ಉಡುಪಿ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಅಜಿತ್

ಉಡುಪಿ: ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕರಾಗಿ ಸುದೀಪ್ ಶೆಟ್ಟಿ ನಿಟ್ಟೆ, ಸಹ ಸಂಚಾಲಕರಾಗಿ ಅಜಿತ್ ಜೋಗಿ ಯಡ್ತಾಡಿ ಅವರನ್ನು ಆಯ್ಕೆಗೊಳಿಸಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಆದೇಶಿಸಿದ್ದಾರೆ. ಉಡುಪಿ "ಲಾ" ಕಾಲೇಜಿನಲ್ಲಿ ಕಾನೂನು ವಿದ್ಯಾಭ್ಯಾಸ ಪಡೆದಿರುವ ಅಜಿತ್, ಪ್ರಸ್ತುತ ಉಡುಪಿ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಯಾಗಿದ್ದಾಗ ಎಬಿವಿಪಿಯ ಉಡುಪಿಯ ತಾಲೂಕು ಸಂಚಾಲಕ್ ಆಗಿ ಎರಡು ಅವಧಿಗೆ ಜವಾಬ್ದಾರಿ ನಿರ್ವಹಿಸಿದ ಅನುಭವಿ ಅಜಿತ್ ಜೋಗಿ. ಕಾಲೇಜು ಚುನಾವಣೆಯಲ್ಲಿ ತಂತ್ರಗಾರಿಕೆಯಲ್ಲಿ ನಿಸ್ಸೀಮರಾಗಿದ್ದ ಅವರನ್ನು ಬಿಜೆಪಿಯ ಹಿರಿಯರು ಗುರುತಿಸಿ, ಜವಾಬ್ದಾರಿ ನೀಡಿರುವುದನ್ನು ಅಜಿತ್ ಅವರ ಸ್ನೇಹಿತರು ಪ್ರಶಂಸಿಸಿ, ಶುಭ ಹಾರೈಸಿದ್ದಾರೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”