ತೇಜಸ್ ಶೆಟ್ಟಿ ಕಿಡ್ನಾಪ್ ಪ್ರಕರಣದ ಆರೋಪಿ

ಉಡುಪಿ: ಜಿಲ್ಲೆಯ ಸಿದ್ದಾಪುರದ ಉದ್ಯಮಿ ಮೋಹನದಾಸ್ ಶೆಟ್ಟಿ ಅವರ ಮಗ ತೇಜಸ್ನನ್ನು 2025 ರ ನ.19 ರಂದು ಸಾಸ್ತಾದ ಬಳಿ ಅಪಹರಣ ಗೈದ ಆರೋಪಿಗಳ ಪೈಕಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ರೌಡಿಶೀಟರ್ ಮನೋಜ್ ಕೋಡಿಕೆರೆಯನ್ನು ಗೋವಾದಲ್ಲಿ ಕುಂದಾಪುರ ಡಿವೈಎಸ್ಪಿಯವರ ನೇತೃತ್ವದ ತಂಡ ಬಂಧಿಸಿದೆ. ಮನೋಜ್ ಕೋಡಿಕೆರೆ ಹಾಗು ಚೇತನ್ ಪಡೀಲ್ ಅವರನ್ನು ಹುಡುಕಿ ಕೊಟ್ಟವರಿಗೆ ₹ 50 ಸಾವಿರ ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಘೋಷಿಸಿದ್ದರು. ಅದರಂತೆ ಇಬ್ಬರು ಆರೋಪಿಗಳನ್ನು ಬಂಧಿಸಲು ಮಾಹಿತಿ ನೀಡಿದ ಖಬ್ರಿಗೆ ₹ 50 ಸಾವಿರ ನೀಡಲಾಗಿದೆ ಎಂದು ಜಿಲ್ಲಾ ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ದೇವಿಪ್ರಸಾದ್ ಶೆಟ್ಟಿ ಅಲಿಯಾಸ್ ದೀಕ್ಷಿತ್ (33), ಸುಜಿತ್(27), ಸುದೀಪ (22), ಶ್ರೀಷಾ ಆನಂದ ಶೆಟ್ಟಿ @ ಶ್ರೀಷಾ (35), ಮಿಥುನ್ @ ಮಿಥುನ್ ಕೈಕಂಬ (20), ಸುಹಾಸ್ (31), ಮನೋಜ್ ವಿ. ಕೊಟ್ಯಾನ್ (34) ಬಂಧಿಸಲಾಗಿದ್ದು, ಇವರೆಲ್ಲರ ಮೇಲೆ ಕೋಕಾ ಕಾಯ್ದೆಯನ್ನು ಅಳವಡಿಸಲಾಗಿದೆ. ಆರೋಪಿ ಮನೋಜ ಕೋಡಿಕೆರೆ ವಿರುದ್ಧ ಮಂಗಳೂರು ನಗರ ವ್ಯಾಪ್ತಿಯಲ್ಲಿ 18 ಪ್ರಕರಣಗಳು ಮತ್ತು ಉಡುಪಿ ಜಿಲ್ಲೆಯಲ್ಲಿ 2 ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿ ಚೇತನ್ ಪಡೀಲ್ ಇತನ ವಿರುದ್ಧ ಮಂಗಳೂರು ನಗರ ವ್ಯಾಪ್ತಿಯಲ್ಲಿ 11 ಪ್ರಕರಣಗಳು ಮತ್ತು ಉಡುಪಿ ಜಿಲ್ಲೆಯಲ್ಲಿ 2 ಪ್ರಕರಣಗಳು ದಾಖಲಾಗಿರುತ್ತದೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”