ಇಷ್ಟು ತಾಗಿದ ಮೇಲೆ ನಾನು ಸುಮ್ಮನಿರಲು ಸಾಧವಿಲ್ಲ.

ಉಡುಪಿ: ಶಾಸಕ ಯಶ್ಪಾಲ್ ಸುವರ್ಣ ಅವರಿಗೆ 2028 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಇಲ್ಲಾ ಎಂಬ ಬಗ್ಗೆ ಈಗಲೇ ಚರ್ಚೆ ಇದೆ. ಆಗ ಅವರಿಗೆ ಟಿಕೆಟ್ ಕೈ ತಪ್ಪಿದವರ ಮನಸ್ಥಿತಿ ಹೇಗಿರುತ್ತದೆ ಎಂಬ ಅನುಭವವಾಗಲಿದೆ ಎಂದು ಮಾಜಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಶ್ಪಾಲ್ ಸುವರ್ಣ ಅವರಿಗೆ ತಲೆ ಇದ್ದಿದ್ದರೇ ಹೀಗೆ ಮಾಡುತ್ತಿರಲಿಲ್ಲ. ನನ್ನನ್ನು ಒಟ್ಟಿಗೆ ಇಟ್ಟುಕೊಳ್ಳುತ್ತಿದ್ದರು. ಅವರು ನನಗೆ ಕೊಟ್ಟ ಮಾನಸಿಕ ಹಿಂಸೆಯನ್ನು ಹೇಳಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಮೋದ್ ಮಧ್ವರಾಜ್ ಅವರು ಶಾಸಕರಾಗಿ, ಸಚಿವರಾಗಿದ್ದಾಗ ನನಗೂ ಕ್ಷೇತ್ರದಲ್ಲಿ ನನ್ನ ಅಸ್ತಿತ್ವದ ಬಗ್ಗೆ ಭಯ ಕಾಡುತ್ತಿತ್ತು. ಆಗ ನಾನು ಕ್ಷೇತ್ರದಲ್ಲಿ ಹೆಚ್ಚು ಓಡಾಟ ಮಾಡಿ, ಜನರೊಂದಿಗೆ ಬೆರೆತು ಕೆಲಸ ಮಾಡಿದೆ. ಈಗಿನ ಶಾಸಕರು ಹತಾಶ ಮನೋಭಾವನೆಯಿಂದ ನನ್ನ ಮೇಲೆ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ ಎಂದರು. ನನ್ನ ಹೋಟೆಲ್ ಹಾಗು ಪರಿವಾರ್ ಸೊಸೈಟಿಗೆ ತಾಗಿದ್ರೂ. ಸೊಸೈಟಿಯ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸಿ ತನಿಖೆ ನಡೆಯಿತು. ಆದರೆ ಏನು ಆಗಿಲ್ಲ. ಇಷ್ಟೆಲ್ಲಾ ತಾಗಿದ ಮೇಲೆ ನಾನು ಸುಮ್ಮನಿರಲು ಸಾಧ್ಯವಿಲ್ಲ. ಉಡುಪಿ ಕ್ಷೇತ್ರದಲ್ಲಿ ಸ್ವಲ್ಪವಾದರೂ ನನ್ನ ಪ್ರಭಾವ ಇಲ್ಲವೇ..? ಸೋತಿಸುವ ತಾಕತ್ತು ಇದೆ. ಎಂದರು. ಎಮ್ಎಲ್ಎ ಅಂದರೆ ಉಡುಪಿ ಬಿಜೆಪಿಯ ಕಾರ್ಯಕರ್ತರು ಭಯದಲ್ಲಿದ್ದಾರೆ. ಜನರ ಕೆಲಸ ಮಾಡುವ ಬದಲು ನನ್ನ ಮೇಲೆ ವೈಯಕ್ತಿಕ ದ್ವೇಷ ಸಾಧನೆ ಮಾಡುತ್ತಿದ್ದಾರೆ ಎಂದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”