- ಪ್ರವೀಣ್ ಯಕ್ಷಿಮಠ

ಮತ್ತೆ `ಲವ್ ಜಿಹಾದ್' ಸದ್ದು ಮಾಡಿದೆ. ಹದಿಮೂರು ವರುಷಗಳ ಹಿಂದೆ ಕೇರಳ ರಾಜ್ಯದಲ್ಲಿ ದಿಢೀರನೆ ಮುನ್ನಲೆಗೆ ಬಂದ ಈ `ಲವ್ ಜಿಹಾದ್' ಶಬ್ದ ಮೊದಮೊದಲಿಗೆ ಹಿಂದೂ ಸಂಘಟನೆಗಳು ಎಬ್ಬಿಸಿದ `ಗುಲ್ಲು' ಎಂದು ಭಾವಿಸಲಾಗಿತ್ತಾದರೂ ಹಂತಹಂತವಾಗಿ ಅದು ವ್ಯಾಪಿಸಿದ ವಿಸ್ತಾರ ಹಾಗೂ ಉಂಟುಮಾಡಿದ ಪರಿಣಾಮದ ಅನುಭವವಾದ ನಂತರ ಈ ದೇಶದ ಆಡಳಿತ ವ್ಯವಸ್ಥೆ `ಲವ್ ಜಿಹಾದ್' ಪ್ರಕರಣವನ್ನು ನೋಡುವ ರೀತಿ ಬದಲಾಗಿದೆ. ಕರ್ನಾಟಕದ ಕರಾವಳಿ, ಮಲೆನಾಡು ಭಾಗಗಳಲ್ಲಿ ಹೆಚ್ಚುತ್ತಿರುವ ಯುವತಿಯರ ನಾಪತ್ತೆ ಪ್ರಕರಣದ ಜಾಡು ಹುಡುಕಿಕೊಂಡು ಹೊರಟ ಇಲಾಖೆಯ ಅಽಕಾರಿಗಳಿಗೆ ಎಲ್ಲಾ ಸುಳಿವುಗಳು ಕೇರಳದತ್ತ ಮುಖ ಮಾಡಿ ನಿಲ್ಲುತ್ತಿದೆಯಲ್ಲಾ ಎನ್ನುವುದು ಅರಿವಾದ ನಂತರ `ಲವ್ ಜಿಹಾದ್' ಇರುವುದು ನಿಜಕ್ಕೂ ಸತ್ಯ ಎನ್ನುವುದು ಪುಷ್ಠಿಯಾಗಿದೆ. ಮೊನ್ನೆಯ ದಿನ ಕುಂದಾಪುರದ ಉಪ್ಪಿನಕುದ್ರುವಿನ ಶಿಲ್ಪಾ ಎಂಬಾಕೆಯನ್ನು ಎರಡು ಮಕ್ಕಳಿದ್ದ ವಿವಾಹಿತ ಅಜೀಜ್ ಎನ್ನುವ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡು ಇಸ್ಲಾಂಗೆ ಮತಾಂತರವಾಗುವಂತೆ ಒತ್ತಾಯಿಸಿ, ಒಪ್ಪದೆ ಇದ್ದಾಗ ಆಕೆಯೊಂದಿಗಿನ ಖಾಸಗಿ ವಿಡಿಯೋ, ಪೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಅದಕ್ಕೆ ಹೆದರಿದ ಆಕೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವ ಘಟನೆ ಬೆಳಕಿಗೆ ಬರುತ್ತಲೇ ಉಡುಪಿ ಮತ್ತೆ ಬಿಸಿಬಿಸಿಯಾಗಿದೆ. ಕೇವಲ ಶಿಲ್ಪಾ ಒಬ್ಬಳ ಆತ್ಮಹತ್ಯೆ ಪ್ರಕರಣದಿಂದ ಉಡುಪಿ ಕಾದು ಕೆಂಡವಾಗಿಲ್ಲ.
