ಕಲ್ಲೊಟ್ಟು ಸೇತುವೆ ಕೆಳಭಾಗದಲ್ಲಿ ನಡೆದ ಘಟನೆ

ಶಿರ್ವ: ಇಲ್ಲಿನ ಕಲ್ಲೊಟ್ಟು ಸೇತುವೆ ಕೆಳಭಾಗದಲ್ಲಿ ಹರಿಯುವ ಪಾಪನಾಶಿನಿ ಹೊಳೆಗೆ ಕಿಡಿಗೇಡಿಗಳು ದನದ ರುಂಡ ಹಾಗು ಕಳೇಬರವನ್ನು ಎಸೆದಿರುವುದು ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಹೊಳೆಯಲ್ಲಿ ದನದ ರುಂಡ ಪತ್ತೆಯಾಗುತ್ತಿದ್ದಂತೆ ಸ್ಥಳಕ್ಕೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಆಗಮಿಸಿ, ಪೋಲಿಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಶಿರ್ವಾ ಠಾಣಾ ಪಿಎಸ್ಐ ಮಂಜುನಾಥ್ ಮರಬದ ಹಾಗು ಸಿಬ್ಬಂದಿ ಪರಿಶೀಲನೆ ನಡೆಸಿದರು. ಸೋಕೊ ತಂಡವು ದನದ ರುಂಡ ಹಾಗು ಕಳೇಬರವನ್ನು ವಶಕ್ಕೆ ಪಡೆದು ಸ್ಥಳದಲ್ಲಿ ಪರಿಶೀಲನೆ ನಡೆಸಿದರು.
“ರುಂಡ ಪತ್ತೆಯಾದ ಸ್ಥಳದಿಂದ 100 ಮೀ ವ್ಯಾಪ್ತಿಯಲ್ಲಿ ಶಿರ್ವ ವಿಷ್ಣುಮೂರ್ತಿ ದೇವರು, ಸೂಡ ಸುಬ್ರಹ್ಮಣ್ಯ ದೇವರ ಜಳಕವೂ ಇದೇ ಹೊಳೆಯಲ್ಲಿ ನಡೆಯುತ್ತದೆ. ಮಟ್ಟಾರು, ಪಂಜಿಮಾರು, ಪಡುಬೆಳ್ಳೆ ಗಣೇಶೋತ್ಸವ ಸಮಿತಿಯ ಗಣೇಶ ವಿಸರ್ಜನೆ ಸೇರಿದಂತೆ ಅನೇಕ ಗಣಪತಿಯನ್ನು ಇದೇ ಹೊಳೆಯಲ್ಲಿ ವಿರ್ಸಜನೆ ಮಾಡಲಾಗುತ್ತದೆ. ”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”