ಸಮಾಜಸೇವಕ ನಿತ್ಯಾನಂದ ಒಳಕಾಡುವರ ನೇತ್ರತ್ವದಲ್ಲಿ ಕಳೇಬರ ಮೇಲಕೆತ್ತುವ ಕಾರ್ಯಚರಣೆ
ಮಲ್ಪೆ: ಬಂದರಿನ 3 ನೇ ಟಿ ದಕ್ಕೆಯ ಬಳಿ, ಅಪರಿಚಿತ ಪುರುಷನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಮಲ್ಪೆ ಪೋಲಿಸ್ ಠಾಣೆಯ ನಾಗರಾಜ್, ಮಲ್ಲಿಕಾ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಸಮಾಜಸೇವಕ ನಿತ್ಯಾನಂದ ಒಳಕಾಡುವರ ನೇತ್ರತ್ವದಲ್ಲಿ ಕಳೇಬರ ಮೇಲಕೆತ್ತುವ ಕಾರ್ಯಚರಣೆಗೆ ಹರೀಶ್ ಪೂಜಾರಿ, ಭುವನೇಶ್ ಶಿರಿಯಾನ್ ಸಹಕರಿಸಿದರು. ಕಳೇಬರವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದೆ. ಮೃತ ವ್ಯಕ್ತಿಯ ಹೆಸರು ವಿಳಾಸ ತಿಳಿದುಬಂದಿಲ್ಲ ವಾರಸುದಾರರು ಮಲ್ಪೆ ಪೋಲಿಸ್ ಠಾಣೆಯ ನಾಗರೀಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”