ಬೆಳಪುವಿನ ನಿವಾಸಿಗಳಾದ ಝಹೀರ್ ಅಹ್ಮದ್ (66), ಸಯ್ಯದ್ ಶಮೀಮ್ (28) ಬಂಧಿತ ಆರೋಪಿಗಳು

ಉಡುಪಿ: ಇಲ್ಲಿನ ಕಾಪು ತಾಲೂಕಿನ ಪಾದೂರು ಗ್ರಾಮದ ಚಂದ್ರನಗರ ಜನತಾ ಕಾಲೋನಿಯ ಬಳಿ ಮಾರಾಟಕ್ಕೆಂದು ತರುತ್ತಿದ್ದ ಎಮ್ಡಿಎಮ್ಎ ಮಾದಕ ವಸ್ತುವನ್ನು ಶಿರ್ವ ಪೋಲಿಸರು ಬಂಧಿಸಿದ್ದಾರೆ. ಆರೋಪಿಯನ್ನು ಬೆಳಪುವಿನ ನಿವಾಸಿಗಳಾದ ಝಹೀರ್ ಅಹ್ಮದ್ (66), ಸಯ್ಯದ್ ಶಮೀಮ್ (28) ಎಂದು ಗುರುತಿಸಲಾಗಿದೆ. ಮಾ.6 ರಂದು ಕಾಪು ತಾಲೂಕಿನ ಪಾದೂರು ಗ್ರಾಮದ ಚಂದ್ರನಗರ ಜನತಾ ಕಾಲೋನಿ ಎಂಬಲ್ಲಿ ಬರುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸ್ ಉಪನಿರೀಕ್ಷಕ ಮಂಜುನಾಥ್ ಮರಬದ ಅವರ ನೇತೃತ್ವದಲ್ಲಿ ಠಾಣಾ ಸಿಬ್ಬಂದಿಯವರೊಂದಿಗೆ ಚಂದ್ರನಗರ ಜನತಾ ಕಾಲೋನಿ ಬಳಿಗೆ ತಲುಪಿದಾಗ ಕಾಪು - ಶಿರ್ವ ಸಾರ್ವಜನಿಕ ರಸ್ತೆಯ ಬದಿ ನಿಂತಿದ್ದ ಕಾರನ್ನು ಪರಿಶೀಲನೆ ಮಾಡಿದಾಗ, ಕಾರಿನ ಒಳಗಡೆ ಇದ್ದ ಜಹೀರ್ ಅಹ್ಮದ್ನನ್ನು ವಶಕ್ಕೆ ಪಡೆದು 2.83 ಗ್ರಾಂ ತೂಕದ ಎಮ್ಡಿಎಮ್ಎ ಮಾದಕ ವಸ್ತು, ಮೊಬೈಲ್ ಫೋನ್ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಉಡುಪಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ್.ಎಸ್.ನಾಯ್ಕ್ ರವರ ನಿರ್ದೇಶನದಂತೆ, ಕಾರ್ಕಳ ಪೊಲೀಸ್ ಉಪಾಧೀಕ್ಷಕ ವಿಜಯ್ ಪ್ರಸಾದ್, ಕಾಪು ವೃತ್ತನಿರೀಕ್ಷಕ ಆಝಮತ್ ಆಲಿರವರ ಮಾರ್ಗದರ್ಶನದಲ್ಲಿ ಶಿರ್ವ ಪೊಲೀಸ್ ಠಾಣಾ ಪಿಎಸ್ಐಗಳಾದ ಮಂಜುನಾಥ ಮರಬದ, ಲೋಹಿತ್ ಕುಮಾರ್ ಸಿಎಸ್ ಹಾಗೂ ಠಾಣಾ ಸಿಬ್ಬಂದಿಗಳು ಹಾಗೂ ಅಪರಾಧ ಪರಿಶೀಲನಾಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”