ಕಳೆದ ಐದಾರು ತಿಂಗಳಿಂದೀಚೆಗೆ ಉಡುಪಿ ಜಿಲ್ಲೆ ಒಂದರಲ್ಲೇ ನೂರಾ ಮೂವತ್ತಕ್ಕೂ ಹೆಚ್ಚು ಹಿಂದೂ ಹುಡುಗಿಯರು ನಾಪತ್ತೆಯಾಗಿದ್ದಾರೆ. ಹೆಚ್ಚಿನವರು ಮುಸಲ್ಮಾನ ಯುವಕನೊಂದಿಗೆ ಪರಾರಿಯಾಗಿದ್ದಾರೆ. ಹಾಗೆ ಹೋದವರು ಎಲ್ಲಿ ಹೋದರು ಎನ್ನುವುದು ಇಂದಿಗೂ ಪತ್ತೆಯಾಗಿಲ್ಲ. ಪ್ರತಿ ದಿವಸ ಒಂದಲ್ಲಾ ಒಂದು ಬೀಚು, ಪಾರ್ಕುಗಳಲ್ಲಿ ಹಿಂದೂ ಹುಡುಗಿಯರು ಮುಸಲ್ಮಾನ ಹುಡುಗರೊಂದಿಗೆ ಪ್ರೇಮಸಲ್ಲಾಪದಲ್ಲಿರುವಾಗ ಸಾರ್ವಜನಿಕರ ಕೈಗೆ ಸಿಕ್ಕಿ ಬೀಳುವ ಪ್ರಕರಣಗಳು ನಡೆಯುತ್ತಲೇ ಇವೆ. ಉದ್ದೇಶಪೂರ್ವಕವಾಗಿ ಹಿಂದೂ ಹುಡುಗಿಯರನ್ನು ಟಾರ್ಗೆಟ್ ಮಾಡಿ ಪ್ರೇಮದ ನಾಟಕವಾಡಿ ಜಿಹಾದಿಗೆ ಬಳಸಲಾಗುತ್ತಿದೆ ಎನ್ನುವ ಆರೋಪ ಹಿಂದೂ ಸಂಘಟನೆಗಳದ್ದು. ಹಾಗಾದರೆ ಲವ್ ಜಿಹಾದ್ ಎಂದರೆ ಏನು? ಕೇರಳದ ಪೊನ್ನಾನಿನ ಇಸ್ಲಾಮಿಕ್ ರಿಸರ್ಚ್ ಸೆಂಟರ್ ಒಳಗೆ ನಿಜಕ್ಕೂ ನಡೆಯುತ್ತಿರುವುದು ಏನು? ಭಯೋತ್ಪಾದನೆಗೂ ಲವ್ ಜಿಹಾದ್ಗೂ ಸಂಬಂಧವಿದೆಯಾ? ಹೀಗೆ ಇಂತಹ ಪ್ರಶ್ನೆಗಳನ್ನಿಟ್ಟುಕೊಂಡು ಹುಡುಕುತ್ತಾ ಹೊರಟರೆ ತೆರೆದುಕೊಳ್ಳುವ ವಿಷಯಗಳು ಬಹಳ ಭಯಾನಕವಾಗಿವೆ.
