆಲಿಸಿದರು. ಅದರ ನಂತರ ನಾವು ಆ ರಾಜಕೀಯ ಪಕ್ಷಗಳನ್ನು ತೊರೆದು ವ್ಯವಸ್ಥೆಯ ವಿರುದ್ಧ ಹೋರಾಡಲು ನಿರ್ಧರಿಸಿದ್ದೇವೆ. ಬೀದರ್ನಲ್ಲಿರುವ ಸಿಪಿಐ (ಮಾವೋವಾದಿ) ಸಂಘಟನೆಯ ವಿದ್ಯಾರ್ಥಿ ಘಟಕವಾದ ಆರ್ಎಸ್ಎಫ್ ಸದಸ್ಯರು ನಿಮ್ಮ ನ್ಯಾಯಾಲಯದ ಆವರಣ/ನ್ಯಾಯಾಧೀಶರ ಕೊಠಡಿ ಹಾಗೂ ಬೆಂಗಳೂರಿನ ಇಸ್ರೇಲ್ ಕಾನ್ಸುಲೇಟ್ನಲ್ಲಿ ಐಸೋಪ್ರೊಪನಾಲ್ ಮತ್ತು ಕಾರ್ಬನ್ ಟೆಟ್ರಾಕ್ಲೋರೈಡ್ (CCl₄) ಬಳಸಿ ಆರು ರಾಸಾಯನಿಕ ಬಾಂಬ್ಗಳನ್ನು ಇರಿಸಲಾಗಿದೆ. ನಮ್ಮ ಉದ್ದೇಶ ಕೇವಲ ಆಸ್ತಿ ನಾಶ ಮಾಡುವುದು, ಇದು ಒಂದು ಪ್ರತಿಭಟನೆಯ ಸಂದೇಶ ಎಂದು ಹೇಳಲಾಗಿದೆ. ಒಬ್ಬ ತಂದೆ, ಪತಿ ಹಾಗೂ ಸಾಮಾನ್ಯ ನಾಗರಿಕನಾಗಿ, ತನ್ನ ಪತ್ನಿ ಹಾಗೂ ಮಗನಿಗೆ ಕಿರುಕುಳವಾದರೆ ಯಾರಾದರೂ ಇದೇ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂದು ದಯವಿಟ್ಟು ಅರ್ಥಮಾಡಿಕೊಳ್ಳಿ ಎಂದು ಇಮೇಲ್ನಲ್ಲಿ ಉಲ್ಲೇಖಿಸಲಾಗಿದೆ. ಸ್ಫೋಟಕ್ಕೆ 11 ಗಂಟೆಗಳ ಮೊದಲು ನಾನು ನಿಮಗೆ ಮಾಹಿತಿ ನೀಡಿದ್ದೇನೆ. ಈಗ ಅದು ನನ್ನ ಕೈಯಲ್ಲಿಲ್ಲ. ಇದು ದ್ರೋಹಕ್ಕೆ ಸಾಮಾನ್ಯ ನಾಗರಿಕನ ಪ್ರತಿಕ್ರಿಯೆಯಾಗಿದೆ. ದಯವಿಟ್ಟು ನ್ಯಾಯಾಧೀಶರನ್ನು ತಕ್ಷಣ ಸ್ಥಳಾಂತರಿಸಿ. – ಅನ್ಬಾನಂತನ್ ಅರಿಯಪ್ಪನ್ / ಕಾಮ್ರೇಡ್ ಮುಪ್ಪಲಕ್ಷ್ಮಣ್ ಅವರ ಹೆಸರಿನಲ್ಲಿ ಇಮೇಲ್ ಕಳುಹಿಸಲಾಗಿದೆ ದೂರವಾಣಿ ಸಂಖ್ಯೆಯನ್ನು ನೀಡಿದ್ದಾರೆ. (ಇಮೇಲ್ನಲ್ಲಿ ನೀಡಿರುವಂತೆ; ಮಧ್ಯಾಹ್ನ 1 ಗಂಟೆಯ ನಂತರ ಸಂಪರ್ಕ ಸಾಧ್ಯವಿಲ್ಲ ಎಂದು ಹೇಳಲಾಗಿದೆ.)
“ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಬಂದ ಬಳಿಕ ಸ್ಥಳಕ್ಕೆ 12.45 ಬಾಂಬ್ ನಿಷ್ಕ್ರಿಯದಳ ಆಗಮಿಸಿತ್ತು. ಆದರೆ ನಗರ ಠಾಣಾ ಪೋಲಿಸರು ಆಗಮಿಸದೇ ಇರುವುದರಿಂದ ಪರಿಶೀಲನೆ ನಡೆಸುವುದು ತಡವಾಯಿತು. ಕೊನೆಗೆ 1.09 ನಗರ ಪೋಲಿಸ್ ಠಾಣಾ ಪಿಎಸ್ಐ ಆಗಮಿಸಿ ಬಳಿಕ ಪರಿಶೀಲನೆ ನಡೆಸಲಾಯಿತು. ಇಮೇಲ್ ಬೆದರಿಕೆ ಸಂದೇಶದಲ್ಲಿ 1 ಗಂಟೆಗೆ ಬಾಂಬ್ ಸ್ಪೋಟಿಸುವುದಾಗಿ ಬರೆಯಲಾಗಿತ್ತು. ”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”