ಪ್ರಿಯಾಂಕ್ ಖರ್ಗೆ ಅವರದ್ದು ಕೇವಲ ಅಪ್ಪನ ನೆರಳಿನಲ್ಲಿ ಅಧಿಕಾರ ಅನುಭವಿಸುವ ಪಿತ್ರಾರ್ಜಿತ ರಾಜಕಾರಣ. ಆದರೆ ನನ್ನದು ಸ್ವಂತ ಬಲದಿಂದ ಬೆಳೆದುಬಂದ ಸ್ವಯಾರ್ಜಿತ ರಾಜಕಾರಣ ಎಂದು ಛಲವಾದಿ ನಾರಾಯಣ ಸ್ವಾಮಿ ತಿರುಗೇಟು ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕುಟುಂಬದಲ್ಲಿ ನಿಜವಾದ ದಲಿತತ್ವ ಇದೆಯೇ? ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭಾನುವಾರ ಪ್ರಶ್ನಿಸಿದರು. ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಕೊಟ್ಟ ಕುದುರೆಯನ್ನು ಏರದವ ವೀರನೂ ಇಲ್ಲ. ಶೂರನೂ ಅಲ್ಲ. ಪ್ರಿಯಾಂಕ್ ಖರ್ಗೆ ಅವರದ್ದು ಕೇವಲ ಅಪ್ಪನ ನೆರಳಿನಲ್ಲಿ ಅಧಿಕಾರ ಅನುಭವಿಸುವ ಪಿತ್ರಾರ್ಜಿತ ರಾಜಕಾರಣ ಎಂದರು. ಆದರೆ ನನ್ನದು ಸ್ವಂತ ಬಲದಿಂದ ಬೆಳೆದುಬಂದ ಸ್ವಯಾರ್ಜಿತ ರಾಜಕಾರಣ. ದಲಿತರ ಬಗ್ಗೆ ಮಾತನಾಡುವ ಇವರ ಕುಟುಂಬದಲ್ಲಿ ನಿಜವಾದ ದಲಿತತ್ವ ಇದೆಯೇ? ಸಣ್ಣ ಹಳ್ಳಿಯಿಂದ ಬಂದ ನಾನು ಇಂದು ಬಿಜೆಪಿಯಲ್ಲಿ ಈ ಮಟ್ಟಕ್ಕೆ ಬೆಳೆದಿರುವುದನ್ನು ಕಂಡು ಅವರಿಗೆ ಹೊಟ್ಟೆಯುರಿ ಶುರುವಾಗಿದೆ ಎಂದು ವಾಗ್ದಾಳಿ ನಡೆಸಿದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”