ಆರೋಪಿಗಳ ಜಾಮೀನುಗಳನ್ನು ರದ್ದು ಪಡಿಸಿ ಬಂಧಿಸಲಾಗಿದೆ

ಕಾರ್ಕಳ: ಇಲ್ಲಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿಯಲ್ಲಿನ ಜಯಶ್ರೀ ಎಂಬವರಿಗೆ 2025 ರ ಸೆ.29 ರಂದು ಮುಂಜಾನೆ ತಲಾವರು ತೋರಿಸಿ, ಹಟ್ಟಿಯಲ್ಲಿದ್ದ ಮೂರು ದನಗಳನ್ನು ಕದ್ದೊಯ್ದ ಪ್ರಕರಣದ ನಾಲ್ವರು ಆರೋಪಿಗಳ ವಿರುದ್ದ ಕೋಕಾ ಕಾಯ್ದೆ ವಿಧಿಸಿ ಅಜೆಕಾರು ಪೋಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನಲ್ಲೂರು ಗ್ರಾಮದ ಮೊಹಮ್ಮದ್ ಯೂನಿಸ್(31), ಪುತ್ತಿಗೆ ಗ್ರಾಮದ ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಕು (29), ಕಲ್ಲಬೆಟ್ಟು ಗ್ರಾಮದ ಮೊಹಮ್ಮದ್ ನಾಸಿರ್(28) ಹಾಗು ಶೌಕತ್ ಆಲಿ (36) ಎಂದು ಗುರುತಿಸಲಾಗಿದೆ. ಈ ಪ್ರಕರಣವನ್ನು ತನಿಖೆ ನಡೆಸಿದ ಸಿಪಿಐ ಕಾರ್ಕಳರವರು ಅರೋಪಿಗಳಾದ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ. ನಂತರದಲ್ಲಿ ಜಾಮೀನು ಮೂಲಕ ನ್ಯಾಯಾಂಗ ಬಂಧನದಿಂದ ಹೊರ ಬಂದಿರುತ್ತಾರೆ. ಮುಂದಿನ ತನಿಖೆಯಲ್ಲಿ ಆರೋಪಿಗಳು ಸಂಘಟಿತರಾಗಿ ಕೃತ್ಯವನ್ನು ನಡೆಸಿರುವುದು ತಿಳಿದು ಬಂದಿರುವುದರಿಂದ ಆರೋಪಿಗಳ ವಿರುದ್ಧ ಕೋಕಾ ಕಾಯಿದೆಯನ್ನು ಆಳವಡಿಸಲಾಗಿರುತ್ತದೆ. ನಂತರದಲ್ಲಿ ಈಗಾಗಲೇ ನ್ಯಾಯಾಲಯದ ಜಾಮೀನು ಮೂಲಕ ಹೊರ ಬಂದಿರುವ ಎಲ್ಲಾ ಆರೋಪಿಗಳ ಜಾಮೀನುಗಳನ್ನು ರದ್ದು ಪಡಿಸಿ ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುತ್ತಾರೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”