ಬ್ಯಾರಿ ಹುಡುಗನ ನಾಲ್ಕು ಲೈಕಿಗೆ ಆಶಾ `ಆಯೇಷಾ' ಆದಳು! ಹೀಗೊಂದು ಸಾಲು ಇದೀಗ ಕರಾವಳಿಯ ವಾಟ್ಸಾಪ್ ಗ್ರೂಪುಗಳಲ್ಲಿ ಓಡಾಡುತ್ತಿವೆ. ಪ್ರತಿ ಭಾರಿಯೂ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬಂದಾಗ ಈ ಸ್ಲೋಗನ್ ಸಾಕಷ್ಟು ವೈರಲ್ ಆಗುತ್ತದೆ. ಕಳೆದ ಕೆಲ ದಶಕಗಳಿಂದೀಚೆಗೆ ಕರ್ನಾಟಕ ಮತ್ತು ಕೇರಳದ ಕರಾವಳಿ ಮಲೆನಾಡುಗಳಲ್ಲಿ ಸಾಕಷ್ಟು ಹಿಂದೂ-ಕ್ರಿಶ್ಚಿಯನ್ ಯುವತಿಯರು ನಾಪತ್ತೆಯಾಗಿದ್ದಾರೆ. ೨೦೦೯ರಲ್ಲಿ ಕೇರಳದ ಕ್ಯಾಥೋಲಿಕ್ ಚರ್ಚೊಂದರ ಬಿಷಪ್ ಒಬ್ಬರು ಪತ್ರಿಕಾಗೋಷ್ಠಿ ಕರೆದು ಕಳೆದ ಐದು ವರುಷಗಳಲ್ಲಿ ಕೇರಳದ ನಾಲ್ಕು ಸಾವಿರದ ಐನೂರು ಕ್ರಿಶ್ಚಿಯನ್ ಯುವತಿಯರು ಮದುವೆಯಾಗಿ ಇಸ್ಲಾಂಗೆ ಮತಾಂತರವಾಗಿದ್ದಾರೆ ಎನ್ನುವ ವರದಿ ಕೊಟ್ಟರು. ಅವರು ಬಿಡುಗಡೆಗೊಳಿಸಿದ ಮಾಹಿತಿ ದೇಶದೆಲ್ಲೆಡೆ ಭಾರೀ ಸಂಚಲವನ್ನು ಹುಟ್ಟುಹಾಕಿತು. ಕೇರಳ ಕ್ಯಾಥೋಲಿಕ್ ಚರ್ಚ್ ಕೊಟ್ಟ ಮೇಲಿನ ವರದಿಯನ್ನು ನೋಡಿದ ನಂತರ ಹಿಂದೂ ಜನಜಾಗೃತಿ ಸಮಿತಿ ಕರ್ನಾಟಕದಲ್ಲಿ ಹಿಂದೂಗಳನ್ನು ಗಮನದಲ್ಲಿಟ್ಟುಕೊಂಡು ಮತಾಂತರದ ಅಂಕಿ ಅಂಶಗಳನ್ನು ತಡಕಾಡಿತು. ಹಾಗೆ ತಡಕಾಡಿದಾಗ ಸಿಕ್ಕಿದ ವರದಿ ನೋಡಿ ಹಿಂದೂ ಜನಜಾಗೃತಿ ಸಮಿತಿ ನಿಬ್ಬೆರಗಾಗಿ ಹೋಯಿತು. ಏಕೆಂದರೆ ೨೦೦೪-೨೦೦೯ರ ಐದು ವರುಷದ ಅವಧಿಯಲ್ಲಿ ಕರ್ನಾಟಕವೊಂದರಲ್ಲೇ ಮದುವೆಯಾಗಿ ಇಸ್ಲಾಂಗೆ ಮತಾಂತರವಾದ ಹಿಂದೂ ಹುಡುಗಿಯರ ಸಂಖ್ಯೆ ಮೂವತ್ತು ಸಾವಿರ! ಕೂಡಲೇ ಎಚ್ಚೆತ್ತ ವಿಶ್ವ ಹಿಂದೂ ಪರಿಷತ್-ಹಿಂದೂ ಜಾಗರಣ ವೇದಿಕೆ ಜಂಟಿಯಾಗಿ ಸಹಾಯವಾಣಿಯನ್ನು ಆರಂಭಿಸಿ ಲವ್ ಜಿಹಾದ್ ಕುರಿತು ದೂರುಗಳಿದ್ದರೆ ಸಂಪರ್ಕಿಸುವಂತೆ ಕೋರಿಕೊಂಡಿತು. ಮೂರು ತಿಂಗಳಲ್ಲಿ ಆ ಸಹಾಯವಾಣಿಗೆ ಲವ್ ಜಿಹಾದ್ಗೆ ಸಿಲುಕಿದ ಮನೆಯವರ ಒಂದೂವರೆ ಸಾವಿರ ಪೋನ್ ಕರೆಗಳು ಬಂದವು.