ಶರತ್ ಎಂಬಾತನಿಂದ ಕೃತ್ಯ

ಉಡುಪಿ: ಯುವತಿಗೆ ಬೆದರಿಸಿ 14 ಲಕ್ಷ ರೂ. ಹಣ ಪಡೆದು ಕೊಂಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಪಳ್ಳಿಯ ಮಹಿಮಾ(22) ಎಂಬವರಿಗೆ ಶರತ್ ಎಂಬಾತ ಬೇರೆ ಬೇರೆ ಸಮಸ್ಯೆಗಳನ್ನು ಹೇಳಿಕೊಂಡು ಹಣವನ್ನು ಪಡೆದುಕೊಳ್ಳುತ್ತಿದ್ದನು. ಮಹಿಮಾ ಹಣವನ್ನು ವಾಪಸ್ಸು ಕೇಳಿದಾಗ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದು, 2026ರ ಫೆಬ್ರವರಿಯಲ್ಲಿ ಶರತ್ ಕರೆ ಮಾಡಿ ತಂದೆಗೆ ಹುಷಾರಿಲ್ಲ 15,00,000 ರೂ. ಹಣ ಕೊಡುವಂತೆ ಕೇಳಿದ್ದನು. ಅದಕ್ಕೆ ಶರತ್, ಆಕೆಗೆ ಅವಾಚ್ಯ ಶಬ್ದಗಳಿಂದ ಬೈದು ನೀನು ಹಣ ಕೊಡದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ ಎನ್ನಲಾಗಿದೆ. ಇದರಿಂದ ಭೀತಿಗೊಂಡ ಮಹಿಮಾ ಆತನಿಗೆ 14 ಲಕ್ಷ ರೂ. ಹಣವನ್ನು ಒತ್ತಾಯಪೂರ್ವಕವಾಗಿ ನೀಡಿದ್ದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”