ಅಮೆರಿಕದ ಪ್ರಮುಖ ಸಮುದಾಯಗಳ ಶೈಕ್ಷಣಿಕ ಸಾಧನೆಯನ್ನು ಪ್ಯೂ ರಿಸರ್ಚ್ ಸೆಂಟರ್ ಪರೀಕ್ಷಿಸಿದ್ದು, ಹಿಂದೂಗಳೇ ಹೆಚ್ಚಿನ ಸುಶಿಕ್ಷಿತ ಸಮುದಾಯವಾಗಿದೆ.
ಅಮೆರಿಕದಲ್ಲಿ ಹಿಂದೂಗಳೇ ಹೆಚ್ಚಿನ ಸುಶಿಕ್ಷಿತ ಸಮುದಾಯ (most highly educated religious) ಎಂದು ಅಮೆರಿಕ ಮೂಲದ ಥಿಂಕ್ ಟ್ಯಾಂಕ್ Pew ರಿಸರ್ಚ್ ಸೆಂಟರ್ ಹೇಳಿದೆ. ಅಮೆರಿಕದ ಪ್ರಮುಖ ಸಮುದಾಯಗಳ ಶೈಕ್ಷಣಿಕ ಸಾಧನೆಯನ್ನು ಪ್ಯೂ ರಿಸರ್ಚ್ ಸೆಂಟರ್ ಪರೀಕ್ಷಿಸಿದ್ದು, ಹಿಂದೂಗಳೇ ಹೆಚ್ಚಿನ ಸುಶಿಕ್ಷಿತ ಸಮುದಾಯವಾಗಿದೆ. ತದನಂತರ ಯಹೂದಿಗಳಿದ್ದಾರೆ. 2023-24 ರ ಧರ್ಮಗಳ ಸ್ವರೂಪ ಅಧ್ಯಯನ (Religious Landscape Study) ಅಮೆರಿಕದಲ್ಲಿನ ಧರ್ಮಗಳು ಮತ್ತು ಸಾರ್ವಜನಿಕ ಜೀವನದ ಸಮಗ್ರ ಅಧ್ಯಯನಗಳಲ್ಲಿ ಒಂದಾಗಿದೆ. ಅಮೆರಿಕದಲ್ಲಿನ ಒಟ್ಟು ಶೇ. 35 ರಷ್ಟು ಯುವಜನಾಂಗಕ್ಕೆ ಹೋಲಿಸಿದರೆ, 10 ಮಂದಿ ಹಿಂದೂಗಳಲ್ಲಿ ಏಳು ಮಂದಿ (ಶೇ.70) ಮತ್ತು ಶೇ. 65 ರಷ್ಟು ಮಂದಿ ಯಹೂದಿಗಳು ಸ್ನಾತಕೋತ್ತರ ಪದವಿ ಅಥವಾ ಅತ್ಯುನ್ನತ ಶಿಕ್ಷಣವನ್ನು ಹೊಂದಿದ್ದಾರೆ ಎಂದು ಫೆಬ್ರವರಿ 19 ರಂದು ಪ್ರಕಟವಾದ ಅಧ್ಯಯನದಲ್ಲಿ ಹೇಳಲಾಗಿದೆ. ಪ್ಯೂ ಪ್ರಕಾರ, ಒಟ್ಟಾರೆ US ವಯಸ್ಕರಲ್ಲಿ 10 ಜನರಲ್ಲಿ ನಾಲ್ವರು ಸ್ನಾತಕೋತ್ತರ ಪದವಿ ಅಥವಾ ಹೆಚ್ಚಿನ ಶಿಕ್ಷಣ ಹೊಂದಿದವರಾಗಿದ್ದಾರೆ. ಇದು ಧಾರ್ಮಿಕ ಸಮುದಾಯಗಳ ನಡುವಿನ ವ್ಯಾಪಕ ಶೈಕ್ಷಣಿಕ ಅಂತರವನ್ನು ಒತ್ತಿಹೇಳುತ್ತದೆ. ವಲಸೆ ಮತ್ತು ಜನಸಂಖ್ಯಾ ಮಾದರಿಗಳು ಈ ವ್ಯತ್ಯಾಸಗಳನ್ನು ವಿವರಿಸಲು ನೆರವಾಗಿದೆ. ವಿಶೇಷವಾಗಿ ಹಿಂದೂಗಳು, ಮುಸ್ಲಿಮರು ಮತ್ತು ಬೌದ್ಧರಲ್ಲಿ ಹೆಚ್ಚಿನವರು ಉನ್ನತ ಶಿಕ್ಷಣ ಅಥವಾ ಕೌಶಲ್ಯ ಕೆಲಸದಿಂದ ಅಮೆರಿಕಕ್ಕೆ ಬಂದವರಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”