ಮನೋಜ್ ಕೋಡಿಕೆರೆ ಹಾಗು ಚೇತನ್ ಪಡೀಲ್ ಮಾಹಿತಿ ನೀಡಿದವರಿಗೆ ₹ 50 ಸಾವಿರ ಬಹುಮಾನ
ಉಡುಪಿ: ಜಿಲ್ಲೆಯ ಸಿದ್ದಾಪುರದ ಉದ್ಯಮಿ ಮೋಹನದಾಸ್ ಶೆಟ್ಟಿ ಅವರ ಮಗ ತೇಜಸ್ನನ್ನು 2025 ರ ನ.19 ರಂದು ಸಾಸ್ತಾದ ಬಳಿ ಅಪಹರಣ ಗೈದ ಆರೋಪಿಗಳ ಪೈಕಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ರೌಡಿಶೀಟರ್ ಮನೋಜ್ ಕೋಡಿಕೆರೆಯನ್ನು ಹುಡುಕಿ ಕೊಟ್ಟವರಿಗೆ ₹ 50 ಸಾವಿರ ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಘೋಷಿಸಿದ್ದಾರೆ. ಪ್ರಕರಣದಲ್ಲಿ ಮನೋಜ್ ಕೋಡಿಕೆರೆ (42) ಹಾಗು ಚೇತನ್ ಪಡೀಲ್ (38) ತಲೆಮರೆಸಿಕೊಂಡಿದ್ದು, ಇವರ ಬಗ್ಗೆ ಮಾಹಿತಿ ನೀಡಿದವರ ವಿಳಾಸವನ್ನು ಗೌಪ್ಯವಾಗಿ ಇಡಲಾಗುವುದು. ಕುಂದಾಪುರ ಡಿವೈಎಸ್ಪಿ ಹೆಚ್ಡಿ ಕುಲಕರ್ಣಿಯವರಿಗೆ 9480805422 ಮಾಹಿತಿಯನ್ನು ನೀಡಲು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಈಗಾಗಲೇ ಈ ಪ್ರಕರಣದಲ್ಲಿ ಬಂಧಿತರಾಗಿರುವ ದೇವಿಪ್ರಸಾದ್ ಶೆಟ್ಟಿ ಅಲಿಯಾಸ್ ದೀಕ್ಷಿತ್ (33), ಸುಜಿತ್(27), ಸುದೀಪ (22), ಶ್ರೀಷಾ ಆನಂದ ಶೆಟ್ಟಿ @ ಶ್ರೀಷಾ (35), ಮಿಥುನ್ @ ಮಿಥುನ್ ಕೈಕಂಬ (20), ಸುಹಾಸ್ (31), ಮನೋಜ್ ವಿ. ಕೊಟ್ಯಾನ್ (34) ಬಂಧಿಸಲಾಗಿದ್ದು, ಇವರೆಲ್ಲರ ಮೇಲೆ ಕೋಕಾ ಕಾಯ್ದೆಯವನ್ನು ಅಳವಡಿಸಲಾಗಿದೆ. ಆರೋಪಿ ಮನೋಜ ಕೋಡಿಕೆರೆ ವಿರುದ್ಧ ಮಂಗಳೂರು ನಗರ ವ್ಯಾಪ್ತಿಯಲ್ಲಿ 18 ಪ್ರಕರಣಗಳು ಮತ್ತು ಉಡುಪಿ ಜಿಲ್ಲೆಯಲ್ಲಿ 2 ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿ ಚೇತನ್ ಪಡೀಲ್ ಇತನ ವಿರುದ್ಧ ಮಂಗಳೂರು ನಗರ ವ್ಯಾಪ್ತಿಯಲ್ಲಿ 11 ಪ್ರಕರಣಗಳು ಮತ್ತು ಉಡುಪಿ ಜಿಲ್ಲೆಯಲ್ಲಿ 2 ಪ್ರಕರಣಗಳು ದಾಖಲಾಗಿರುತ್ತದೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”