ಇದನ್ನು ಗಂಭೀರವಾಗಿ ಪರಿಗಣಿಸಿ ಕರ್ನಾಟಕ ಮತ್ತು ಕೇರಳದಲ್ಲಿ ಏಕಕಾಲಕ್ಕೆ ತನಿಖೆಗೆ ಆದೇಶಿಸಲಾಯಿತು. ಗೃಹ ಇಲಾಖೆ ಅಂದಿನ ಕರ್ನಾಟಕ ಸರಕಾರಕ್ಕೆ ವರದಿ ಕೊಟ್ಟಿತು. ಅಂದಿನ ಸಚಿವೆ ಶೋಭಾ ಕರಂದ್ಲಾಜೆ ನಾಪತ್ತೆಯಾಗಿ ಮತಾಂತರವಾದವರ ಸಂಖ್ಯೆ ಮೂವತ್ತು ಸಾವಿರವಲ್ಲ ಬದಲಿಗೆ ಅದು ನಲವತ್ತು ಸಾವಿರ ದಾಟಿದೆ ಎಂದು ಪತ್ರಿಕಾಗೋಷ್ಠಿ ಕರೆದು ಹೇಳಿದರು. ಎಡ ಸರಕಾರವಿದ್ದ ಕೇರಳದಲ್ಲೇ ಸ್ವತಃ ಎಡಪಂಥೀಯ ಮುಖ್ಯಮಂತ್ರಿ ಅಚ್ಯುತಾನಂದನ್ ಲವ್ ಜಿಹಾದ್ ಮುಖಾಂತರ ಕೇರಳವನ್ನು `ಇಸ್ಲಾಮಿಕ್ ರಾಜ್ಯ' ಮಾಡುವ ಹುನ್ನಾರ ನಡೆದಿದೆ ಎಂದು ಹೇಳಿಕೆ ಕೊಟ್ಟರು. ಮುಂದೆ ಸದ್ದಿಲ್ಲದೆ ಅವರ ಬಾಯಿಯನ್ನೂ ಮುಚ್ಚಲಾಯಿತು. ಹೀಗೆ ನಾಪತ್ತೆಯಾಗಿ ಹೋದ ಯುವತಿಯರು ಎಲ್ಲಿ ಹೋದರು ಎಂದು ಪೋಲಿಸರು ಹುಡುಕುತ್ತಾ ಹೊರಟಾಗ ಅದರ ತುದಿ ಕೇರಳದ ಪೊನ್ನಾನಿಯತ್ತ ತೋರಿಸುತ್ತಿತ್ತು.
ಲವ್ ಜಿಹಾದ್ನ ರಿಮೋಟ್ ಕಂಟ್ರೋಲ್ ಇಸ್ಲಾಮಿಕ್ ರಿಸರ್ಚ್ ಸೆಂಟರ್ ಆ ಪೊನ್ನಾನಿ! ಇತ್ತೀಚಿನ ದಿನದಲ್ಲಿ ಕರ್ನಾಟಕದ ಕರಾವಳಿಯ ತಟದಿಂದ ಯಾವುದೇ ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ ಎನ್ನುವ ದೂರು ಬಂದರೆ ಪೋಲಿಸರು ಮೊದಲಿಗೆ ಕಾಸರಗೋಡಿನ ಚೆಕ್ಪೋಸ್ಟಿಗೆ ನ್ ಮಾಡುತ್ತಾರೆ ಎನ್ನುವ ಮಾತು ಚಾಲ್ತಿಗೆ ಬರುವಷ್ಟರ ಮಟ್ಟಿಗೆ ಕೇರಳದ ಪೊನ್ನಾನಿ ಲವ್ ಜಿಹಾದ್ಗೆ ಕುಖ್ಯಾತಿ ಪಡೆದಿದೆ. ಅಲ್ಲೊಂದು ಹಳೆಯ ಕಾಲದ ಮಸೀದಿ ಇದೆ. ಹಿಂದೂ ವಾಸ್ತುಶೈಲಿಯಲ್ಲಿರುವ ಈ ಮಸೀದಿ ಚೇರ ಪೆರುಮಾಳ್ ಎನ್ನುವ ಹಿಂದೂ ರಾಜನ ಅರಮನೆಯಾಗಿತ್ತು. ಮುಂದೆ ಆತನನ್ನೇ ಇಸ್ಲಾಂಗೆ ಮತಾಂತರಗೊಳಿಸಿ ಆ ಅರಮನೆಯನ್ನೇ ಮಸೀದಿಯನ್ನಾಗಿ ಮಾಡಲಾಯಿತು ಎಂದು ಇತಿಹಾಸ ಹೇಳುತ್ತದೆ. ಅದರ ಒಂದು ಭಾಗದಲ್ಲೇ ಇಸ್ಲಾಮಿಕ್ ರಿಸರ್ಚ್ ಸೆಂಟರ್ನ ವಿಭಾಗವು ಕಾರ್ಯಾಚರಿಸುತ್ತದೆ. ಇಲ್ಲಿ ಒಳಬಂದ ಯಾವ ಯುವತಿಯೂ ಮತ್ತೆ ತನ್ನ ಮಾತೃ ಧರ್ಮಕ್ಕೆ ಮರಳಿದ ಇತಿಹಾಸ ಬಹಳ ಕಡಿಮೆ. ನಾನಾ ರೀತಿಯ ಮತಿಭ್ರಾಂತಿಗೆ, ಸಮ್ಮೋಹಿನಿಗೆ ಒಳಪಡಿಸಿ ಇಲ್ಲಿ ಮತಾಂತರ ಗೊಳಿಸಲಾಗುತ್ತದೆ. ಹಾಗೆ ಲವ್ ಜಿಹಾದ್ಗೆ ಒಳಗಾಗಿ ಮತಾಂತರಗೊಂಡ ಅನೇಕ ಯುವತಿಯರು ಕರಾವಳಿಯ ಜಿಲ್ಲೆಗಳಲ್ಲಿದ್ದಾರೆ. ಅನೇಕರು ಭಯೋತ್ಪಾದನಾ ಚಟುವಟಿಕೆಗಳಿಗೆ ಗುರಾಣಿಯಂತೆ ಕೆಲಸ ಮಾಡುತ್ತಿದ್ದಾರೆ. ಮತ್ತೆ ಕೆಲವರು ಮಕ್ಕಳು ಹೆರುವ ಯಂತ್ರಗಳಾಗಿ ಬದಲಾಗಿ ಹೋಗಿದ್ದಾರೆ. ಇನ್ನೂ ಕೆಲವರು ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದಾರೆ. ಡ್ರಗ್ಸ್, ಗಾಂಜಾ ಮಾಫಿಯಾದ ಸಾಗಾಣಿಕೆಗೆ ಬಳಸಲ್ಪಡುತ್ತಿದ್ದಾರೆ ಎಂದು ಆಂತರಿಕ ಭದ್ರತಾ ಪಡೆಗಳು ಸರಕಾರಕ್ಕೆ ವರದಿ ಸಲ್ಲಿಸಿವೆ..
ಭಾರತವನ್ನು ಇಸ್ಲಾಮೀಕರಣ ಮಾಡಲು ಭಾರತದ ಮೇಲೆ ಸಾವಿರ ಬಾರಿ ದಂಡೆತ್ತಿ ಬರುತ್ತೇವೆ ಎಂದು ಪಾಕಿಸ್ತಾನದ ವಿಭಜನೆಯ ವೇಳೆ ಘೋಷಿಸಿ ಹೋದ ಮತಾಂಧರು ಇಸ್ಲಾಮಿನ ಜನಸಂಖ್ಯೆ ಹೆಚ್ಚಿಸಲು ನಾನಾ ವಿಧದ ಜಿಹಾದಿನಲ್ಲಿ ತೊಡಗಿಸಿಕೊಂಡಿವೆ.