ಮಂಗಳವಾರ, ಉಡುಪಿಯಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

“ಉಡುಪಿ: ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಿಜೆಪಿ ಸರಕಾರದ ಅವಧಿಯಲ್ಲಿದ್ದ ಜೀರ್ಣೋದ್ಧಾರ ಸಮಿತಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿಲ್ಲ. ಈ ಬಗ್ಗೆ ದೇವಸ್ಥಾನದ ರಥಬೀದಿಯಲ್ಲೇ ಚರ್ಚಿಸೋಣ. ನಾವು ಬರುತ್ತೇವೆ, ಸೊರಕೆ ಹಾಗು ಅವರ ಪಟಲಾಂ ತಾಕತ್ತು ಇದ್ದರೇ ಬರಲಿ ಎಂದು ಈ ಹಿಂದಿನ ಜೀರ್ಣೋದ್ಧಾರ ಸಮಿತಿಯ ಸದಸ್ಯ ಸುರೇಶ್ ಶೇರ್ವೇಗಾರ್ ಸವಾಲೆಸೆದಿದ್ದಾರೆ. ”
ಅವರು ಮಂಗಳವಾರ, ಉಡುಪಿಯಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದಿನ ಸಮಿತಿಯನ್ನು ಅವಧಿ ಪೂರ್ಣಗೊಳ್ಳುವ ಮೊದಲೇ ಬರ್ಕಾಸ್ತು ಮಾಡಲಾಯಿತು. ಇದರ ವಿರುದ್ದ ನಾವು ಹೈಕೋರ್ಟ್ ಮೆಟ್ಟಿಲೇರಿದ್ದೇವು. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗಲೇ, ನಮ್ಮ ಅವಧಿ ಪೂರ್ಣಗೊಂಡದ್ದರಿಂದ ಪ್ರಕರಣವನ್ನು ವಜಾಗೊಳಿಸಲಾಗಿದೆ.
ಜೀರ್ಣೋದ್ಧಾರ ಸಮಿತಿಯ ಅವಧಿಯನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕೆಂದು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ಸೂಚಿಸಿತ್ತು. ಅದರಂತೆ ನಮ್ಮ ಜೀರ್ಣೋದ್ಧಾರ ಸಮಿತಿ ಹಾಗು ನೂತನ ವ್ಯವಸ್ಥಾಪನ ಸಮಿತಿಯು ಸೇರಿಕೊಂಡು ಕಾರ್ಯಕ್ರಮ ಮಾಡಬೇಕು, ಇದರ ಜವಾಬ್ದಾರಿಯೂ ಇಓ ಅವರಿಗೆ ನೀಡಲಾಗಿತ್ತು. ಆದರೆ ಸೊರಕೆ ಹಾಗು ಅವರ ತಂಡವು ಸರಕಾರದ ಮೇಲೆ ಒತ್ತಡ ಹೇರಿ ನ್ಯಾಯಾಲಯದ ಆದೇಶ ಧಿಕ್ಕರಿಸಿ, ಜಿಲ್ಲಾಧಿಕಾರಿಯವರ ಪತ್ರವನ್ನು ನಿರಾಕರಿಸಿ ಕಾರ್ಯಕ್ರಮ ಆಯೋಜಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಲಾಲಾಜಿ.ಆರ್.ಮೆಂಡನ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು.
ಜಿರ್ಣೋದ್ದಾರಕ್ಕೆ ತಡೆಯಾಜ್ಞೆ ತಂದಿರುವುದು ಬಿಜೆಪಿ ಹಾಗು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಎಂದು ವಿನಯ್ ಕುಮಾರ್ ಸೊರಕೆಯವರು ಅಪಪ್ರಚಾರ ಮಾಡುತ್ತಿದ್ದಾರೆ. ದೇವಸ್ಥಾನದ ವಿಷಯದಲ್ಲಿ ಈ ರೀತಿಯ ರಾಜಕೀಯ ನಡೆಸುವುದು ಎಷ್ಟು ಸರಿ..?
ಸಾಮಾನ್ಯವಾಗಿ ದೇವಸ್ಥಾನದ ಒಳಭಾಗದ ಕಾರ್ಯಗಳು ಪೂರ್ಣಗೊಂಡ ಬಳಿಕ ಸ್ವಾಗತಗೋಪುರವನ್ನು ರಿಪೇರಿಗೊಳಿಸುತ್ತಾರೆ. ಆದರೆ ಇಲ್ಲಿ ಸ್ವಾಗತಗೋಪುರವನ್ನು ಏಕಾಏಕಿ ತೆರವುಗೊಳಿಸಿರುವುದು ರಾಜಕೀಯ ಪ್ರೇರಿತ ಅಲ್ಲವೇ..? ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ದೇವು ಪೂಜಾರಿ, ಜಿಯಾನಂದ ಹೆಗ್ಡೆ, ಸುಧಾಕರ್ ಶೆಟ್ಟಿ, ಕೃಷ್ಣಾನಂದ ಶೆಟ್ಟಿ ಉಪಸ್ಥಿತರಿದ್ದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”