20 ಕ್ಕೂ ಹೆಚ್ಚು ಪ್ರಕರಣಗಳ ಆರೋಪಿ ಸೈಯದ್ ಆಲಿಯಿಂದ ಲವ್ ಜಿಹಾದ್

“ಉಡುಪಿ: ಆ ಮಾಯಾ ನಗರಿಯಲ್ಲಿ ಕಾಲ ಸ್ತಂಭಿಸಿತ್ತು. 25 ರ ವಯಸ್ಸಿನ ಯುವತಿ ಶಿಲೆಯಂತೆ ನಿಂತುಬಿಟ್ಟಿದ್ದಳು. ಅವಳ ಪ್ರಯತ್ನಗಳೆಲ್ಲಾ ವಿಫಲವಾಗಿ ಕಣ್ಣು ತುಂಬಿದ ನೀರು ಕೆನ್ನೆಗಿಳಿದಿದ್ದವು. ಆಕೆಯ ಮನಸ್ಸು ಪಂಜರಕ್ಕೆ ಬಡಿದು ನೆಲಕ್ಕೆ ಬಿದ್ದ ಪಕ್ಷಿಯಂತಾಗಿ, ಮಹಿಳಾ ಠಾಣೆಯ ಮೆಟ್ಟಿಲನ್ನೇರಿದ್ದಾಳೆ. ”
ಉಡುಪಿ ಮಹಿಳಾ ಠಾಣೆಯ ಮೆಟ್ಟಿಲೇರಿದ ಯುವತಿ ಹೇಳಿದ ಸಂಗತಿಗಳು ಯಾವ ಕೇರಳ ಸ್ಟೋರಿಗೂ ಕಡಿಮೆ ಇರಲಿಲ್ಲ. "ಜುಂಬಾ" ಡ್ಯಾನ್ಸ್ ಕ್ಲಾಸ್ನಲ್ಲಿ ಹಿಂದೂವಿನ ಹೆಸರನ್ನು ಹೇಳಿಕೊಂಡು ಗೆಳೆತನ ಮಾಡಿದ ಸೈಯದ್ ಅಲಿ ಅತ್ಯಂತ ಯಶಸ್ವಿಯಾಗಿ ಲವ್ ಜಿಹಾದ್ ಬಲೆಗೆ ಯುವತಿಯನ್ನು ಬೀಳಿಸಿಕೊಂಡಿದ್ದನು. ಆದರೆ ಯುವತಿಯೂ ಎಚ್ಚೆತ್ತುಕೊಂಡು ದೂರು ನೀಡಿದ್ದು, ಸಂತ್ರಸ್ತೆಯೂ ಬಿಚ್ಚಿಟ್ಟ ಭಯಾನಕ ಮಾಹಿತಿಯನ್ನು ಓದುಗರ ಮುಂದೆ ಇಡುತ್ತಿದ್ದೇವೆ.
2019 ರಲ್ಲಿ ಸಂತ್ರಸ್ತ ಯುವತಿಯೂ ಬೆಂಗಳೂರಿನಲ್ಲಿರುವಾಗ "ಹರ್ಷ" ಎಂಬ ಹೆಸರಿನಲ್ಲಿ ಪರಿಚಯವಾಗಿ ಇಬ್ಬರು ಪ್ರೀತಿಸುತ್ತಿದ್ದರು. ನಂತರ ಆತನ ಹೆಸರು "ಸೈಯದ್ ಅಲಿ" ಎಂದು ತಿಳಿದು ಅವನಿಂದ ದೂರವಾದಳು
ತನ್ನಿಂದ ದೂರವಾದ ಯುವತಿಯನ್ನು ಪಡೆಯಲೇಬೇಕು ಎಂದು ಆಕೆಯ ಇನ್ಸ್ಟಾಗ್ರಾಮ್ ಹಾಗು ಜಿ-ಮೇಲ್ ಖಾತೆಗಳನ್ನು ಹ್ಯಾಕ್ ಮಾಡಿದ್ದು, "ಬೆಂಗಳೂರಿನ ಜೀವಾಭೀಮ ನಗರ ಪೋಲಿಸ್ ಠಾಣೆ"ಯಲ್ಲಿ ದೂರು ಅರ್ಜಿ ವಿಚಾರಣೆ ನಡೆದಿತ್ತು. ಆದರೂ ನಿರಂತರವಾಗಿ ಕಿರುಕುಳ ನೀಡುತ್ತಿದ್ದನು.
