ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಕಲೆಕ್ಷನ್ ಮಾಷ್ಟರ್

ಉಡುಪಿ: ಉಡುಪಿ ತಾಲೂಕಿನ ಬಡಾನಿಡಿಯೂರು ಗ್ರಾಮದ ಸರ್ವೇ ನಂಬರ್ 118/2ಎ1ಎ3 ಮತ್ತು 118/2ಬಿ ಯ 0.90 ಎಕರೆ ಜಾಗದ ಏಕವಿನ್ಯಾಸ ( ಸಿಂಗಲ್ ಲೇ-ಔಟ್) ಗೆ ಸಲ್ಲಿಸಿದ ಅರ್ಜಿಯನ್ನು ನಗರಾಭಿವೃದ್ದಿ ಪ್ರಾಧಿಕಾರವು 2 ವರ್ಷವಾದರೂ ಅನುಮತಿ ನೀಡಿಲ್ಲ. ಹೀಗಾಗಿ ಮಾ.23 ರಿಂದ ಬೆಳಗ್ಗೆ 9.30 ಯಿಂದ ಸಂಜೆ 6 ಗಂಟೆಯವರೆಗೆ ನ್ಯಾಯಸಿಗುವವರೆಗೆ ಧರಣಿ ಕೂರುತ್ತೇನೆ ಎಂದು ಮಾಜಿ ಶಾಸಕ ರಘುಪತಿ ಭಟ್ ಎಂದು ಉಯಿಲು ಹೊರಡಿಸಿದ್ದಾರೆ. ಅವರು ಶನಿವಾರ, ತಮ್ಮ ಸ್ವಗೃಹದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಗರಾಭಿವೃದ್ದಿ ಪ್ರಾಧಿಕಾರದ ಕಚೇರಿ ಸಮಯದಲ್ಲಿ ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ಪ್ರತಿದಿನ ಶಾಂತಿಯುತವಾಗಿ ಧರಣಿ ನಡೆಸುತ್ತೇನೆ. ಸಿಂಗಲ್ ಲೇ ಔಟ್ ಕೊಡಲಿ ಅಥವಾ ಯಾಕೆ ಕೊಡಲು ಸಾಧ್ಯವಿಲ್ಲ ಎಂದು ಹಿಂಬರಹ ಕೊಡಲಿ. ಅಲ್ಲಿಯವರೆಗೆ ನಾನು ಧರಣಿ ಕೂರುತ್ತೇನೆ ಎಂದರು. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಹಾಗು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರೇ ಸುಪ್ರೀಂ ಎಂದು ನೋಡೋಣ. ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕಲೆಕ್ಷನ್ ಮಾಷ್ಟರ್. 100 ಕ್ಕೆ 100 ಮನೆಗೆ ಹೋಗುವುದು ಗ್ಯಾರೆಂಟಿ ಎಂದರು. 20-3-2024 ಕ್ಕೆ ಸಿಂಗಲ್ ಲೇ-ಔಟ್ ಗಾಗಿ ಅಧಿಕೃತ ಅರ್ಜಿ ಹಾಕಿ, ಎರಡು ವರ್ಷವಾದರೂ ಸಿಕ್ಕಿಲ್ಲ. ಹೈಕೋರ್ಟ್ನಿಂದ 30 ದಿನದಲ್ಲಿ ನೀಡಲು ನಿರ್ದೇಶನ ನೀಡಿದರೂ, ಆದೇಶವನ್ನು ಗಣನೆಗೆ ತೆಗೆದುಕೊಂಡಿಲ್ಲ. 20-2-2026 ಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಂದ ನಿರ್ದೇಶನ ಬಂದರೂ ಕೊಟ್ಟಿಲ್ಲ. 14-1-2026 ಕ್ಕೆ ಸರಕಾರದ ಅಧೀನ ಕಾರ್ಯದರ್ಶಿ ( ಅಭಿವೃದ್ಧಿ ಪ್ರಾಧಿಕಾರ ಮತ್ತು ನಯೋಸೆ) ನಗರಾಭಿವೃದ್ಧಿ ಇಲಾಖೆಯವರು ನಿರ್ದೇಶಿಸಿದರು ಉಡುಪಿಯ ಆಯುಕ್ತರು ಮಾತ್ರ ಖ್ಯಾರೇ ಎನ್ನುತ್ತಿಲ್ಲ ಎಂದರು. ಶಾಸಕ ಯಶ್ಪಾಲ್ ಸುವರ್ಣ ಅವರು ನನ್ನ ಮೇಲೆ ವೈಯಕ್ತಿಕ ದ್ವೇಷ ಸಾಧನೆ ಮಾಡುತ್ತಿದ್ದು ಅವರು, 2024 ಮಾ.7 ರಂದು ಪ್ರಾಧಿಕಾರಕ್ಕೆ ಕೊಟ್ಟ ದೂರಿಗೆ, ತನಿಖೆಯೂ ನಡೆದು, ಅವರ ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂದು ಸಾಭೀತಾಗಿದೆ ಎಂದರು. ಧಾರ್ಮಿಕ ಮುಖಂಡ ಮಹೇಶ್ ಠಾಕೂರ್ ಜೊತೆಗಿದ್ದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”