ಕರಾವಳಿಯೊಂದರಲ್ಲೇ ಇಪ್ಪತ್ಮೂರು ಸಂಘಟನೆಗಳು ಲವ್ ಜಿಹಾದಿಗಾಗಿ ಕೆಲಸ ಮಾಡುತ್ತಿವೆ ಎಂದು ಎನ್ಐಎ ಸರಕಾರಕ್ಕೆ ವರದಿ ಸಲ್ಲಿಸಿದೆ. ಉಳ್ಳಾಲದ ಮಾಜಿ ಶಾಸಕ ಇದಿನಬ್ಬರ ಸಂಬಂದಿಯೊಬ್ಬರು ಸಿರಿಯಾದ ಭಯೋತ್ಪಾದಕ ಸಂಘಟನೆ ಐಸಿಎಸ್ ಜೊತೆ ಸಂಪರ್ಕದಲ್ಲಿರುವ ಕಾರಣಕ್ಕೆ ಎನ್ ಐಎ ಬಂದಿಸಿತು. ಹಾಗೆ ಬಂದಿಸಲ್ಪಟ್ಟ ಆಯೇಷಾ ಈ ಹಿಂದೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಮ್ಮ ಹೆಸರಿನ ಹಿಂದೂವಾಗಿದ್ದಳು. ಅಲ್ಲದೇ ಯಾಸೀನ್ ಭಟ್ಕಳ್ ಎನ್ನುವ ನಟೋರಿಯಸ್ ಭಯೋತ್ಪಾದಕನನ್ನು ಬಂದಿಸಿದಾಗ ಆತನ ಇಂಡಿಯನ್ ಮುಜಾಹಿದ್ದೀನ್ಗೆ ಹವಾಲಾ ಮೂಲಕ ಹಣ ಸರಬರಾಜು ಮಾಡಿದ ಪಂಜಿಮೊಗರುವಿನ ಆಯೇಷಾಭಾನು ಕೂಡ ಈ ಹಿಂದೆ ಲವ್ ಜಿಹಾದಿಗೆ ಒಳಗಾಗಿದ್ದ ಹಿಂದೂ ಮಹಿಳೆ ಆಗಿದ್ದಳು ಎನ್ನುವ ಸೋಟಕ ಮಾಹಿತಿ ಹೊರಬಿದ್ದಿತ್ತು. ಅಲ್ಲದೇ ಅನೇಕ ಮಾದಕವಸ್ತು ಸರಬರಾಜು, ಹವಾಲಾ ಹಣ ದಂಧೆ ಮುಂತಾದ ದೇಶ ವಿದ್ರೋಹಿ ಚಟುವಟಿಕೆಗಳಲ್ಲಿ ಈ ಲವ್ ಜಿಹಾದ್ ಬಹುಮುಖ್ಯ ಅಂಗವಾಗಿ ಕೆಲಸ ಮಾಡುತ್ತಿದೆ. ಈ ಹಿಂದೆ 'ಹಿಂದೂಪರ ಸಂಘಟನೆಗಳು ಲವ್ ಜಿಹಾದ್ ಎಂದು ಬೊಬ್ಬೆ ಹೊಡೆದು ಸಮಾಜದೊಳಗೆ ಅಶಾಂತಿ ಸೃಷ್ಟಿಸುತ್ತಿವೆ' ಎಂದು ಹುಯಿಲೆಬ್ಬಿಸಿದ ಪ್ರಗತಿಪರರು ಕೂಡ ಇದೀಗ ಲವ್ ಜಿಹಾದ್ ಇರುವುದು ಸತ್ಯ ಎನ್ನುವುದನ್ನು ಒಪ್ಪಿಕೊಳ್ಳತೊಡಗಿದೆ. ಹಾಗಾಗಿ `ಲವ್ ಜಿಹಾದ್' ಎನ್ನುವ ಶಬ್ದ ಕೇಳಿಸಿದೊಡನೆ ದೇಶದ ಮಾಧ್ಯಮಲೋಕದ ಕಿವಿ ನೆಟ್ಟಗಾಗುತ್ತವೆ. ಧರ್ಮದ ಕಾರಣಕ್ಕೆ ಅಮಾಯಕರ ಮನೆಯ ಹೆಣ್ಣುಮಕ್ಕಳನ್ನು ಜಿಹಾದಿನ ಕೂಪಕ್ಕೆ ತಳ್ಳಿ ಅರಾಜಕತೆ ಸೃಷ್ಟಿಸುವ ಈ ಸಂಚಿನ ವಿರುದ್ಧ ಜನಜಾಗೃತಿಯಾಗಬೇಕಾದದ್ದು ಈ ಹೊತ್ತಿನ ತುರ್ತು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”