ಆತನ ಕಿರುಕುಳ ತಾಳಲಾರದೇ 2024 ರಲ್ಲಿ ಬೆಂಗಳೂರು ತೊರೆದು ಉಡುಪಿ ಜಿಲ್ಲೆಯಲ್ಲಿರುವ ತನ್ನ ಮನೆಗೆ ವಾಪಾಸಾದ ಬಳಿಕವು ನಿರಂತರವಾಗಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದನು. ಅಲ್ಲದೇ ಮಣಿಪಾಲಕ್ಕೆ ನಿನ್ನನ್ನು ಹಿಂಬಾಲಿಸಿಕೊಂಡು ಬಂದಿದ್ದೇನೆ ಎಂದು ವಿಡಿಯೋ ಮಾಡಿ ಕಳುಹಿಸಿದ್ದಾನೆ. ವ್ಯಾಟ್ಸಾಪ್ನಲ್ಲಿ ಗ್ರೂಪ್ ಮಾಡಿ, ಯುವತಿಯ ಪೋಟೋವನ್ನು ಅಪ್ಲೋಡ್ ಮಾಡಿ ಡಿಲೀಟ್ ಮಾಡಿ ಬೆದರಿಸಿ, ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾನೆ. ಲೈಂಗಿಕ ಕ್ರಿಯೆಗೆ ಬರುವಂತೆ ನಿರಂತರ ಕಿರುಕುಳ ನೀಡುತ್ತಿದ್ದನು ಎಂದು ಯುವತಿಯೂ ನೀಡಿದ ದೂರಿನಲ್ಲಿ ವಿವರಿಸಿದ್ದಾಳೆ.
“ಆರೋಪಿ ಸೈಯದ್ ವಿರುದ್ದ 2024 ರಲ್ಲಿ ಧಾರವಾಡದ ಕೇಶವಪುರ ಠಾಣೆಯಲ್ಲಿ 1, 2025 ರಲ್ಲಿ ಸುರತ್ಕಲ್ ಠಾಣೆಯಲ್ಲಿ 1, ಶ್ರೀರಂಗಪಟ್ಟಣ ಠಾಣೆಯಲ್ಲಿ 1, ಮಾದನಾಯಕನಹಳ್ಳಿ ಠಾಣೆಯಲ್ಲಿ 1, 2026 ರಲ್ಲಿ ಬೆಂಗಳೂರಿನ ಹುಳಿಮಾವು ಠಾಣೆಯಲ್ಲಿ 1, ಅವಲಹಳ್ಳಿ ಠಾಣೆಯಲ್ಲಿ 1, ಧಾರವಾಡದ ಕೇಶವಪುರ ಠಾಣೆಯಲ್ಲಿ 2 ಹಾಗು ಹುಬ್ಬಳ್ಳಿ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ 10 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಬೆಂಗಳೂರಿನ ತಿಲಕ್ ನಗರ ಠಾಣೆಯಲ್ಲಿ ಐಟಿ ಆ್ಯಕ್ಟ್ ನಲ್ಲಿಯೂ ಪ್ರಕರಣ ದಾಖಲಾಗಿದ್ದು, ಒಟ್ಟು 20 ಕ್ಕೂ ಹೆಚ್ಚು ಕೇಸ್ಗಳಿವೆ. ”
“ಪ್ರಕರಣದ ಮಾಹಿತಿ ಪಡೆದ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಅವರು ಸೂಕ್ತ ಮಾರ್ಗದರ್ಶನ ನೀಡಿ, ಆರೋಪಿಯ ಊರಾದ ಗದಗ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ತಂಡವನ್ನು ಕಳುಹಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ. ”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”